ಭಾರತ-ಪಾಕ್ ಯುದ್ಧ ಕಾರ್ಮೋಡ – ಸಹೋದರನ ಅಂತ್ಯಕ್ರಿಯೆಗೆ ಬಂದಿದ್ದ ಯೋಧ ಕರ್ತವ್ಯಕ್ಕೆ ವಾಪಸ್

Public TV
1 Min Read

ಬಳ್ಳಾರಿ/ಯಾದಗಿರಿ/ವಿಜಯಪುರ: ಭಾರತ ಮತ್ತು ಪಾಕ್ (India-Pak) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಭಾರತೀಯ ಸೇನೆ (Indian Army) ತುರ್ತು ಕರೆ ಮೂಲಕ ರಜೆಯಲ್ಲಿರುವ ಸೈನಿಕರನ್ನು ಮರಳಿ ಕರೆಸಿಕೊಳ್ಳುತ್ತಿದೆ.

ಕಲಬುರಗಿ:
ಜಿಲ್ಲೆಯ ಅಲ್ಲೂರು ಗ್ರಾಮದ ಯೋಧ ಬಸವರಾಜ, 23 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಉದಂಪುರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಸಹೋದರನ ಅಂತ್ಯಕ್ರಿಯೆಗಾಗಿ ತುರ್ತು ರಜೆ ಪಡೆದು ಯಾದಗಿರಿಗೆ ಬಂದಿದ್ದರು. ಆಪರೇಷನ್ ಸಿಂಧೂರ (Operation Sindoor) ಇನ್ನೂ ಮುಗಿದಿಲ್ಲ ಎಂಬ ಆದೇಶದ ಬೆನ್ನ÷ಲ್ಲೇ ಸೇನೆಯಿಂದ ಕರೆ ಬಂದಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಸದ್ಯ ಯೋಧನ ಕುಟುಂಬಸ್ಥರು ಅದ್ಧೂರಿಯಾಗಿ ಬೀಳ್ಕೊಟ್ಟಿದ್ದು, ನಮಗೆ ದೇಶವೇ ಮೊದಲು, ದೇಶಸೇವೆಗೆ ನಾವು ಸದಾ ಸಿದ್ಧ ಎಂದು ಹೇಳಿ ತೆರಳಿದ್ದಾರೆ.ಇದನ್ನೂ ಓದಿ: ಪಾಕ್‍ಗೆ ನಾವು ಹೇಗಾದ್ರೂ ಪ್ರತಿಕ್ರಿಯಿಸುತ್ತೇವೆ, ಇದನ್ನು ಟ್ರಂಪ್ ಸರ್ಕಾರ ಅರ್ಥ ಮಾಡಿಕೊಳ್ಳಲಿ: ಮೋದಿ

ವಿಜಯಪುರ:
ಇನ್ನೂ ವಿಜಯಪುರದ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಿಆರ್‌ಪಿಎಫ್ ಯೋಧ ರಮೇಶ ಅಹಿರಸಂಗ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೇನೆಯ ತುರ್ತು ಕರೆ ಮೇರೆಗೆ ವಾಪಸ್ ಹೊರಡಲು ಸಿದ್ಧರಾಗಿದ್ದಾರೆ. ಯೋಧನಿಗೆ ಇಂಡಿ ಪೊಲೀಸರು ಎಸ್ಕಾರ್ಟ್ ನೀಡಿ, ಕಳುಹಿಸಿಕೊಟ್ಟಿದ್ದಾರೆ.

ವಿಜಯನಗರ:
ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಬಿಎಸ್‌ಎಫ್ ಯೋಧ ಪ್ರಕಾಶ್ ಕೊಪ್ಪೋಜಿ 2008ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಒಂದು ತಿಂಗಳ ಮೇಲೆ ರಜೆ ಮೇಲೆ ಊರಿಗೆ ಬಂದಿದ್ದರು. ಸದ್ಯ ಸೇನೆಯಿಂದ ತುರ್ತು ಕರೆ ಹಿನ್ನೆಲೆ ಕರ್ತವ್ಯಕ್ಕೆ ಮರಳುತ್ತಿದ್ದು, ವಿವಿಧ ಸಂಘಟನೆಗಳು ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ.ಇದನ್ನೂ ಓದಿ: ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್‌.ವಿ ದೇಶಪಾಂಡೆ

 

Share This Article