ಉಗ್ರರ ದಾಳಿಯಿಂದ 20,000 ಭಾರತೀಯರು ಸಾವು: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಭಾರತ ಕಿಡಿ

Public TV
1 Min Read

ನವದೆಹಲಿ: ಕಳೆದ ನಾಲ್ಕು ದಶಕಗಳಲ್ಲಿ ಭಯೋತ್ಪಾದಕ ದಾಳಿಯಲ್ಲಿ 20,000 ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಯುಎನ್‌ನಲ್ಲಿ (UN) ಪಾಕಿಸ್ತಾನ (Pakistan) ವಿರುದ್ಧ ಭಾರತ (India) ಗುಡುಗಿದೆ.

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಅಮಾನತುಗೊಂಡ ಸಿಂಧೂ ಜಲ ಒಪ್ಪಂದದ ಕುರಿತು ಪಾಕಿಸ್ತಾನ ತಪ್ಪು ಮಾಹಿತಿ ನೀಡುತ್ತಿದೆ ಎಂದು ಭಾರತ ಶನಿವಾರ ಟೀಕಿಸಿದೆ. ಭಯೋತ್ಪಾದನೆಯ ಜಾಗತಿಕ ಕೇಂದ್ರವಾಗಿರುವ ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ನಿಲ್ಲಿಸುವವರೆಗೆ 65 ವರ್ಷಗಳಷ್ಟು ಹಳೆಯದಾದ ಒಪ್ಪಂದವು ಸ್ಥಗಿತಗೊಳ್ಳುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‌| ಜೆಜೆಎಂಪಿ ಮುಖ್ಯಸ್ಥ ಪಪ್ಪು ಲೋಹ್ರಾ ಸೇರಿ ಇಬ್ಬರು ನಕ್ಸಲ್‌ ನಾಯಕರ ಎನ್‌ಕೌಂಟರ್‌

ಪಾಕಿಸ್ತಾನಿ ಪ್ರತಿನಿಧಿಯು ವಿಶ್ವಸಂಸ್ಥೆಯಲ್ಲಿ ಒಪ್ಪಂದದ ವಿಷಯವನ್ನು ಪ್ರಸ್ತಾಪಿಸಿ, ನೀರು ಜೀವನ, ಯುದ್ಧದ ಆಯುಧವಲ್ಲ ಎಂದು ಹೇಳಿತು. ಇದಕ್ಕೆ ಭಾರತದ ಪ್ರತಿನಿಧಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ನದಿ ತೀರದ ಮೇಲ್ಭಾಗದ ರಾಜ್ಯವಾಗಿ ಭಾರತ ಯಾವಾಗಲೂ ಜವಾಬ್ದಾರಿಯುತ ರೀತಿಯಲ್ಲಿ ವರ್ತಿಸಿದೆ ಹರೀಶ್ ತಿಳಿಸಿದ್ದಾರೆ.

ಭಾರತವು 65 ವರ್ಷಗಳ ಹಿಂದೆ ಉತ್ತಮ ನಂಬಿಕೆಯಿಂದ ಸಿಂಧೂ ಜಲ ಒಪ್ಪಂದವನ್ನು ಮಾಡಿಕೊಂಡಿತು. ಆ ಒಪ್ಪಂದದ ಮುನ್ನುಡಿಯು ಅದನ್ನು ಹೇಗೆ ಉತ್ಸಾಹ ಮತ್ತು ಸ್ನೇಹದಿಂದ ತೀರ್ಮಾನಿಸಲಾಯಿತು ಎಂಬುದನ್ನು ವಿವರಿಸುತ್ತದೆ. ಆರುವರೆ ದಶಕಗಳಲ್ಲಿ ಪಾಕಿಸ್ತಾನವು ಭಾರತದ ಮೇಲೆ ಮೂರು ಯುದ್ಧಗಳು ಮತ್ತು ಸಾವಿರಾರು ಭಯೋತ್ಪಾದಕ ದಾಳಿಗಳನ್ನು ನಡೆಸುವ ಮೂಲಕ ಆ ಒಪ್ಪಂದದ ಚೈತನ್ಯವನ್ನು ಉಲ್ಲಂಘಿಸಿದೆ ಟೀಕಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಐಫೋನ್‌ ತಯಾರಿಸಿದರೆ 25% ಸುಂಕ – ಆಪಲ್‌ಗೆ ಟ್ರಂಪ್‌ ವಾರ್ನಿಂಗ್‌

ಈ ಅವಧಿಯಲ್ಲಿ ಭಾರತವು ಅಸಾಧಾರಣ ತಾಳ್ಮೆ ಮತ್ತು ಔದಾರ್ಯವನ್ನು ತೋರಿಸಿದೆ. ಭಾರತದಲ್ಲಿ ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಯು ನಾಗರಿಕರ ಜೀವನ, ಧಾರ್ಮಿಕ ಸಾಮರಸ್ಯ ಮತ್ತು ಆರ್ಥಿಕ ಸಮೃದ್ಧಿಯನ್ನು ಒತ್ತೆಯಾಳಾಗಿ ಇರಿಸಲು ಪ್ರಯತ್ನಿಸುತ್ತದೆ ಎಂದು ಪಾಕ್‌ ವಿರುದ್ಧ ಗುಡುಗಿದ್ದಾರೆ.

Share This Article