ಸೈನ್ಯಕ್ಕೆ ಪ್ರಬಲ ಅಸ್ತ್ರ – ಅಮೆರಿಕದ MQ-9B ಪ್ರಿಡೆಟರ್ ಡ್ರೋನ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

Public TV
1 Min Read

ನವದೆಹಲಿ: ಭಾರತ (India) ಸರ್ಕಾರ, ಅಮೆರಿಕದ MQ-9B ಪ್ರಿಡೆಟರ್ ಡ್ರೋನ್‌ಗಳನ್ನು (MQ-9B Predator Drones) ಖರೀದಿಸಲು 3,200 ಕೋಟಿ ರೂ.ಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ದ್ರೋನ್‌ಗಳನ್ನು General Atomics Aeronautical Systems ಸಂಸ್ಥೆ ತಯಾರಿಸುತ್ತಿದೆ. ಪ್ರಸ್ತುತ ಭಾರತ ಖರೀದಿ ಮಾಡುತ್ತಿರುವ ಒಟ್ಟು 31 ಡ್ರೋನ್ ಗಳ ಪೈಕಿ 15 ಡ್ರೋನ್ ಗಳನ್ನು ಭಾರತೀಯ ನೌಕಾಪಡೆಗೆ ನೀಡಲಾಗುತ್ತದೆ. ಉಳಿದ 16 ಡ್ರೋನ್‌ಗಳ ಪೈಕಿ ಭಾರತೀಯ ಸೇನೆಗೆ (Indian Army) ಮತ್ತು ವಾಯುಪಡೆಗೆ ತಲಾ 8 ಡ್ರೋನ್‌ಗಳನ್ನು ನೀಡಲಾಗುತ್ತದೆ.

MQ-9B Predator Droneಗಳು ಅತ್ಯಂತ ವಿಧ್ವಂಸಕಾರಿ ಡ್ರೋನ್ ಗಳಾಗಿದ್ದು, ಈ ಡ್ರೋನ್ ಗಳನ್ನು ಶತ್ರುಕಣ್ಣಿಗೆ ಕಾಣದ ಹಾಗೆ ಅತ್ಯಂತ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿವೆ. ಈ ಡ್ರೋನ್ 40,000 ಅಡಿ ಎತ್ತರದಲ್ಲಿ ಒಮ್ಮೆಗೆ 40 ಗಂಟೆಗಳ ಕಾಲ ಹಾರಾಟ ನಡೆಸಬಲ್ಲದು. ಇದು ಸುಮಾರು 2,155 ಕೆಜಿಯಷ್ಟು ಬಾಹ್ಯ ಪೇಲೋಡ್ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.

MQ-9B ಸ್ಟ್ರೈಕ್ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾಗಿದೆ. ಇದು ಹೆಚ್ಚಿನ ನಿಖರತೆಯೊಂದಿಗೆ ಗುರಿಗಳನ್ನು ಹೊಡೆಯಲು ಸಹಕಾರಿಯಾಗಿದೆ. ಇದು ಸ್ವಯಂಚಾಲಿತ ಟೇಕ್-ಆಫ್‌ ಮತ್ತು ಲ್ಯಾಂಡಿಂಗ್‌ ಸಾಮರ್ಥ್ಯವನ್ನು ಹೊಂದಿವೆ. ನಾಗರಿಕ ವಾಯುಪ್ರದೇಶಕ್ಕೆ ಸುರಕ್ಷಿತವಾಗಿ ಈ ಡ್ರೋನ್‌ಗಳನ್ನು ನಿಯೋಜಿಸಬಹುದಾಗಿದೆ. ಭೂಮಿ ಮತ್ತು ಕಡಲ ಕಣ್ಗಾವಲು, ಜಲಾಂತರ್ಗಾಮಿ, ಯುದ್ಧ ಮತ್ತು ವಿಶೇಷ ಸೇನಾ ಕಾರ್ಯಾಚರಣೆಗಳಿಗೆ ಈ ಡ್ರೋನ್‌ಗಳು ಸೂಕ್ತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article