200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್‌ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ

Public TV
3 Min Read

ತರೌಬಾ (ಟ್ರಿನಿಡಾಡ್): ವೆಸ್ಟ್‌ ಇಂಡೀಸ್‌ (West Indies) ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭರ್ಜರಿ 200 ರನ್‌ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ (Team India) ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 351 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನತ್ತಿದ ವಿಂಡೀಸ್‌ 151 ರನ್‌ಗಳಿಗೆ ಆಲೌಟ್‌ ಆಯ್ತು. ಈ ಮೂಲಕ ತವರಿನಲ್ಲಿ ವಿಂಡೀಸ್‌ ಸತತ 6ನೇ ಸರಣಿ ಸೋತರೆ, ವಿಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ (One Day Series) ಗೆದ್ದುಕೊಂಡಂತಾಗಿದೆ.

ಬ್ಯಾಟಿಂಗ್‌ ಆರಂಭಿಸಿದ ವಿಂಡೀಸ್‌ ಮೊದಲ ಓವರ್‌ನಿಂದಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿತ್ತು. ಒಂದು ಹಂತದಲ್ಲಿ 88 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯಲ್ಲಿ ಬೌಲರ್‌ಗಳಾದ ಅಲ್ಜಾರಿ ಜೋಸೆಫ್ 26 ರನ್‌, ಗುಡಾಕೇಶ್ ಮೋತಿ ಔಟಾಗದೇ 39 ರನ್‌ ಚಚ್ಚಿದ ಪರಿಣಾಮ ತಂಡದ ಮೊತ್ತ 150 ರನ್‌ಗಳ ಗಡಿ ದಾಟಿತು.

ಶಾರ್ದೂಲ್‌ ಠಾಕೂರ್‌ 4, ಮುಕೇಶ್‌ ಕುಮಾರ್‌ 3 ವಿಕೆಟ್‌ ಪಡೆದರೆ ಕುಲದೀಪ್‌ ಯಾದವ್‌ 2, ಜಯದೆವ್‌ ಉನದ್ಕತ್‌ 1 ವಿಕೆಟ್‌ ಪಡೆದರು. ಇದನ್ನೂ ಓದಿ: IND vs WI: ಹ್ಯಾಟ್ರಿಕ್‌ ಅರ್ಧ ಶತಕ ಸಿಡಿಸಿ ಮಹಿ ದಾಖಲೆ ಸರಿಗಟ್ಟಿದ ಇಶಾನ್‌ ಕಿಶನ್‌

ಭಾರತದ ಭರ್ಜರಿ ಮೊತ್ತ:
ಎರಡು ಪಂದ್ಯಗಳಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಬೇಗನೇ ಔಟಾಗಿದ್ದು ಬಹಳ ಟೀಕೆಗೆ ಗುರಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಬಂದಿತ್ತು. ಇಶಾನ್‌ ಕಿಶನ್‌ (Ishan Kishan) ಮತ್ತು ಶುಭಮನ್‌ ಗಿಲ್‌ (Shubman Gill) ಮೊದಲ ವಿಕೆಟಿಗೆ 118 ಎಸೆತಗಳಲ್ಲಿ 143 ರನ್‌ ಜೊತೆಯಾಟವಾಡಿದರು.

ಇಶಾನ್‌ ಕಿಶನ್‌ 77 ರನ್‌ (64 ಎಸೆತ, 8 ಬೌಂಡರಿ, 3 ಸಿಕ್ಸರ್)‌ ಹೊಡೆದು ಔಟಾದರು. ಋತ್‌ರಾಜ್‌ ಗಾಯಕ್‌ವಾಡ್‌ 8 ರನ್‌ ಗಳಿಸಿ ಔಟಾದದರೂ ನಂತರ ಸಂಜು ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್‌ ಮಾಡಿದರು. ಸ್ಯಾಮ್ಸನ್‌ 51 ರನ್‌ (41 ಎಸೆತ, 2 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದ ಬೆನ್ನಲ್ಲೇ ಶುಭಮನ್‌ ಗಿಲ್‌ 85 ರನ್‌ (92 ಎಸೆತ, 11 ಬೌಂಡರಿ) ಗಳಿಸಿ ಔಟಾದರು.

ಹಾರ್ದಿಕ್‌ ಪಾಂಡ್ಯ (Hardik Pandya) ಮತ್ತು ಸೂರ್ಯಕುಮಾರ್‌ ಯಾದವ್‌ (Suryakumar Yadav) 49 ಎಸೆತಗಳಲ್ಲಿ 65 ರನ್‌ ಚಚ್ಚಿದರು. ಸೂರ್ಯಕುಮಾರ್‌ ಔಟಾದ ಬಳಿಕ ನಾಯಕ ಪಾಂಡ್ಯ ವಿಂಡೀಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪರಿಣಾಮ ಮುರಿಯದ 6ನೇ ವಿಕೆಟಿಗೆ ಜಡೇಜಾ ಜೊತೆಗೂಡಿ ಕೇವಲ 19 ಎಸೆತಗಳಲ್ಲಿ 42 ರನ್‌ ಜೊತೆಯಾಟವಾಡಿದರು. ಈ ಪೈಕಿ ಜಡೇಜಾ 7 ಎಸೆತ ಎದುರಿಸಿ 8 ರನ್‌ ಹೊಡೆದರೆ ಪಾಂಡ್ಯ 12 ಎಸೆತಗಳಲ್ಲಿ 34 ರನ್‌ ಹೊಡೆದರು. ಅಂತಿಮವಾಗಿ ಪಾಂಡ್ಯ ಔಟಾಗದೇ 70 ರನ್‌ (52 ಎಸೆತ, 4 ಬೌಂಡರಿ, 5 ಸಿಕ್ಸರ್‌) ಹೊಡೆದು ತಂಡದ ಮೊತ್ತವನ್ನು 350 ರನ್‌ಗಳ ಗಡಿಯನ್ನು ದಾಟಿಸುವಲ್ಲಿ ಸಫಲರಾದರು.

ಶುಭಮನ್‌ ಗಿಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ ಇಶಾನ್‌ ಕಿಶನ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ರನ್‌ ಏರಿದ್ದು ಹೇಗೆ?
50 ರನ್‌ – 47 ಎಸೆತ
100 ರನ್‌ – 80 ಎಸೆತ
150 ರನ್‌ – 134 ಎಸೆತ
200 ರನ್‌ – 170 ಎಸೆತ
250 ರನ್‌ – 243 ಎಸೆತ
300 ರನ್‌ – 275 ಎಸೆತ
350 ರನ್‌ – 300 ಎಸೆತ

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್