ಭಾರತದ ಮೊದಲ ಆನೆ ಆಸ್ಪತ್ರೆ ಉದ್ಘಾಟನೆ – ವಿಶೇಷತೆಗಳೇನು?

Public TV
1 Min Read

ಲಕ್ನೋ: ದೇಶದಲ್ಲಿ ಆನೆಗಳಿಗಾಗಿಯೇ ಮೊದಲ ಬಾರಿಗೆ ಪ್ರತ್ಯೇಕ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿದ್ದು, ಆನೆಗಳ ಚಿಕಿತ್ಸೆಗೆ ಬೇಕಾದ ಆಧುನಿಕ ಸೌಲಭ್ಯಗಳನ್ನು ಆಸ್ಪತ್ರೆ ಹೊಂದಿದೆ.

ಉತ್ತರಪ್ರದೇಶದ ಆಗ್ರಾದ ಬಳಿಯ ಚುರ್ಮುರಾ ಗ್ರಾಮದಲ್ಲಿ ಆಸ್ಪತ್ರೆ ಉದ್ಘಾಟನೆಯಾಗಿದೆ. ಗಾಯಗೊಂಡ, ಅನಾರೋಗ್ಯ ಪೀಡಿತ ಆನೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಚುರ್ಮುರಾ ಗ್ರಾಮದ ಬಳಿ ಇರುವ ಆನೆ ಸಂರಕ್ಷಣಾ ಕೇಂದ್ರದ ಹತ್ತಿರದಲ್ಲೇ ಈ ವಿಶೇಷ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

ಯಾವ ಸೌಲಭ್ಯ ಸಿಗಲಿದೆ?
ಆನೆಗಳಿಗಾಗಿಯೇ ಪ್ರತ್ಯೇಕವಾಗಿ ನಿರ್ಮಿಸಿರುವ ದೇಶದ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ಈ ಕೇಂದ್ರದಲ್ಲಿ ವೈರ್ ಲೆಸ್ ಡಿಜಿಟಲ್ ಎಕ್ಸ್ ರೇ, ಲೇಸರ್ ಚಿಕಿತ್ಸೆ, ಡೆಂಟಲ್ ಎಕ್ಸ್ ರೇ, ಥರ್ಮಲ್ ಇಮೇಜಿಂಗ್, ಅಲ್ಟ್ರಾಸೋನೋಗ್ರಫಿ, ಹೈಡ್ರೋಥೆರಪಿ ಸೇವೆಗಳು ಲಭ್ಯವಿದ್ದು, ಪ್ರತೇಕ ವಾರ್ಡ್ ಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಗಾಯವಾಗಿ ಮೇಲೆಳದ ಸ್ಥಿತಿ ನಿರ್ಮಾಣವಾಗುವ ವೇಳೆ ಮೇಲೆತ್ತುವ ವೈದ್ಯಕೀಯ ಉಪಕರಣಗಳನ್ನು ಕೂಡ ಈ ಆಸ್ಪತ್ರೆ ಒಳಗೊಂಡಿದೆ.

ಕೇವಲ ಆನೆಗಳ ಚಿಕಿತ್ಸೆ ಮಾತ್ರವಲ್ಲದೇ ಆನೆಗಳ ಚಟುವಟಿಕೆ, ಅವುಗಳ ಚಿಕಿತ್ಸಾ ವಿಧಾನ ಬಗ್ಗೆ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆನೆಗಳ ಆರೋಗ್ಯ ಹಾಗೂ ಸಂರಕ್ಷಣಾ ದೃಷ್ಟಿಯಿಂದ ಸ್ಥಾಪನೆ ಮಾಡಲಾಗಿರುವ ಆಸ್ಪತ್ರೆ ಹೊಸ ಮೈಲುಗಲ್ಲಾಗಿದ್ದು, ಆಸ್ಪತ್ರೆಗಳಲ್ಲಿ ನೀಡಲಾಗಿರುವ ಸೌಲಭ್ಯಗಳು ಆನೆಗಳ ಬಗ್ಗೆ ಉತ್ತಮ ಕಾಳಜಿ ವಹಿಸಲು ಸಹಕಾರಿ ಆಗಲಿದೆ ಎಂದು ಎಸ್‍ಒಎಸ್ ಎನ್‍ಜಿಒ ಸಂಸ್ಥೆ ಸಿಇಒ ಕಾರ್ತಿಕ್ ಸತ್ಯನಾರಾಯಣ್ ಹೇಳಿದ್ದಾರೆ. ಅಂದಹಾಗೇ ಎಸ್‍ಒಎಸ್ ಸಂಸ್ಥೆ 2010 ರಲ್ಲಿ ಅನೆಗಳ ಸಂರಕ್ಷಣಾ ಕೇಂದ್ರವನ್ನು ಆರಂಭಸಿದ್ದು, ಈ ಕೇಂದ್ರದಲ್ಲಿ ವಿಶೇಷ ಚಿಕಿತ್ಸೆ ಅಗತ್ಯಿರುವ 20 ಆನೆಗಳು ಚಿಕಿತ್ಸೆ ಪಡೆಯುತ್ತಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *