ಕಚ್ಚಾ ತೈಲ ಮೇಲಿನ ವಿಂಡ್‌ಫಾಲ್‌ ತೆರಿಗೆ ಕಡಿತಗೊಳಿಸಿದ ಭಾರತ

Public TV
1 Min Read

ನವದೆಹಲಿ: ಕೇಂದ್ರ ಸರ್ಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಚ್ಚಾ ತೈಲದ (Crude Oil) ಮೇಲಿನ ಎಲ್ಲಾ ವಿಂಡ್‌ಫಾಲ್‌ ತೆರಿಗೆ (Windfall Tax) ಕಡಿತಗೊಳಿಸಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

ತೈಲ ಉತ್ಪಾದಿಸುವ ಒಪೆಕ್‌ (OPEC) ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿ ತೈಲದ ಬೆಲೆ ಏರಿಸಿದ ಪರಿಣಾಮವಾಗಿ ಕೇಂದ್ರ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ. ಪ್ರತಿ ಟನ್‌ಗೆ 3,500 ರೂ. ವಿಂಡ್‌ಫಾಲ್‌ ತೆರಿಗೆ ಇತ್ತು. ಇದನ್ನೂ ಓದಿ: ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

ಒಪೆಕ್‌ ರಾಷ್ಟ್ರಗಳು 1.6 ದಶಲಕ್ಷ ಬ್ಯಾರೆಲ್‌ ಪರ್‌ ಡೇ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದವು.

ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿ ಮಾಡಿದ ಬಳಿಕ ದೇಶೀಯ ತೈಲ ಕಂಪನಿಗಳು ಸಂಸ್ಕರಿಸಿ ವಿದೇಶಗಳಿಗೆ ಮಾರುತ್ತಿದ್ದವು. ಇದನ್ನು ಮನಗಂಡ ಕೇಂದ್ರ ಸರ್ಕಾರ ವಿದೇಶಗಳಿಗೆ ರಫ್ತು ಮಾಡುವ ತೈಲಗಳಿಗೆ ವಿಂಡ್‌ಫಾಲ್‌ ತೆರಿಗೆ ಹೆಚ್ಚಿಸಿತ್ತು. ಇದನ್ನೂ ಓದಿ: ತಾಯಿಯ ಅಮೆಜಾನ್ ಖಾತೆಯಲ್ಲಿ ಬರೋಬ್ಬರಿ 2.47 ಲಕ್ಷದ ಸಾಮಾಗ್ರಿ ಆರ್ಡರ್ ಮಾಡಿದ ಬಾಲಕಿ

ಕೇಂದ್ರವು ಕಳೆದ ವರ್ಷ ಜುಲೈನಲ್ಲಿ ಕಚ್ಚಾ ತೈಲದ ಮೇಲೆ ಪ್ರತಿ ಟನ್‌ಗೆ 23,250 ರೂ. ಸೆಸ್ ವಿಧಿಸಿತ್ತು. ಅಂದಿನಿಂದ ಸರ್ಕಾರವು ಕಾಲಕಾಲಕ್ಕೆ ಕಚ್ಚಾ ತೈಲದ ಮೇಲಿನ ವಿಂಡ್‌ಫಾಲ್ ತೆರಿಗೆಯನ್ನು ಕಡಿಮೆ ಮಾಡುತ್ತಿದೆ.

Share This Article