ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಕೊನೆ ಪಂದ್ಯದಲ್ಲಿ ಭಾರತ ತಂಡ 6 ರನ್‌ಗಳ ಜಯ ಸಾಧಿಸಿದೆ. ಅದರೊಂದಿಗೆ 4-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. 161 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಇದನ್ನೂ ಓದಿ: ಐಪಿಎಲ್ 2024 ಮಿನಿ ಹರಾಜಿನ ಅಧಿಕೃತ ದಿನಾಂಕ ಪ್ರಕಟ – 1166 ಆಟಗಾರರು ನೋಂದಣಿ
ಕೊನೆ ಓವರ್‌ನಲ್ಲಿ ಆಸೀಸ್‌ಗೆ ಗೆಲ್ಲಲು 10 ರನ್ ಬೇಕಿತ್ತು. ನಾಯಕ ಮ್ಯಾಥ್ಯೂ ವೇಡ್ ಕ್ರೀಸ್‌ನಲ್ಲಿದ್ದರು. ಅರ್ಶದೀಪ್ ಸಿಂಗ್ ಉತ್ತಮ ಬೌಲಿಂಗ್ ಮಾಡಿ ಕೇವಲ 3 ರನ್ ಕೊಟ್ಟರು. ಜೊತೆಗೆ ವೇಡ್ ಅವರ ವಿಕೆಟ್ ಕಿತ್ತರು. ಆ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 28, ಬೆನ್ ಮೆಕ್‌ಡೆರ್ಮೊಟ್ 54 (5 ಸಿಕ್ಸರ್) ಬಾರಿಸಿದರು. ಟಿಮ್ ಡೇವಿಡ್ 17, ಮ್ಯಾಥ್ಯೂ ಶಾರ್ಟ್ 16, ಮ್ಯಾಥ್ಯೂ ವೇಡ್ 22 ರನ್ ಗಳಿಸಿದರು. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನಕ್ಕೆ ಅವಮಾನ – ಟ್ರಕ್‌ಗೆ ಲಗೇಜ್ ಲೋಡ್ ಮಾಡಿದ ಆಟಗಾರರು
ಭಾರತದ ಪರ ಮುಕೇಶ್ ಕುಮಾರ್ 3 ವಿಕೆಟ್ ಕಿತ್ತು ಮಿಂಚಿದರು. ಅರ್ಶದೀಪ್ ಸಿಂಗ್, ರವಿ ಬಿಷ್ಣೋಯಿ ತಲಾ 2 ಹಾಗೂ ಅಕ್ಷರ್ ಪಟೇಲ್ 1 ವಿಕೆಟ್ ಕಿತ್ತರು.
ಇದಕ್ಕೂ ಮೊದಲು ಭಾರತದ ಪರ ಶ್ರೇಯರ್ ಐಯ್ಯರ್ 37 ಎಸೆತಗಳಿಗೆ 53 ರನ್ (5 ಫೋರ್, 2 ಸಿಕ್ಸರ್) ಗಳಿಸಿ ಗಮನ ಸೆಳೆದರು. ಜಿತೇಶ್ ಶರ್ಮಾ (24), ಅಕ್ಷರ್ ಪಟೇಲ್ (31) ರನ್ ಗಳಿಸಿದರು. ಆದರೆ ನಾಯಕ ಸೂರ್ಯಕುಮಾರ್ ಯಾದವ್ (5) ಹಾಗೂ ರಿಂಕು ಸಿಂಗ್ (6) ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದರು. ಇದನ್ನೂ ಓದಿ: WPL 2024 ಹರಾಜಿಗೆ 165 ಪ್ಲೇಯರ್ಸ್ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್ ಪ್ಲೇಯರ್?
ಆಸೀಸ್ ಪರ ಬೆಹ್ರೆನ್‌ಡ್ರಾಫ್ ಹಾಗೂ ಡ್ರ್ವಾಷಿಸ್ ತಲಾ 2 ವಿಕೆಟ್ ಕಿತ್ತರು.