ನವದೆಹಲಿ: ಭಾರತದ ಆಮದುಗಳ ಮೇಲೆ 50% ಸುಂಕ (Tariff) ವಿಧಿಸಿದ ಬೆನ್ನಲ್ಲೇ ಭಾರತ ತಿರುಗೇಟು ನೀಡಿದೆ. ಅಮೆರಿಕದಿಂದ ಹೊಸ ಶಸ್ತ್ರಾಸ್ತ್ರಗಳು ಹಾಗೂ ವಿಮಾನಗಳನ್ನು ಖರೀದಿಸುವ ಯೋಜನೆಯನ್ನ (US Weapon Deal Plan) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೆಲ ಶಸ್ತ್ರಾಸ್ತ್ರಗಳನ್ನು ಖರೀಸುವ ಒಪ್ಪಂದಗಳಿಗಾಗಿ ಮುಂದಿನ ವಾರಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರನ್ನು ವಾಷಿಂಗ್ಟನ್‌ಗೆ ಕಳುಹಿಸುವ ಯೋಜನೆ ಇತ್ತು. ಆದ್ರೆ ಟ್ರಂಪ್ (Donald Trump) ಸುಂಕ ಏರಿಕೆ ಬೆನ್ನಲ್ಲೇ ಪ್ರವಾಸವನ್ನ ಮೊಟಕುಗೊಳಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಆದ್ರೆ ಕೆಲ ಉನ್ನತ ಮೂಲಗಳು ರಕ್ಷಣಾ ಒಪ್ಪಂದಗಳನ್ನ ರದ್ದುಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಒಪ್ಪಂದಗಳು, ಶಸ್ತ್ರಾಸ್ತ್ರ ಸರಬರಾಜು ಮುಂದುವರಿಯುತ್ತದೆ ಎಂದು ತಿಳಿಸಿವೆ. ಇದನ್ನೂ ಓದಿ: ಟ್ಯಾರಿಫ್ ವಾರ್‌ಗೆ ಸೆಡ್ಡು| P-8I ವಿಮಾನ ಖರೀದಿಸಲ್ಲ ಎಂದ ಭಾರತ
ಜನರಲ್ ಡೈನಾಮಿಕ್ಸ್ ಲ್ಯಾಂಡ್ ಸಿಸ್ಟಮ್ಸ್ ತಯಾರಿಸಿದ ಸ್ಟ್ರೈಕರ್ ಯುದ್ಧ ಟ್ಯಾಂಕರ್ ಸೇರಿದಂತೆ ಹಲವು ರಕ್ಷಣಾ ಉತ್ಪನ್ನಗಳ ಖರೀದಿಗೆ ಭಾರತ ಆಸಕ್ತಿ ತೋರಿತ್ತು. ಇದನ್ನೂ ಓದಿ: ಟ್ಯಾರಿಫ್ ಶಾಕ್; ಚಿನ್ನದ ಬೆಲೆ 3,600 ರೂ. ಏರಿಕೆ
P-8I ವಿಮಾನ ಖರೀದಿಸಲ್ಲ
ಇದಕ್ಕೂ ಮುನ್ನವೇ ಬೋಯಿಂಗ್ P-8I ವಿಮಾನವನ್ನು ಖರೀದಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿತ್ತು. 6 ಪಿ-81 ವಿಮಾನ ಖರೀದಿಗೆ ಭಾರತ ಮುಂದಾಗಿತ್ತು. ಆದರೆ ಈಗ ಕಡಲಿನಲ್ಲಿ ಗಸ್ತು ಕಾಯುವ ಈ ವಿಮಾನ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. 2009 ರಲ್ಲಿ ಭಾರತ 8 ವಿಮಾನ ಖರೀದಿಗೆ 2.2 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತ್ತು. 2016 ರಲ್ಲಿ 4 ವಿಮಾನ ಖರೀದಿಸಿತ್ತು. ಭಾರತದ ಸಮುದ್ರದ ಮೇಲೆ ನಿಗಾ ಇಡಲು ಭಾರತೀಯ ನೌಕಾ ಸೇನೆಗೆ ಒಟ್ಟು 18 ಪಿ-81 ವಿಮಾನಗಳ ಅಗತ್ಯವಿದೆ. ಇದನ್ನೂ ಓದಿ: ಮಹಾದೇವಪುರದಲ್ಲಿ ಮತಗಳ್ಳತನ – ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ
ಆಮದು ಸುಂಕ 50% ಏರಿಕೆ
ಇದೇ ತಿಂಗಳ ಆಗಸ್ಟ್ 6ರಂದು ರಷ್ಯಾದ ತೈಲ ಖರೀದಿಗೆ ಶಿಕ್ಷೆಯಾಗಿ ಭಾರತದ ಆಮದು ಸರಕುಗಳ ಮೇಲೆ 25% ಸುಂಕ ವಿಧಿಸಿ ಟ್ರಂಪ್ ಆದೇಶ ಹೊರಡಿಸಿದ್ದರು. ಆದ್ರೆ ಭಾರತ ರಷ್ಯಾದ ತೈಲ ಖರೀದಿಯಿಂದ ಹಿಂದೆ ಸರಿಯದ ಹಿನ್ನೆಲೆ ಸುಂಕದ ಪ್ರಮಾಣವನ್ನು 50%ಗೆ ಏರಿಕೆ ಮಾಡಿದ್ದಾರೆ. ಇದು ಶೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಇದನ್ನೂ ಓದಿ: ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ: ಶೆಟ್ಟರ್