ಗುಣಾತ್ಮಕ ಕೆಲಸಗಳಿಂದ ಭಾರತ ವಿಶ್ವಗುರುವಾಗುತ್ತಿದೆ: ಅಶ್ವಥ್ ನಾರಾಯಣ

Public TV
1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುಣಾತ್ಮಕತೆಗೆ ಒತ್ತು ಸಿಕ್ಕಿದ್ದು, ಇದರ ಪರಿಣಾಮವಾಗಿ ದೇಶವು ವಿಶ್ವಗುರುವಾಗಿ ಹೊರಹೊಮ್ಮುತ್ತಿದೆ. ಇದರ ಫಲ ಇನ್ನು ಹತ್ತು ವರ್ಷಗಳಲ್ಲಿ ಜನತೆಗೆ ಸಿಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವಥ್ ನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಹವ್ಯಕ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಶ್ವಥ್ ನಾರಾಯಣ ಹಿರಿಯ ಸ್ವತಂತ್ರ‍್ಯ ಹೋರಾಟಗಾರ ಹೆಚ್ ನಾಗಭೂಷಣ ರಾವ್ ಅವರ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಸ್ವಾತಂತ್ರ‍್ಯ ಬಂದ ನಂತರ ದೀರ್ಘ ಕಾಲ ಕೆಲಸಗಳಲ್ಲಿ ವಿನಾಯಿತಿಗಳನ್ನು ಕೊಡುತ್ತ ಬಂದಿದ್ದರಿಂದ ಹಲವು ದುಷ್ಪರಿಣಾಮಗಳು ಆಗಿವೆ. ಆದರೆ ಇನ್ನು ಮುಂದೆ ಸ್ಪರ್ಧೆ ಮತ್ತು ಗುಣಮಟ್ಟಕ್ಕೆ ಮಾತ್ರ ಆದ್ಯತೆ ಇರಲಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಕೆಟ್ಟ ಶಕ್ತಿಗಳನ್ನು ಹತ್ತಿಕ್ಕಬೇಕು. ಇದರ ಬದಲಿಗೆ ಸಾತ್ವಿಕ ಶಕ್ತಿಗಳಿಗೆ ಮನ್ನಣೆ ಸಿಗಬೇಕು. ನಾಗಭೂಷಣ ರಾವ್ ವೈಯಕ್ತಿಕ ಬದುಕನ್ನು ಮರೆತು ದೇಶದ ಸ್ವತಂತ್ರ‍್ಯ ಕ್ಕಾಗಿ ಜೈಲುವಾಸ ಅನುಭವಿಸಿದ ಹಿರಿಯ ಜೀವವಾಗಿದ್ದಾರೆ. ಯಾವುದೇ ಸೌಲಭ್ಯಗಳನ್ನು ಬಯಸದ ಅವರ ವ್ಯಕ್ತಿತ್ವವು ಕಿರಿಯರಿಗೆ ಮಾದರಿಯಾಗಿದೆ ಎಂದು ಗೌರವ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಲ್ಲಿನ ಅನ್ನ ತಿಂದು ಪಾಕಿಸ್ತಾನಕ್ಕೆ ಜಿಂದಾಬಾದ್ ಅನ್ನೋರನ್ನು ನಾವು ಬಿಡಲ್ಲ: ಈಶ್ವರಪ್ಪ

ದೇಶದಲ್ಲಿ ಈಗ ಎನ್‌ಇಪಿ ಮೂಲಕ ಬಹು ಶಿಸ್ತೀಯ ಮತ್ತು ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣ ಆಗಲಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜಧಾನಿಯಲ್ಲಿ ದೋಷಗಳಿದ್ದರೆ ಸರಿಪಡಿಸೋಣ ಬೆದರಿಕೆ ಬೇಡ: ಅಶ್ವಥ್ ನಾರಾಯಣ

ನಮ್ಮ ಸುತ್ತಮುತ್ತ ಹೆಚ್ಚಿನವರು ವಿನಾ ಕಾರಣ ಪ್ರಸಿದ್ಧಿ ಹೊಂದಲು ಆತುರ ಪಡುತ್ತಾರೆ. ಆದರೆ ರಾವ್ ಅವರು ಸರ್ಕಾರದ ಮಾಸಾಶನವನ್ನೂ ಬಯಸದೆ, ತಮ್ಮ ನಿಸ್ವಾರ್ಥ ಗುಣವನ್ನು ಕಾಯ್ದುಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *