ಬಚ್ಚಾ ರಾಹುಲ್ ಗಾಂಧಿಯಿಂದ ಮೋದಿ ಕಲಿಯುವ ಅಗತ್ಯವಿಲ್ಲ: ಶೋಭಾ ಕರಂದ್ಲಾಜೆ

Public TV
1 Min Read

ಬೀದರ್: ದೇಶದ ಅತ್ಯಂತ ದುರ್ಬಲ ಪ್ರಧಾನಿ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿಗೆ ಬೀದರ್‍ನಲ್ಲಿ ಶೋಭಾ ಕರಂದ್ಲಾಜೆ ಬಚ್ಚಾ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಬಚ್ಚಾ ರಾಹುಲ್ ಗಾಂಧಿಯಿಂದ ಪ್ರಧಾನಿ ನರೇಂದ್ರ ಮೋದಿ ಕಲಿಯುವ ಅಗತ್ಯವಿಲ್ಲ. ರಾಹುಲ್ ಗಾಂಧಿ ಅವರಿಗೆ ನಾನು ಉತ್ತರ ಹೇಳುವುದಿಲ್ಲ. ಮೊದಲು ಅವರು ಪಕ್ಷದಲ್ಲಿರುವ ಹುಳುಕನ್ನು ಸರಿಪಡಿಸಲಿ ಎಂದು ಅವರು ಹೇಳಿದರು.

ಮೋದಿ ಅವರಿಂದಾಗಿ ಭಾರತವನ್ನು ಈಗ ಇಡೀ ವಿಶ್ವವೇ ನೋಡುತ್ತಿದೆ. ಮೊದಲ ಬಾರಿಗೆ ಇಸ್ರೇಲ್‍ಗೆ ಹೋಗುವ ಎದೆಗಾರಿಕೆಯನ್ನು ಮೋದಿ ತೋರಿಸಿದ್ದಾರೆ. ಮೋದಿ ಅವರ ಸಾಧನೆ ಏನು ಎನ್ನುವ ಪ್ರಶ್ನೆಗೆ ವಿಶ್ವವೇ ಉತ್ತರಿಸುತ್ತದೆ ಎಂದು ಹೇಳಿದರು.

ನೈಸ್ ವಿರುದ್ಧ ಗರಂ: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಟೋಲ್ ದರ ಹೆಚ್ಚಳ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಭಾಗದಲ್ಲಿ ಇನ್ನು ದುಬಾರಿ ಶುಲ್ಕದ ವಸೂಲಿ ಬಗ್ಗೆ ಹೋರಾಟಗಳು ನಡೆಯುತ್ತಿವೆ. ಯಶವಂತಪುರ ಶಾಸಕಿಯಾಗಿದ್ದಾಗ ನಾನು ಪ್ರತಿಭಟನೆ ನಡೆಸಿದ್ದೇನೆ. ಕೂಡಲೇ ಟೋಲ್ ದರ ಕಡಿಮೆಯಾಗಬೇಕು. ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಿ ಸೂಕ್ತ ಕ್ರಮತೆಗೆದುಕೊಳ್ಳಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.

https://twitter.com/OfficeOfRG/status/882497684501868544

Share This Article