ನವದೆಹಲಿ: ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಟೀಂ ಇಂಡಿಯಾ ಮಾಜಿ ಕೋಚ್, ಕನ್ನಡಿಗ ಅನಿಲ್ ಕುಂಬ್ಳೆ ಅವರು ಪಂಜಾಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಪಂಜಾಬ್ ತಂಡ ಅಧಿಕೃತವಾಗಿ ಮಾಹಿತಿ ನೀಡಿದ್ದು, ಕುಂಬ್ಳೆ ಅವರನ್ನು ಕೋಚ್ ಹಾಗೂ ಸಹಾಯಕ ಕೋಚ್ ಆಗಿ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಸುನಿಲ್ ಜೋಷಿರನ್ನು ನೇಮಕ ಮಾಡಿದೆ. ಉಳಿದಂತೆ ಆಸೀಸ್ ಮಾಜಿ ಆಟಗಾರ ಜಾರ್ಜ್ ಬೈಲಿರನ್ನು ಬ್ಯಾಟಿಂಗ್ ಕೋಚ್, ವಿಂಡೀಸ್ ಮಾಜಿ ಆಟಗಾರ ಕರ್ಟ್ನಿ ವಾಲ್ಶ್ ರನ್ನು ಬೌಲಿಂಗ್, ದಕ್ಷಿಣ ಆಫ್ರಿಕಾ ಆಟಗಾರ ಜಾಂಟಿ ರೋಡ್ಸ್ ಅವರನ್ನು ಫಿಲ್ಡೀಂಗ್ ಕೋಚ್ ಆಗಿ ನೇಮಕ ಮಾಡಿದೆ.
ಈ ಕುರಿತು ಮಾತನಾಡಿರುವ ತಂಡದ ಸಹ ಮಾಲೀಕ ನೆಸ್ ವಾಡಿಯಾ ಅವರು, ಕುಂಬ್ಳೆ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿರುವುದು ಸಂತಸ ತಂದಿದೆ. ಅವರಿಗೆ ಕ್ರಿಕೆಟ್ ಹಾಗೂ ಐಪಿಎಲ್ ನಲ್ಲಿರುವ ಅನುಭವ ತಂಡಕ್ಕೆ ಸಹಕಾರಿಯಾಗಲಿದೆ ಎಂದಿದ್ದಾರೆ. ಅಂದಹಾಗೇ 2016, 2017ರ ಅವಧಿಯಲ್ಲಿ ಟೀಂ ಇಂಡಿಯಾ ಕೋಚ್ ಆಗಿದ್ದ 48 ವರ್ಷ ವಯಸ್ಸಿನ ಅನಿಲ್ ಕುಂಬ್ಳೆ ಅವರು ಬೆಂಗಳೂರು ಹಾಗೂ ಮುಂಬೈ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ವಿಶೇಷ ಎಂದರೆ ಪಂಜಾಬ್ ಮಾತ್ರ ಭಾರತರ ಕೋಚ್ ನೇಮಕವಾಗಿದ್ದು, ಉಳಿದ ಎಲ್ಲಾ ತಂಡಗಳು ವಿದೇಶಿ ಕೋಚ್‍ಗಳನ್ನು ಹೊಂದಿವೆ.