ಕಿವೀಸ್‌ ವೇಗಿಗಳ ಆರ್ಭಟ; 46ಕ್ಕೆ ಭಾರತ ಆಲೌಟ್‌ – ಕೆಟ್ಟ ದಾಖಲೆ ಹೆಗಲಿಗೇರಿಸಿಕೊಂಡ ಟೀಂ ಇಂಡಿಯಾ

Public TV
2 Min Read

ಬೆಂಗಳೂರು: ನ್ಯೂಜಿಲೆಂಡ್‌ (New Zealand) ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೊಲದ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ವಿಲಿಯಂ ಓ’ರೂರ್ಕ್ (William O’Rourke), ಮ್ಯಾಟ್‌ ಹೆನ್ರಿ ವೇಗಿಗಳ ಆರ್ಭಟಕ್ಕೆ ನಲುಗಿದ ಟೀಂ ಇಂಡಿಯಾ (Team India) 46 ರನ್‌ಗಳಿಗೆ ಆಲೌಟ್‌ ಆಗಿ ಭಾರೀ ಮುಖಭಂಗ ಅನುಭವಿಸಿದೆ. ಅಲ್ಲದೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತೀ ಕೆಟ್ಟ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡಿದೆ.

ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ (M Chinnaswamy Stadium) ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ ಕಿವೀಸ್‌ ವೇಗಿಗಳ ಅಬ್ಬರಕ್ಕೆ ಮಕಾಡೆ ಮಲಗಿತು. ನಿಧಾನಗತಿ ಬ್ಯಾಟಿಂಗ್‌ ಆರಂಭಿಸಿದ ಭಾರತ ಒಂದೊಂದು ಕದಿಯಲು ತಿಣುಕಾಡಿತು. ರೋಹಿತ್‌ (Rohit Sharma), ಕೊಹ್ಲಿ, ರಾಹುಲ್‌ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ಬಹುಬೇಗನೆ ಪೆವಿಲಿಯನ್‌ ಪರೇಡ್‌ ನಡೆಸಿದರು. ಅಂತಿಮವಾಗಿ ಭಾರತ 46 ರನ್‌ಗಳಿಗೆ ಆಲೌಟ್‌ ಆಯಿತು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) 3ನೇ ಅತೀ ಕಡಿಮೆ ರನ್‌ ಗಳಿಸಿದ ಕೆಟ್ಟ ದಾಖಲೆಯನ್ನು ಹೆಗಲಿಗೇರಿಸಿಕೊಂಡಿತು.

ಟೀಂ ಇಂಡಿಯಾ ಕಳಪೆ ರನ್‌ ಗಳಿಸಿದ ಪಂದ್ಯಗಳು
* 36 ರನ್‌ – ಆಸ್ಟ್ರೇಲಿಯಾ ವಿರುದ್ಧ – ಡಿಲೇಡ್‌ ಮೈದಾನ (2020)
* 42 ರನ್‌ – ಇಂಗ್ಲೆಂಡ್‌ ವಿರುದ್ಧ – ಲಾರ್ಡ್ಸ್‌ ಮೈದಾನ (1974
* 46 ರನ್‌ – ನ್ಯೂಜಿಲೆಂಡ್‌ ವಿರುದ್ಧ – ಚಿನ್ನಸ್ವಾಮಿ ಕ್ರೀಡಾಂಗಣ (2024)
* 58 ರನ್‌ – ಆಸ್ಟ್ರೇಲಿಯಾ ವಿರುದ್ಧ – ಮ್ಯಾಂಚೆಸ್ಟರ್‌(1952)
* 66 ರನ್‌ – ದಕ್ಷಿಣ ಆಫ್ರಿಕಾ ವಿರುದ್ಧ – ಡರ್ಬನ್‌ ಮೈದಾನ (1996)

ನೆಲ ಕಚ್ಚಿದ ಬ್ಯಾಟರ್ಸ್‌:
ಟೀಂ ಇಂಡಿಯಾ ಪರ ರಿಷಭ್‌ ಪಂತ್‌ (Rishabh Pant) 20 ರನ್‌, ಯಶಸ್ವಿ ಜೈಸ್ವಾಲ್‌ 13 ರನ್‌ ಗಳಿದರು. ಉಳಿದ ಆಟಗಾರರು ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು. ರೋಹಿತ್‌ ಶರ್ಮಾ 2ರನ್‌, ಕುಲೀಪ್‌ ಯಾದವ್‌ 2ರನ್‌, ಜಸ್ಪ್ರೀತ್‌ ಬುಮ್ರಾ 1 ರನ್‌, ಸಿರಾಜ್‌ 4 ರನ್‌ ಗಳಿಸಿದರು. ಇನ್ನುಳಿದಂತೆ ವಿರಾಟ್‌ ಕೊಹ್ಲಿ, ಸರ್ಫರಾಜ್‌ ಖಾನ್‌, ಕೆ.ಎಲ್‌ ರಾಹುಲ್‌, ರವೀಂದ್ರ ಜಡೇಜಾ, ರವಿಚಂದ್ರನ್‌ ಅಶ್ವಿನ್‌ ಶೂನ್ಯ ಸುತ್ತಿದರು.

ರೂರ್ಕ್‌, ಹೆನ್ರಿ ಕಮಾಲ್‌:
ಆರಂಭದಿಂದಲೂ ಅಧಿಕ ರನ್‌ ಬಿಟ್ಟುಕೊಟಡ ವಿಲಿಯಂ ಓ’ರೂರ್ಕ್, ಮ್ಯಾಟ್‌ ಹೆನ್ರಿ ಭಾರತದ ಆಟಗಾರರನ್ನು ಬಿಗಿ ಹಿಡಿತದಲ್ಲಿ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಮಾರಕ ದಾಳಿ ನಡೆಸಿದ ವೇಗಿ ಮ್ಯಾಕ್‌ ಹೆನ್ರಿ 13.2 ಓ ವರ್‌ಗಳಲ್ಲಿ 15 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕಿತ್ತರೆ, ವಿಲಿಯಂ ಓ’ರೂರ್ಕ್ 12 ಓವರ್‌ಗಳಲ್ಲಿ 22 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಹಾಗೂ ಟಿಮ್‌ ಸೌಥಿ ಒಂದು ವಿಕೆಟ್‌ ಪಡೆದರು.

Share This Article