ಆಟೋಮೊಬೈಲ್‌ ಇಂಡಸ್ಟ್ರಿಯಲ್ಲಿ ಜಪಾನ್‌ ಹಿಂದಿಕ್ಕಿ ಭಾರತ 3ನೇ ಸ್ಥಾನಕ್ಕೆ ಬಂದಿದೆ: ಗಡ್ಕರಿ

Public TV
2 Min Read

ಬೆಂಗಳೂರು: ಆಟೋಮೊಬೈಲ್‌ ಇಂಡಸ್ಟ್ರಿ ಹೆಚ್ಚಿನ ಆದಾಯ ನೀಡುತ್ತಿದೆ. 7ನೇ ಸ್ಥಾನದಲ್ಲಿ ಆಟೋಮೊಬೈಲ್‌ ಇಂಡಸ್ಟ್ರಿ ಇತ್ತು. ಈಗ ನಾವು ಜಪಾನ್‌ ಮೀರಿಸಿ 3ನೇ ಸ್ಥಾನಕ್ಕೆ ಬಂದಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ತಿಳಿಸಿದರು.

ಬಿಜೆಪಿ (BJP) ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಆಟೋಮೊಬೈಲ್‌ (Automobile) ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ ಮೊದಲ ಸ್ಥಾನಕ್ಕೆ ಬರುತ್ತೇವೆ. ಮರ್ಸಿಡಿಸ್ ಎಲೆಕ್ಟ್ರಿಕ್ ಕಾರು ಉತ್ಪಾದನೆ ಇಲ್ಲಿ ಆಗಲಿದೆ. ಹೈಡ್ರೋಜನ್, ಎಥೆನಾಲ್‌ನಲ್ಲಿ ಓಡುವ ಗಾಡಿ ಇದೆ. ಈಗ ಇಡಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನ ಓಡಲಿದೆ. ಡೀಸೆಲ್ ಬಸ್‌ಗಿಂತ 30% ಕಡಿಮೆ ಟಿಕೆಟ್ ದರದ ಎಲೆಕ್ಟ್ರಕ್ ಬಸ್ ಸಿದ್ಧವಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಪೋಕ್ಸೋ ಪ್ರಕರಣದಲ್ಲಿ ಬಿಎಸ್‍ವೈಗೆ ಮತ್ತೆ ಸಮನ್ಸ್

ಭಾರತದ ಸಾಫ್ಟ್‌ವೇರ್‌ ಹುಡುಗರಲ್ಲಿ ಮೆತಮೆಟಿಕ್ ಜೀನ್ ಇದೆಯಾ ಎಂದು ಜಪಾನ್ ಪ್ರಧಾನಿ ಕೇಳುತ್ತಿದ್ದರು. ಅಷ್ಟು ಪ್ರಭಾವಿಯಾಗಿದೆ ನಮ್ಮ ಭಾರತ ಎಂದರು.

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಗಡ್ಕರಿ, ಲೋಕತಂತ್ರ, ಸಂವಿಧಾನ ಮುಗಿಸಲು ಹೊರಟವರು ಯಾರು? ಇದು ಮುಂದಿನ ಜನಸಾಮಾನ್ಯರಿಗೆ ಪೀಳಿಗೆಗೆ ತಿಳಿಸಬೇಕು. ಎಮರ್ಜೆನ್ಸಿ ಮೂಲಕ ಸಂವಿಧಾನ ಹತ್ತಿಕ್ಕಿದ್ದು‌ ಕಾಂಗ್ರೆಸ್. ಸಂವಿಧಾನ, ಲೋಕತಂತ್ರದ ರಕ್ಷಣೆಗೆ ಬಿಜೆಪಿ ಶ್ರಮಿಸುತ್ತಿದೆ. ತುರ್ತು ಪರಿಸ್ಥಿತಿ ವೇಳೆ ಎಲ್ಲರ ಹಕ್ಕು ಕಿತ್ತುಕೊಳ್ಳಲಾಯ್ತು, ಅಪಾಯಕರ ಬಂಧನ ಆಯ್ತು ಎಂದರು. ಇದನ್ನೂ ಓದಿ: ಇನ್ನೊಂದು ವರ್ಷದಲ್ಲಿ ರಾಮಮಂದಿರ ಪೂರ್ಣ: ಪೇಜಾವರ ಶ್ರೀ

ಕಾಂಗ್ರೆಸ್ ತನ್ನ ಘೋಷಣೆಗಳನ್ನು ಜಾರಿ ಮಾಡಲ್ಲ. ಗರೀಬೀ ಹಟಾವೋ ಅಂತಾ ಅಧಿಕಾರಕ್ಕೆ ಬಂತು. ಬಡತ‌ನ ನಿರ್ಮೂಲನೆ ಆಯ್ತಾ? ಇಲ್ಲ. ಕಾಂಗ್ರೆಸ್‌ನವರ ಬಡತನ ತೊಲಗಿದೆ ಅಷ್ಟೆ ಎಂದು ಟಾಂಗ್‌ ಕೊಟ್ಟರು.

