ಮಿಲಿಟರಿ ಮೇಲೆ ಅತಿಹೆಚ್ಚು ಖರ್ಚು ಮಾಡುವ ದೇಶಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ

Public TV
2 Min Read

ನವದೆಹಲಿ: ಕೊರೊನಾ ಸಂಕಷ್ಟ, ಹಲವು ಆರ್ಥಿಕ ಸಮಸ್ಯೆಗಳ ನಡುವೆಯೂ ಅಮೆರಿಕ ಚೀನಾದ ಬಳಿಕ ಭಾರತ ಮಿಲಿಟರಿ ಮೇಲೆ ಅತಿ ಹೆಚ್ಚು ಖರ್ಚು ಮಾಡುತ್ತಿದೆ ಎಂದು ಸ್ಟಾಕ್‍ಹೋಮ್ ಇಂಟರ್‌ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ತಿಳಿಸಿದೆ. ವಿಶ್ವದ ಎಲ್ಲ ದೇಶಗಳ ಮಿಲಿಟರಿ ಹೂಡಿಕೆಗಳ ಮೇಲಿನ ಅಧ್ಯಯನದ ಬಳಿಕ ಅದು ತನ್ನ ವರದಿಯನ್ನು ಪ್ರಕಟಿಸಿದೆ.

SIPRI ವರದಿಯ ಪ್ರಕಾರ ವಿಶ್ವದಲ್ಲಿ ಐದು ರಾಷ್ಟ್ರಗಳು ಮಿಲಿಟರಿ ಮೇಲೆ ಹೆಚ್ಚು ಖರ್ಚು ಮಾಡುತ್ತಿವೆ. ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಚೀನಾ, ಭಾರತ, ಬ್ರಿಟನ್ ಮತ್ತು ರಷ್ಯಾ ನಂತರದ ಸ್ಥಾನಗಳಲ್ಲಿದೆ. 2021ರಲ್ಲಿ ವಿಶ್ವದ ಎಲ್ಲ ದೇಶಗಳು ಮಿಲಿಟರಿ ಮೇಲೆ 2.1 ಟ್ರಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿದ್ದು ಇದರಲ್ಲಿ ಈ ಐದು ದೇಶಗಳು 62% ಖರ್ಚು ಹೊಂದಿವೆ. ಇದನ್ನೂ ಓದಿ: ಪಿಎಂ ಮನೆ ಮುಂದೆ ಎಲ್ಲ ಧರ್ಮದ ಸಾಲುಗಳನ್ನು ಪಠಿಸಲು ಅವಕಾಶ ಕೊಡಿ: NCP ನಾಯಕಿ

2021 ರಲ್ಲಿ ಭಾರತವೂ 76.6 ಶತಕೋಟಿ ಡಾಲರ್ ಮಿಲಿಟರಿ ಮೇಲೆ ಖರ್ಚು ಮಾಡಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 0.9% ಹಾಗೂ 2012ಕ್ಕೆ ಹೋಲಿಸಿದರೆ 33% ನಷ್ಟು ಖರ್ಚು ಹೆಚ್ಚಾಗಿದೆ. ಭಾರತ ಚೀನಾ ಮತ್ತು ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಪರಿಸ್ಥಿತಿ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತ ಮಿಲಿಟರಿ ಮೇಲೆ ಖರ್ಚು ಹೆಚ್ಚಿಸಲಾಗಿದೆ. ಅಲ್ಲದೇ ಇದು ಮಿಲಿಟರಿ ಶಸ್ತ್ರಾಸ್ತ್ರಗಳ ಉತ್ಪಾದನೆ ಸ್ವಾವಲಂಬನೆಯನ್ನು ಒಳಗೊಂಡಿದೆ.

ಜಾಗತಿಕ ದೇಶಗಳ ಒಟ್ಟು ಮಿಲಿಟರಿ ಖರ್ಚುನಲ್ಲಿ ಅಮೆರಿಕ 38% ಹೂಡಿಕೆ ಹೊಂದಿದ್ದರೆ ಚೀನಾ 14% ಖರ್ಚು ಮಾಡುತ್ತಿದೆ. ಚೀನಾ 27 ವರ್ಷಗಳಿಂದ ಗಣನೀಯವಾಗಿ ಮಿಲಿಟರಿ ಖರ್ಚು ಹೆಚ್ಚು ಮಾಡುತ್ತಾ ಬಂದಿದೆ. 2016 ರಿಂದ 2019 ವರೆಗೂ ಮಿಲಿಟರಿ ಮೇಲೆ ಖರ್ಚು ಕಡಿಮೆ ಮಾಡಿದ್ದ ರಷ್ಯಾ ಈಗ ಮತ್ತೆ ತನ್ನ ಖರ್ಚು ಹೆಚ್ಚಿಸಿದೆ. ಉಕ್ರೇನ್‍ನಲ್ಲಿ ಮಿಲಿಟರಿ ವೆಚ್ಚವು 2021 ರಲ್ಲಿ 5.9 ಶತಕೋಟಿಗೆ ಕುಸಿದಿದ್ದರೂ, ಅದು ಅದರ GDP ಯ 3.2 ಶೇಕಡಾವನ್ನು ಹೊಂದಿದೆ. ಇದನ್ನೂ ಓದಿ: ಸರ್ಕಾರ ಕತ್ತೆ ಕಾಯ್ತಿದ್ಯಾ? ಕಡ್ಲೆಪುರಿ ತಿಂತಿದ್ಯಾ? ಆರೋಪಿ ವಿರುದ್ಧ FIR ದಾಖಲಿಸಿಲ್ಲ ಯಾಕೆ – ಪ್ರಿಯಾಂಕ್ ಖರ್ಗೆ ಪ್ರಶ್ನೆ

Share This Article
Leave a Comment

Leave a Reply

Your email address will not be published. Required fields are marked *