ಭಾರತಕ್ಕೆ ಬರಲಿದೆ ರಷ್ಯಾ ತೈಲ – ಅಂತಿಮ ಹಂತದಲ್ಲಿ ಮಾತುಕತೆ

By
1 Min Read

ನವದೆಹಲಿ: ರಷ್ಯಾ ತನ್ನ ಕಚ್ಚಾ ತೈಲದ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಇಳಿಸಿದ್ದು, ಭಾರತ ಇದೀಗ ರಷ್ಯಾದಿಂದ ಭಾರೀ ಪ್ರಮಾಣದ ತೈಲ ಖರೀದಿಗೆ ಮುಂದಾಗಿದೆ.

ಭಾರೀ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ 3.5 ಮಿಲಿಯನ್(35 ಲಕ್ಷ) ಬ್ಯಾರೆಲ್ ತೈಲ ಖರೀದಿಗೆ ಮುಂದಾಗಿದೆ. ಆದರೆ ಅದನ್ನು ಭಾರತಕ್ಕೆ ತರಿಸುವುದು ಸವಾಲಿನ ವಿಷಯವಾಗಿತ್ತು. ಇದೀಗ ರಷ್ಯಾ ಶಿಪ್ಪಿಂಗ್ ಮತ್ತು ವಿಮೆಯ ಜವಾಬ್ದಾರಿ ವಹಿಸಿದ್ದು ಭಾರತಕ್ಕೆ ತೈಲ ರವಾನಿಸುವಲ್ಲಿ ಸಹಾಯ ಮಾಡುವುದಾಗಿ ತಿಳಿಸಿದೆ.

ಭಾರತ ರಷ್ಯಾದಿಂದ ತರಿಸಿಕೊಳ್ಳುತ್ತಿರುವ ತೈಲದ ಸ್ಥಳಾಂತರ ಹಾಗೂ ಸಬ್ಸಿಡಿಗಳ ಬಗ್ಗೆ ರಷ್ಯಾ ಜವಾಬ್ದಾರಿವಹಿಸುತ್ತದೆ ಎಂದು ತಿಳಿಸಿದೆ. ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಈರುಳ್ಳಿ, ಆಲೂಗಡ್ಡೆ ತಿಂದು ಯುದ್ಧ ಮಾಡುತ್ತಿದ್ದಾರೆ ರಷ್ಯಾ ಸೈನಿಕರು

ಸದ್ಯ ರಷ್ಯಾ ಭಾರತದ ಬೇಡಿಕೆಯನ್ನು ಕೆಲವೇ ತಿಂಗಳುಗಳಲ್ಲಿ ಪೂರೈಸಲಿದೆ ಎಂದು ತಿಳಿಸಿದೆ. ಭಾರತ ಶೇ.85 ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಏಪ್ರಿಲ್ 2021 ಹಾಗೂ ಜನವರಿ 2022ರ ನಡುವೆ ರಷ್ಯಾದಿಂದ 176 ಮಿಲಿಯನ್(1.76 ಕೋಟಿ) ಟನ್‌ಗಳಷ್ಟು ಅಂದರೆ ಭಾರತದ ಬೇಡಿಕೆಯ ಶೇ.2 ರಷ್ಟು ಕಚ್ಚ ತೈಲವನ್ನು ಆಮದು ಮಾಡಿಕೊಂಡಿತ್ತು. ಇದನ್ನೂ ಓದಿ: ಅಗ್ಗದ ದರದಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಮುಂದಾದ ಭಾರತ- ಅಮೆರಿಕ ಹೇಳಿದ್ದೇನು?

ರಷ್ಯಾದೊಂದಿಗೆ ಡಾಲರ್ ಮೂಲಕ ವ್ಯವಹಾರ ನಡೆಸಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಾಗಿ ರುಪಿ ರೂಬೆಲ್ ಮೂಲಕ ವ್ಯವಹಾರ ನಡಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಇದು ಅಂತಿಮವಾಗಲಿದೆ ಎಂದು ಮೂಲಗಳು ತಿಳಿಸಿವೆ.

Share This Article
Leave a Comment

Leave a Reply

Your email address will not be published. Required fields are marked *