ಲಂಕಾಗೆ 3.3 ಟನ್‌ ಔಷಧ ಪೂರೈಕೆ – ಭಾರತ ಸರ್ಕಾರದಿಂದ ನೆರವು

Public TV
1 Min Read

ಕೊಲಂಬೊ: ಸತತ ಆರ್ಥಿಕ ದಿವಾಳಿತನದಿಂದ ಔಷಧಗಳ ಕೊರತೆ ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ತನ್ನ ನೆರವನ್ನು ಮುಂದುವರಿಸಿದೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಔಷಧಗಳ ಕೊರತೆ ಎದುರಿಸುತ್ತಿದ್ದ ಶ್ರೀಲಂಕಾ, ತುರ್ತು ಚಿಕಿತ್ಸೆಗಳಿಗೆ ಮಾತ್ರವೇ ಆದ್ಯತೆ ನೀಡಿತ್ತು. ಪ್ರಮುಖ ಶಸ್ತ್ರ ಚಿಕಿತ್ಸೆಗಳನ್ನು ನಿಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸತತವಾಗಿ ಶ್ರೀಲಂಕಾದ ನೆರವಿಗೆ ನಿಂತಿರುವ ಭಾರತ ಸರ್ಕಾರ ಸರಿ ಸುಮಾರು 3.3 ಟನ್‌ಗಳಷ್ಟು ಅಗತ್ಯ ಔಷಧಗಳನ್ನು ಸರಬರಾಜು ಮಾಡಿದೆ. ಇದನ್ನೂ ಓದಿ: ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್‌

ಜಾಫ್ನಾ ಟೀಚಿಂಗ್‌ ಆಸ್ಪತ್ರೆ (ಜೆಟಿಎಚ್‌)ಗೆ 2 ಟ್ರಕ್‌ ಲೋಡ್‌ಗಳಲ್ಲಿ 3.3 ಟನ್‌ಗಳಷ್ಟು ಜೀವ ರಕ್ಷಕ ಔಷಧಿ ಹಾಗೂ ವೈದ್ಯಕೀಯ ಸಾಧನಗಳನ್ನು ಸರಬರಾಜು ಮಾಡಿದೆ. ಭಾರತದ ಕನ್ಸೊಲೆಟ್‌ ಜನರಲ್‌ ಜಾಫ್ನಾ ರಾಕೇಶ್ ನಟರಾಜ್ ಅವರು ಜಾಫ್ನಾ ಆಸ್ಪತ್ರೆ ನಿರ್ದೇಶಕ ಡಾ.ನಂತಕುಮಾರ್ ಅವರಿಗೆ ಔಷಧಗಳನ್ನು ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ 50ನೇ ಹುಟ್ಟುಹಬ್ಬಕ್ಕೆ 111 ಅಡಿ ಎತ್ತರ ಕೇಕ್ ಸಿದ್ಧ

ಮಾರ್ಚ್ 2022 ರಲ್ಲಿ ಕೊಲಂಬೊದಲ್ಲಿರುವ ಸುವಾಸೇರಿಯಾ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ ಶಂಕರ್ ಅವರಿಗೆ ಫೌಂಡೇಶನ್ ಎದುರಿಸುತ್ತಿರುವ ಔಷಧಗಳ ಕೊರತೆಯ ಬಗ್ಗೆ ಲಂಕಾದ ಅಧಿಕಾರಿ ಬಾಗ್ಲೇ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಶ್ರೀಲಂಕಾದ ನೆರವಿಗೆ ಮುಂದಾಗಿದೆ.

ಮೇ 27 ರಂದು, ಶ್ರೀಲಂಕಾದಲ್ಲಿ ಭಾರತದ ಹಂಗಾಮಿ ಹೈ ಕಮಿಷನರ್ ವಿನೋದ್ ಕೆ. ಜೇಕಬ್ ಅವರು ಕೊಲಂಬೊದಲ್ಲಿ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಅವರಿಗೆ 25 ಟನ್‌ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಿದ್ದರು. ಇದೀಗ ಮತ್ತೆ ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *