Public TVPublic TVPublic TV
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Reading: ಭಾರತದ ಕೈ ಸೇರಿದ ಸ್ವಿಸ್ ಬ್ಯಾಂಕ್ ಖಾತೆದಾರರ ಮೊದಲ ಪಟ್ಟಿ
Notification Show More
Font ResizerAa
Public TVPublic TV
Font ResizerAa
  • Home
  • Latest
  • LIVE
  • State
  • Districts
  • National
  • World
  • Stories
  • Cinema
  • Crime
  • Court
  • Sports
  • Tech
  • Automobile
  • Food
  • Explainer
  • Videos
Search
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Follow US
Latest

ಭಾರತದ ಕೈ ಸೇರಿದ ಸ್ವಿಸ್ ಬ್ಯಾಂಕ್ ಖಾತೆದಾರರ ಮೊದಲ ಪಟ್ಟಿ

Public TV
Last updated: October 7, 2019 5:47 pm
By Public TV
Share
2 Min Read

ನವದೆಹಲಿ: ಸ್ವಿಸ್ ಬ್ಯಾಂಕ್‍ನಲ್ಲಿ ಭಾರತೀಯರು ಹೊಂದಿರುವ ಖಾತೆಗಳ ವಿವರಗಳ ಮೊದಲ ಪಟ್ಟಿ ಭಾರತದ ಕೈಸೇರಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಕಪ್ಪು ಹಣ ವಾಪಸ್ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ನಡೆಗೆ ಮಹತ್ವದ ಮುನ್ನಡೆ ಲಭಿಸಿದೆ.

ಭಾರತ ಸರ್ಕಾರ ಹಾಗೂ ಸ್ವಿಜರ್ಲೆಂಡ್ ನಡುವೆ ನಡೆದಿರುವ ಒಪ್ಪಂದದ ಅನ್ವಯ ಮಾಹಿತಿಯನ್ನು ಹಂಚಿಕೆ ಮಾಡಿಕೊಳ್ಳಲಿದ್ದು, ಈ ಬೆಳವಣಿಗೆಯನ್ನು ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶಿಗಳಲ್ಲಿ ಕಪ್ಪು ಹಣವಾಗಿಟ್ಟಿದ್ದ ಪತ್ತೆಯ ಕಾರ್ಯದಲ್ಲಿ ಹೊಸ ಮೈಲಿಗಲ್ಲು ಎಂದು ವಿಶ್ಲೇಷಿಸಲಾಗಿದೆ.

ಭಾರತ ಸೇರಿದಂತೆ ವಿಶ್ವದ 75 ರಾಷ್ಟ್ರಗಳು ತಮ್ಮ ತಮ್ಮ ದೇಶಗಳ ಜನರು ಸ್ವಿಸ್‍ನಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಲು ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸ್ವಿಸ್ ಬ್ಯಾಂಕ್‍ನಲ್ಲಿ ಖಾತೆ ಹೊಂದಿರುವ ಮಾಹಿತಿಯನ್ನು ಸ್ವಯಂಚಾಲಿತ ಮಾಹಿತಿ ವಿನಿಮಯ (ಎಇಒಐ) ವ್ಯವಸ್ಥೆ ಅಡಿ ನೀಡಲಾಗಿದೆ. ಇದರಂತೆ ಭಾರತ ಮಾತ್ರವಲ್ಲದೇ ಸ್ವಿಜರ್ಲೆಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟೇಷನ್ (ಎಫ್‍ಟಿಎ) ಅಡಿ 75 ರಾಷ್ಟ್ರಗಳ ಒಟ್ಟು 3.1 ಮಿಲಿಯನ್ ಬ್ಯಾಂಕ್ ಖಾತೆದಾರರ ಮಾಹಿತಿಯನ್ನು ಸ್ವಿಸ್ ಆಯಾ ದೇಶಗಳಿಗೆ ನೀಡಿದೆ.

ಸದ್ಯ ಮೊದಲ ಪಟ್ಟಿ ಲಭ್ಯವಾಗಿದ್ದು ಮುಂದಿನ ಪಟ್ಟಿಯನ್ನು ನಿಮಯಗಳ ಅನ್ವಯ 2020 ಸೆಪ್ಟೆಂಬರ್ ನಲ್ಲಿ ನೀಡುವುದಾಗಿ ಎಫ್‍ಟಿಎ ವಕ್ತಾರರು ತಿಳಿಸಿದ್ದಾರೆ.

More Read

ಬಿಹಾರ ಎಸ್‌ಐಆರ್‌ಗೆ ಪುರಾವೆಯಾಗಿ ಆಧಾರ್ ಕಾರ್ಡ್ ಸ್ವೀಕರಿಸಬೇಕು: ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ಅನನ್ಯಾ ಭಟ್‌ ಫೋಟೋ ಕೇಳಿದಾಗ ಮಾಡೆಲ್‌ ಫೋಟೋ ಕಳಿಸಿದ್ದರು ಸುಜಾತ ಭಟ್: ಗಿರೀಶ್‌ ಮಟ್ಟಣ್ಣನವರ್‌

ಭಾರತಕ್ಕೆ ಇದೇ ಮೊದಲ ಬಾರಿಗೆ ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿ ಲಭ್ಯವಾಗಿದ್ದು, ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟಕ್ಕೆ ಬಹುದೊಡ್ಡ ಮಾಹಿತಿ ಲಭ್ಯವಾಗಿದೆ. ಸದ್ಯ ಸ್ವಿಸ್ ನೀಡಿರುವ ಬ್ಯಾಂಕ್ ಖಾತೆಗಳನ್ನು ಹೊಂದಿರುವವರ ಪಟ್ಟಿಯಲ್ಲಿ ನಿಯಮಗಳ ಅನ್ವಯ ತೆರಿಗೆ ಪಾವತಿ ಮಾಡಿ ಉದ್ಯಮ ನಡೆಸಲು ತೆರಳಿದ ವ್ಯಕ್ತಿಗಳ ಮಾಹಿತಿಯೂ ಇದ್ದು, ಸರ್ಕಾರ ಈ ಮಾಹಿತಿಯನ್ನು ಹೆಚ್ಚಿನ ವಿಶ್ಲೇಷಣೆಗೆ ಒಳಪಡಿಸಿ ಮುಂದಿನ ಕ್ರಮಗೊಳ್ಳಬೇಕಿದೆ.

ಸದ್ಯ ಲಭಿಸಿರುವ ಪಟ್ಟಿಯಲ್ಲಿ ಹಣಕಾಸಿನ ಸಂಸ್ಥೆಯ ಹೆಸರು, ಗುರುತಿನ ಚೀಟಿ ಮಾಹಿತಿ, ಖಾತೆಯ ಹಣಕಾಸಿನ ವಿವರ, ಹೆಸರು, ವಿಳಾಸ, ರಾಜ್ಯ ಮತ್ತು ತೆರಿಗೆ ಸೇರಿದಂತೆ ಖಾತೆಯ ಹಣಕಾಸಿನ ಸ್ಥಿತಿ, ಖಾತೆಯಲ್ಲಿನ ಹಣದ ಮೊತ್ತ ಹಾಗೂ ಆದಾಯದ ಕುರಿತ ಮಾಹಿತಿಗಳನ್ನು ನೀಡಲಾಗಿದೆ. ಅಲ್ಲದೇ ಸದ್ಯ ಬ್ಯಾಂಕ್‍ನಲ್ಲಿ ಸಕ್ರಿಯವಾಗಿರುವ ಹಾಗೂ 2018 ರಲ್ಲಿ ರದ್ದಾದ ಖಾತೆಗಳ ಮಾಹಿತಿಯನ್ನು ನೀಡಲಾಗಿದೆ.

ಸ್ವಿಜರ್ಲೆಂಡ್ ಸರ್ಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಹಾಗೂ ಗಡಿಯಾಚೆಗಿನ ತೆರಿಗೆಯನ್ನು ತಪ್ಪಿಸಲು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಸ್ವಿಜ್ ವಿದೇಶಾಂಗ ಸಚಿವಾಲಯ ಹೇಳಿದೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೋದಿ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕಪ್ಪುಹಣ ವಾಪಸ್ ತರಲಾಗುತ್ತದೆ ಎಂದಿದ್ದರು. ಆದರೆ ಈ ಕುರಿತು ಮೋದಿ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಲಾಗಿತ್ತು. 2018ರ ಚುನಾವಣೆಯ ಸಂದರ್ಭದಲ್ಲಿ ಈ ಅಂಶವನ್ನೇ ವಿಪಕ್ಷಗಳು ಅಸ್ತ್ರವಾಗಿ ಬಳಕೆ ಮಾಡಿದ್ದರು. ಮೋದಿ ಸರ್ಕಾರ ಕಪ್ಪು ಹಣದ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಆರೋಪ ಕೂಡ ಕೇಳಿ ಬಂದಿತ್ತು.

Share This Article
Facebook Whatsapp Whatsapp Telegram
Previous Article ನೈಸ್ ರಸ್ತೆ ಗುಂಡಿಮಯ- ವಾರದೊಳಗೆ ಗುಂಡಿ ಮುಚ್ಚುವಂತೆ ಖೇಣಿಗೆ ಡಿಸಿಎಂ ಅಶ್ವತ್ಥ ನಾರಾಯಣ ಗಡುವು
Next Article ‘ಯುವರತ್ನ’ ಟೀಸರ್ ರಿಲೀಸ್ – ರಗ್ಬಿ ಆಟಗಾರನಾದ ಪುನೀತ್
Leave a Comment

Leave a Reply

Your email address will not be published. Required fields are marked *

Popular News

ಅನಾರೋಗ್ಯ ಕಾರಣಕ್ಕೆ ಶನಿವಾರ ವಿಚಾರಣೆಗೆ ಬರಲ್ಲ, ಆ.29ಕ್ಕೆ ಹಾಜರಾಗ್ತೀನಿ: ಎಸ್‌ಐಟಿಗೆ ಸುಜಾತಾ ಭಟ್‌ ಪತ್ರ
ಗಿರೀಶ್ ಮಟ್ಟಣ್ಣನವರ್ ಚಿತ್ರಕಥೆ, ಸಮೀರ್ ಸ್ಕ್ರೀನ್‌ಪ್ಲೇಗೆ ಬಲಿಯಾದ್ರಾ ಸುಜಾತ ಭಟ್?
Public TVPublic TV