ಇತಿಹಾಸದ ಅಧ್ಯಯನ ಇರಬೇಕು. ಎಂದಿಗೂ ಮರೆಯಬಾರದು. ಯುವ ಜನತೆಗೆ ಈ ವಿಚಾರ ಹೇಳಬೇಕು. ಪ್ರಜಾಪ್ರಭುತ್ವದ ಹತ್ಯೆ ಮಾಡಿದ್ದು ಯಾರು ಎಂದು ಹೇಳಬೇಕು. ಯಾವತ್ತಿಗೂ ಪ್ರಜಾಪ್ರಭುತ್ವದ ರಕ್ಷಣೆ ಬಿಜೆಪಿ ಮಾಡಲಿದೆ. ನಮ್ಮದು ಕೌಟುಂಬಿಕ ಹಿಡಿತ ಇರುವ ಪಕ್ಷ ಅಲ್ಲ. 75 ವರ್ಷಗಳ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿದೆ. ಗರೀಬೀ ಹಠಾವು ಘೋಷಣೆ ಮಾಡುತ್ತಲೇ ಬಂದಿದೆ. ಆದರೆ ಪರಿಸ್ಥಿತಿ ಬದಲಾಗಿಲ್ಲ. ನೆಹರೂ ಪ್ರಧಾನಿ ಆದಾಗ ಕಮ್ಯುನಿಸ್ಟ್ ವಿಚಾರದಲ್ಲಿ ನಡೆಯುತ್ತಿದ್ದರು ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಚೀನಾದ ಕಮ್ಯುನಿಸ್ಟ್ ಪಾರ್ಟಿ ನನಗೆ ಆಹ್ವಾನ ನೀಡಿತ್ತು.‌ ಅಲ್ಲಿನ ಪ್ರೆಸಿಡೆಂಟ್‌ಗೆ ಹೇಳಿದೆ, ಕೆಂಪು ಬಾವುಟ ಬಿಟ್ಟು ಎಲ್ಲ ಬದಲಾಗಿದೆ ಎಂದು ಹೇಳಿದ್ದೆ. ಮಾರ್ಕ್ಸ್, ಲೆನಿನ್ ಎಲ್ಲರನ್ನೂ ಮರೆತಿದ್ದೀರಿ ಎಂದಿದ್ದೆ. ಕ್ರಮೇಣ ಕಮ್ಯುನಿಸ್ಟ್‌ ಪಾರ್ಟಿಯನ್ನು ಜನ ದೂರ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಜನಪರ ಕೆಲಸ ಮಾಡುತ್ತಿದೆ. ವಿಶ್ವದಲ್ಲಿ ಭಾರತ ಹೆಸರು ಮಾಡುತ್ತಿದೆ. ಕಾಂಗ್ರೆಸ್ ಮಾಡಲಾಗದ ಸಾಧನೆಯನ್ನು 10 ವರ್ಷದಲ್ಲಿ ಮೋದಿ ಸರ್ಕಾರ ಮಾಡಿದೆ. ಮೋದಿ ಸರ್ಕಾರ ತೆಗೆದುಕೊಂಡ ನಿರ್ಣಯದ ಪರಿಣಾಮ ಎಲ್ಲಾ ಕ್ಷೇತ್ರದಲ್ಲೂ ಕಾಣುತ್ತಿದೆ. ಆದಾಯ ದ್ವಿಗುಣವಾಗಿದೆ, ಉದ್ಯೋಗ ಸೃಷ್ಟಿಯಾಗಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಬಣ್ಣಿಸಿದರು. ಇದನ್ನೂ ಓದಿ: MUDA Site Allotment Scam | ನನಗೆ 62 ಕೋಟಿ ಕೊಡಬೇಕು: ಸಿಎಂ

Share This Article