ರಷ್ಯಾದಿಂದ ಶೀಘ್ರದಲ್ಲೇ ಇನ್ನಷ್ಟು S-400 ಭಾರತಕ್ಕೆ – 10,000 ಕೋಟಿ ಡೀಲ್‌ ಫೈನಲ್‌

Public TV
2 Min Read

ನವದೆಹಲಿ: ರಷ್ಯಾದಿಂದ ಶೀಘ್ರದಲ್ಲೇ S-400 ವಾಯು ರಕ್ಷಣಾ ವ್ಯವಸ್ಥೆಗಾ0 (S 400 Air Defence)ಗಿ ಹೆಚ್ಚಿನ ಸಂಖ್ಯೆಯ ಕ್ಷಿಪಣಿಗಳನ್ನ ಖರೀದಿಸಲು ಭಾರತ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ 10,000 ಕೋಟಿ ರೂ. ಒಪ್ಪಂದ ಅಂತಿಮಗೊಳಿಸಲಾಗಿದೆ.

ವಾಯುಪಡೆಯ (Indian Air Force) ಗೇಮ್‌ ಚೇಂಜರ್‌ ಎಂದೇ ಗುರುತಿಸಿಕೊಂಡಿರುವ S-400 ವಾಯುರಕ್ಷಣಾ ವ್ಯವಸ್ಥೆ ಈಗಾಗಲೇ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ಆದ್ದರಿಂದ ವಾಯುರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸಲು ಎಸ್‌-400 ಖರೀದಿಗೆ ಭಾರತ ಮುಂದಾಗಿದೆ.

ಈ ಒಪ್ಪಂದದ ಕುರಿತು ಭಾರತ ಮತ್ತು ರಷ್ಯಾದ ನಡುವೆ ಮಾತುಕತೆ ಅಂತಿಮಗೊಂಡಿದೆ. ಅ.23ರಂದು ರಕ್ಷಣಾ ಸಚಿವಾಲಯದ ರಕ್ಷಣಾ ಸ್ವಾಧೀನ ಮಂಡಳಿಯು ಸಭೆ ಸೇರಲಿದ್ದು, ಅಧಿಕೃತ ಹೇಳಿಕೆಯನ್ನು ಪ್ರಕಟಿಸಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯ ಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಬ್ರಹ್ಮಾಸ್ತ್ರ – ಶೀಘ್ರದಲ್ಲೇ ಮಿಸೈಲ್ ಸಾಮರ್ಥ್ಯ 800 ಕಿಮೀಗೆ ಹೆಚ್ಚಳ

2018ರಲ್ಲಿ ಭಾರತ ಎಸ್‌-400 ವಾಯು ರಕ್ಷಣಾ ವ್ಯವಸ್ಥೆಗಳಿಗಾಗಿ ರಷ್ಯಾದೊಂದಿಗೆ 5.5 ಶತಕೋಟಿ ಡಾಲರ್‌ ಒಪ್ಪಂದಕ್ಕೆ ಸಹಿ ಹಾಕಿತ್ತು. ಚೀನಾದ (China) ಮಿಲಿಟರಿ ಶಕ್ತಿಯನ್ನು ಎದುರಿಸುವ ಉದ್ದೇಶದಿಂದ ಅಂದು ಭಾರತ, ರಷ್ಯಾ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದ್ರೆ ಈವರೆಗಿನ ಪೂರೈಕೆಯಲ್ಲಿ ವಿಳಂಬವಾಗಿತ್ತು. ಇದೀಗ ಈ ಒಪ್ಪಂದದ ಅಡಿಯಲ್ಲಿ ಕೊನೆಯ 2 ಘಟಕಗಳು 2026 ಮತ್ತು 2027ರ ವೇಳೆ ಭಾರತಕ್ಕೆ ಲಭ್ಯವಾಗಲಿದೆ. ಇದನ್ನೂ ಓದಿ: ಆರ್‌ಜಿ ಕರ್ ಅತ್ಯಾಚಾರ ಅಪರಾಧಿಯ ಅಪ್ರಾಪ್ತ ಸೊಸೆ ಶವ ಮನೆ ಕಪಾಟಿನಲ್ಲಿ ಪತ್ತೆ

ಆಪರೇಷನ್‌ ಸಿಂಧೂರದಲ್ಲಿ ಯಶಸ್ವಿ ಕಾರ್ಯಾಚರಣೆ
ಆಪರೇಷನ್ ಸಿಂಧೂರ ಸಮಯದಲ್ಲಿ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದವು. ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆಯು ಪಾಕ್‌ನ ಮಿಸೈಲ್‌, ಡ್ರೋನ್‌ಗಳನ್ನು ಹೊಡೆದುರುಳಿಸಿದ್ದವು. ಇದಾದ ಬಳಿಕ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಂದಲೂ ಎಸ್‌-400 ಗೆ ಬೇಡಿಕೆ ಹೆಚ್ಚಾಗಿತ್ತು. ಪಾಕ್‌ ಕೂಡ ಭಾರತಕ್ಕೆ ನೀಡಿರುವ ವಾಯು ರಕ್ಷಣಾ ವ್ಯವಸ್ಥೆಯನ್ನ ತಮಗೆ ಕೊಡುವಂತೆ ಮನವಿ ಮಾಡಿಕೊಂಡಿತ್ತು.

ಸುದರ್ಶನ ಚಕ್ರ ವಿಶೇಷತೆ ಏನು?
IAF ಸೇವೆಯಲ್ಲಿ ಸುದರ್ಶನ ಚಕ್ರ ಎಂದು ಕರೆಯಲ್ಪಡುವ S-400 ಟ್ರಯಂಫ್, ವಿಶ್ವದ ಅತ್ಯಂತ ಮುಂದುವರಿದ ದೀರ್ಘ-ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ರಷ್ಯಾ ನಿರ್ಮಿತ ಮತ್ತು ಭಾರತದ ಕಾರ್ಯತಂತ್ರದ ವಾಯು ರಕ್ಷಣಾ ಕಮಾಂಡ್‌ಗೆ ಇದು ಸಂಯೋಜಿಸಲ್ಪಟ್ಟದೆ. ರಹಸ್ಯ ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಾಯುಗಾಮಿ ಬೆದರಿಕೆಗಳನ್ನು ಪತ್ತೆಹಚ್ಚುವ ಮತ್ತು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಏಕಕಾಲಕ್ಕೆ 80 ಗುರಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಇದಕ್ಕಿದೆ.

Share This Article