World Cup Final: ಅತೀ ಕಡಿಮೆ ರನ್‌ ಬಾರಿಸಿದ್ದರೂ ಗೆದ್ದು ಇತಿಹಾಸ ನಿರ್ಮಿಸಿತ್ತು ಭಾರತ

Public TV
2 Min Read

ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ 50 ಓವರ್‌ಗಳಲ್ಲಿ 240 ರನ್‌ ಗಳಿಗೆ ಆಲೌಟ್‌ ಆಗಿದೆ. ಈ ಮೊತ್ತ ಭಾರತದ ಗೆಲುವಿಗೆ ಸಾಕೇ ಎಂಬ ಪ್ರಶ್ನೆ ಅಭಿಮಾನಿ ವಲಯದಲ್ಲಿ ಎದ್ದಿದೆ. ಆದ್ರೆ ವಿಶ್ವಕಪ್‌ ಫೈನಲ್‌ನಲ್ಲಿ ಕಡಿಮೆ ರನ್‌ ಗಳಿಸಿದ್ದರೂ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡು ಭಾರತ ಇತಿಹಾಸ ನಿರ್ಮಿಸಿತ್ತು.

1983ರ ಫೈನಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 183 ರನ್ ಗಳಿಸಿತ್ತು. ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಅತ್ಯಂತ ಕಡಿಮೆ ಸ್ಕೋರ್ ಅದಾಗಿದೆ.

ಅಂದು ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿದ್ದ ಭಾರತದ ಪರ ಮೊಹಿಂದರ್ ಅಮರ್​ನಾಥ್ ಮತ್ತು ಮದನ್ ಲಾಲ್ ತಲಾ 3 ವಿಕೆಟ್ ಪಡೆದಿದ್ದರು. ಈ ಮೂಲಕ ಭಾರತದ ಬೌಲರ್​ಗಳು ಬಲಿಷ್ಠ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೈನ್ಅಪ್ ಅನ್ನು 140 ರನ್​ಗಳಿಗೆ ಆಲೌಟ್‌ ಮಾಡಿ ಟ್ರೋಫಿ ಗೆದ್ದಿತ್ತು. ಇದು ವಿಶ್ವ ಕಪ್ ಇತಿಹಾಸದಲ್ಲಿ ತಂಡವೊಂದು ಕನಿಷ್ಠ ಮೊತ್ತವನ್ನು ರಕ್ಷಿಸಿ ಗೆದ್ದ ಸಂದರ್ಭವಾಗಿತ್ತು. 1992ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 249 ರನ್ ಬಾರಿಸಿದ್ದು ವಿಶ್ವಕಪ್ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ 2ನೇ ಕನಿಷ್ಠ ಮೊತ್ತವಾಗಿತ್ತು, ಆ ನಂತರ 2019ರ ವಿಶ್ವಕಪ್‌ ಸೆಮೀಸ್‌ನಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್‌ 239 ರನ್‌ ಗಳಿಸಿ 18 ರನ್‌ಗಳ ಗೆಲುವು ಸಾಧಿಸಿತ್ತು.

ಭಾರತದ ಬ್ಯಾಟಿಂಗ್ ವೈಫಲ್ಯ: ಫೈನಲ್‌ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್‌ ಮೊತ್ತ ಪೇರಿಸಬಹುದು ಎಂಬ ಅಭಿಮಾನಿಗಳ ನಿರೀಕ್ಷೆ ಸುಳ್ಳಾಗಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಔಟಾದ ಬಳಿಕ ಒಂದೊಂದು ರನ್‌ ಕದಿಯಲು ಟೀಂ ಇಂಡಿಯಾ ಹೆಣಗಾಡಿತ್ತು. ಕೊನೆಯ 10 ಓರ್‌ಗಳಲ್ಲಿ ಕೇವಲ 2 ಬೌಂಡರಿಯನ್ನಷ್ಟೇ ಬಾರಿಸಿ, 43 ರನ್‌ ಕಲೆಹಾಕಿತು. ಹಾಗಾಗಿ 240 ರನ್‌ಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇದನ್ನೂ ಓದಿ: ಫೈನಲ್‌ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ತೀನ್‌ ಬೆಂಬಲಿಗ ಅರೆಸ್ಟ್‌

ಚೇಸಿಂಗ್‌ ಆರಂಭಿಸಿರುವ ಆಸ್ಟ್ರೇಲಿಯಾ 25 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 135 ರನ್‌ ಗಳಿಸಿ, ಮುನ್ನಡೆದಿದೆ. ಇನ್ನುಳಿದ 25 ಓವರ್‌ಗಳಲ್ಲಿ ಗೆಲುವಿಗೆ 106 ರನ್‌ ಬೇಕಿದೆ. ಇದನ್ನೂ ಓದಿ: World Cup Final: ಆಸೀಸ್‌ಗೆ 241 ರನ್‌ಗಳ ಗುರಿ – ವಿಶ್ವಕಪ್‌ಗಾಗಿ ಶತಕೋಟಿ ಭಾರತೀಯರ ಪ್ರಾರ್ಥನೆ

Share This Article