ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ

Public TV
2 Min Read

ಇಟಾನಗರ: ಗಡಿ ಪ್ರದೇಶದಲ್ಲಿ ಇದೀಗ ಮತ್ತೆ ಚೀನಾ (China) ಕಿರಿಕ್ ಆರಂಭಿಸಿದೆ. ಚೀನಾ ವಾಯುಪ್ರದೇಶವನ್ನು  ಉಲ್ಲಂಘಿಸುತ್ತಿದೆ. ಹಾಗಾಗಿ ವಾಯಪ್ರದೇಶ ಉಲ್ಲಂಘನೆಯಾಗುತ್ತದೆಯೇ ಎಂದು ಪರೀಕ್ಷಿಸಲು ಭಾರತೀಯ ವಾಯುಪಡೆ ಅರುಣಾಚಲ ಪ್ರದೇಶದಲ್ಲಿ (Arunachal Pradesh) ಯುದ್ಧ ಗಸ್ತು ಆರಂಭಿಸಿದೆ ಎಂದು ವರದಿಯಾಗಿದೆ.

ಅರುಣಾಚಲ ಪ್ರದೇಶದ ತವಾಂಗ್‍ನಲ್ಲಿ ಭಾರತ-ಚೀನಾ ಗಡಿ ಸಂಘರ್ಷದ (India-China Clash) ನಂತರ ಯುದ್ಧ ವಿಮಾನಗಳನ್ನು ಎರಡು ಮೂರು ಬಾರಿ ಗಸ್ತು ತಿರುಗಿಸಲಾಗಿದೆ. ವಾಯುಪಡೆಯು ಅರುಣಾಚಲದಲ್ಲಿ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ನಲ್ಲಿ ಚೀನಾ ಸೈನಿಕರ ಓಡಾಟ ಕಂಡುಬಂದ ಹಿನ್ನೆಲೆ ಭಾರತೀಯ ಸೈನ್ಯ ಇದೀಗ ಗಸ್ತು ಆರಂಭಿಸಿದೆ. ಇದನ್ನೂ ಓದಿ: ಚೀನಾ ಸೈನಿಕರು ಗಡಿ ನುಸುಳುವುದನ್ನು ಭಾರತ ತಡೆದಿದೆ; ನಮ್ಮ ಯೋಧರ ಧೈರ್ಯಕ್ಕೆ ಸಲಾಂ – ರಾಜನಾಥ್‌ ಸಿಂಗ್‌

ಅರುಣಾಚಲ ಪ್ರದೇಶದ ಎಲ್‍ಎಸಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಘರ್ಷಣೆಗೆ ಒಳಗಾಗಿದ್ದರು. ಮೂಲಗಳ ಪ್ರಕಾರ ಮೊದಲು ಚೀನೀ ಸೈನಿಕರು ಗಡಿಯನ್ನು ದಾಟಿ ಬಂದಿದ್ದಾರೆ. ಈ ವೇಳೆ ಭಾರತೀಯ ಸೈನಿಕರು ಪ್ರತಿರೋಧ ಒಡ್ಡಿದ್ದಾರೆ. ಸಂಘರ್ಷದಲ್ಲಿ ಎರಡೂ ಕಡೆಯ ಕೆಲವು ಸೈನಿಕರಿಗೆ ಗಾಯಗಳಾಗಿವೆ ಎಂದು ಮೂಲಗಳಿಂದ ವರದಿಯಾಗಿತ್ತು.

ಇದೀಗ ಭಾರತ ಸಹ ಶತ್ರುಗಳ ವಾಯುಸೇನೆ ಮೇಲೆ ತೀವ್ರ ನಿಗಾವಹಿಸಿದೆ. ಒಂದು ವೇಳೆ ಶತ್ರು ಸೇನೆ ಸಿಎಪಿ ನಲ್ಲಿರುವ ಫೈಟರ್ ಜೆಟ್‍ಗಳು ಗುಂಡು ಹಾರಿಸಿದ್ರೆ ತಕ್ಷಣವೇ ಶತ್ರು ವಿಮಾನಗಳನ್ನು ಹೊಡೆದುರುಳಿಸಲು ಅನುಮತಿ ನೀಡುವ ಸಾಧ್ಯತೆಯಿದೆ. ಎರಡು, ನಾಲ್ಕು ಅಥವಾ ಅದಕ್ಕಿಂತಲೂ ಹೆಚ್ಚಿನ ಫೈಟರ್ ಜೆಟ್‍ಗಳ ರಚನೆಯಲ್ಲಿ ಗುಂಡು ಹಾರಿಸಲಾಗುತ್ತದೆ. ಜೊತೆಗೆ ಭೂ ನಿಯಂತ್ರಕ ಹಾಗೂ ನಿಯಂತ್ರಕ ವಿಮಾನದಿಂದ ಮಾರ್ಗದರ್ಶನವನ್ನೂ ಎಚ್ಚರಿಕೆ ಪಡೆಯಬಹುದಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಭಾರತ – ಚೀನಾ ಸೈನಿಕರ ಸಂಘರ್ಷ ; ರಾಜನಾಥ್ ಸಿಂಗ್ ನಿವಾಸದಲ್ಲಿ ಸಭೆ

1999ರ ಕಾರ್ಗಿಲ್ ಸಂರ್ಭದಲ್ಲಿ ಭಾರತೀಯ ವಾಯುಪಡೆಯ ಜೆಟ್‍ಗಳು ನಿಯಮಿತವಾಗಿ ಲೈನ್ ಆಫ್ ಕಂಟ್ರೋಲ್ ಗಡಿಯಲ್ಲಿ ಹಾರಿಸುತ್ತಿದ್ದವು. ಆ ಸಂದರ್ಭದಲ್ಲಿ ಐಎಫ್‍ಎಸ್‍ನ ಮಿಗ್-29, ಪಾಕಿಸ್ತಾನದ ಎಫ್-16 ಫೈಟರ್ ಜೆಟ್ ಅನ್ನು ಲಾಕ್ ಮಾಡುವಲ್ಲಿ ಯಶಸ್ವಿಯಾಗಿತ್ತು.

ಸದ್ಯ ಭಾರತೀಯ ಸೇನೆ ಮತ್ತು ಚೀನಾ ಸೇನಾ ಪಡೆಗಳ ನಡುವೆ ಅರುಣಾಚಲ ಪ್ರದೇಶದ ತವಾಂಗ್ ವಲಯದಲ್ಲಿ ಎಲ್‍ಎಸಿ ಬಳಿ ಡಿಸೆಂಬರ್ 9 ರಂದು ನಡೆದ ಹೊಸ ಸಂಘರ್ಷ, ಎರಡೂ ದೇಶಗಳ ಗಡಿ ಬಿಕ್ಕಟ್ಟನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.

2020ರ ಜೂನ್‍ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಈ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಚೀನಾದ 40ಕ್ಕೂ ಹೆಚ್ಚು ಮೃತಪಟ್ಟಿದ್ದರು. ಆ ಬಳಿಕ ಇದೀಗ ಮತ್ತೊಮ್ಮೆ ಗಡಿಯಲ್ಲಿ ಸಂಘರ್ಷ ನಡೆದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *