ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮುಂಬರುವ ಯುದ್ಧ ಆಧಾರಿತ ಚಿತ್ರ ಬ್ಯಾಟಲ್ ಆಫ್ ಗಲ್ವಾನ್ (Battle Of Galwan) ಟೀಸರ್ಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಚಿತ್ರದಲ್ಲಿ ಚಿತ್ರೀಕರಿಸಿರುವ ದೃಶ್ಯಗಳು ಜೂನ್ 2020 ರ ಘರ್ಷಣೆಯ ಘಟನೆಗಳು ಸತ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದಿದೆ. ಗಲ್ವಾನ್ (Galwan) ಕಣಿವೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ನ (LAC) ಚೀನಾ ಭಾಗದಲ್ಲಿದೆ. ಘರ್ಷಣೆಗೆ ಭಾರತೀಯ ಸೈನಿಕರು ಎಲ್ಎಸಿ ದಾಟಿ, ಪ್ರಚೋದಿಸಿದ್ದೇ ಕಾರಣ ಎಂದು ದೂಷಿಸಿದೆ.
ಚೀನಾ (China) ಆರೋಪಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಅದು ಕಲಾವಿದನ ಸ್ವಾತಂತ್ರ್ಯ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸಿನಿಮಾ ತಯಾರಕರು ತಮ್ಮ ಸ್ವಾತಂತ್ರ್ಯಕ್ಕೆ ಅನುಗುಣವಾಗಿ ಚಿತ್ರ ನಿರ್ಮಿಸಲು ಸ್ವತಂತ್ರರು ಎಂದಿದೆ. ಇದನ್ನೂ ಓದಿ: ಕಿರಿಕ್ ಪಾರ್ಟಿ ಸಿನಿಮಾ ನೆನೆದ ರಶ್ಮಿಕಾ ಮಂದಣ್ಣ
ಈ ಸಿನಿಮಾದಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ. ಆದಾಗ್ಯೂ, ಯಾರಿಗೇ ಆಕ್ಷೇಪಣೆ ಇದ್ದರೂ ಸರ್ಕಾರವನ್ನು ಸಂಪರ್ಕಿಸಬಹುದು. ನಾವು ಅಗತ್ಯ ವಿವರಣೆ, ಸ್ಪಷ್ಟನೆ ನೀಡುತ್ತೇವೆ ಎಂದಿದೆ.
ಗಲ್ವಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ 16ನೇ ಬಿಹಾರ್ ರೆಜಿಮೆಂಟ್ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಳ್ಳ ಸಂತೋಷ್ ಬಾಬು ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರವು 2026ರ ಏಪ್ರಿಲ್ 17ರಂದು ಬಿಡುಗಡೆಯಾಗಲಿದೆ.

