97 LCA ಮಾರ್ಕ್ 1A ಫೈಟರ್ ಜೆಟ್‌ ಖರೀದಿಗೆ 62,000 ಕೋಟಿ ರೂ. ಒಪ್ಪಂದಕ್ಕೆ ಭಾರತ ಅನುಮೋದನೆ

Public TV
1 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (PM Modi) ರಕ್ಷಣಾ ಯೋಜನೆಯಾದ ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡಲು, ಭಾರತೀಯ ವಾಯುಪಡೆಗೆ 97 ಎಲ್‌ಸಿಎ ಮಾರ್ಕ್ 1ಎ ಫೈಟರ್ ಜೆಟ್‌ಗಳನ್ನು ಖರೀದಿಸುವ ಯೋಜನೆಗೆ ಮಂಗಳವಾರ ಭಾರತ ಅನುಮೋದನೆ ನೀಡಿದೆ.

ಬುಧವಾರ ನಡೆದ ಉನ್ನತ ಮಟ್ಟದ ಸಭೆಯಲ್ಲಿ 97 LCA ಮಾರ್ಕ್ 1A ಯುದ್ಧವಿಮಾನಗಳ ಸ್ವಾಧೀನಕ್ಕೆ ಅಂತಿಮ ಅನುಮೋದನೆಯನ್ನು ನೀಡಿದ್ದು, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವಿಮಾನಗಳನ್ನು ಉತ್ಪಾದಿಸಲು ದಾರಿ ಮಾಡಿಕೊಡುತ್ತದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯೋಧನಿಗೆ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ ಕೇಸ್ – 20 ಲಕ್ಷ ದಂಡ ವಿಧಿಸಿದ NHAI

ಸರ್ಕಾರವು ಕೆಲವು ವರ್ಷಗಳ ಹಿಂದೆ ಸುಮಾರು 48,000 ಕೋಟಿ ರೂ.ಗೆ 83 ವಿಮಾನಗಳಿಗೆ ಆರ್ಡರ್‌ ನೀಡಿರುವುದು, LCA ಮಾರ್ಕ್ 1A ಯುದ್ಧವಿಮಾನಗಳಿಗೆ ಎರಡನೇ ಆರ್ಡರ್ ಆಗಿರುತ್ತದೆ. ಮುಂದಿನ ಕೆಲವು ವಾರಗಳಲ್ಲಿ ಸರ್ಕಾರವು ಹಂತಹಂತವಾಗಿ ಸ್ಥಗಿತಗೊಳಿಸುತ್ತಿರುವ ಮಿಗ್-21 ವಿಮಾನಗಳ ಸಮೂಹವನ್ನು ಬದಲಾಯಿಸಲು ಈ ಕಾರ್ಯಕ್ರಮವು ಐಎಎಫ್‌ಗೆ ಸಹಾಯ ಮಾಡುತ್ತದೆ ಎಂದು ಹೇಳಿದೆ.

ರಕ್ಷಣಾ ಸಚಿವಾಲಯ ಮತ್ತು ವಾಯುಪಡೆಯ ಪ್ರಧಾನ ಕಚೇರಿಯ ಸಂಪೂರ್ಣ ಬೆಂಬಲದೊಂದಿಗೆ ದೇಶೀಯ ಯುದ್ಧ ವಿಮಾನ ಕಾರ್ಯಕ್ರಮವು ದೇಶೀಕರಣವನ್ನು ಉತ್ತೇಜನ ನೀಡಲಿದೆ. ದೇಶಾದ್ಯಂತ ರಕ್ಷಣಾ ವ್ಯವಹಾರದಲ್ಲಿ ತೊಡಗಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪ್ರಮುಖ ವ್ಯವಹಾರವನ್ನು ನೀಡುತ್ತದೆ. ಇದನ್ನೂ ಓದಿ: ಭಾರೀ ಮಳೆಗೆ ವಿದ್ಯುತ್ ಸಮಸ್ಯೆ – ಮಾರ್ಗ ಮಧ್ಯದಲ್ಲೇ ನಿಂತ ಮೋನೋ ರೈಲು

Share This Article