ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

Public TV
2 Min Read

ನವದೆಹಲಿ: ಉಕ್ರೇನ್‌ ವಿರುದ್ಧದ ರಷ್ಯಾ ಆಕ್ರಮಣವನ್ನು ಖಂಡಿಸುವ ಯುಎನ್‌ಎಸ್‌ಸಿ ನಿರ್ಣಯದಿಂದ ಭಾರತ ದೂರ ಉಳಿದಿದೆ. ರಷ್ಯಾ ವಿರುದ್ಧ 11 ರಾಷ್ಟ್ರಗಳು ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರೆ, ಭಾರತ ಸೇರಿ ಮೂರು ರಾಷ್ಟ್ರಗಳು ನಿರ್ಣಯದಿಂದ ದೂರ ಉಳಿದು ತಟಸ್ಥ ನೀತಿ ಅನುಸರಿಸಿವೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಭಾರತ, ಚೀನಾ, ಯುಎಇ ಈ ಮೂರು ರಾಷ್ಟ್ರಗಳು ಯುಎನ್‌ಎಸ್‌ಸಿ ನಿರ್ಣಯದಿಂದ ದೂರ ಉಳಿದಿವೆ. ಆದರೆ 11 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಈ ವೇಳೆ ರಷ್ಯಾ ತನ್ನ ವಿಟೋ ಅಧಿಕಾರವನ್ನು ಬಳಸಿದೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

ಅಮೆರಿಕ, ಅಲ್ಬೇನಿಯಾ ಸೇರಿದಂತೆ ಪೋಲ್ಯಾಂಡ್‌, ಇಟಲಿ, ಜರ್ಮನಿ, ಎಸ್ಟೋನಿಯಾ, ಲಕ್ಸೆಂಬರ್ಗ್‌, ಜರ್ಮನಿ ಸೇರಿದಂತೆ 11 ರಾಷ್ಟ್ರಗಳು ರಷ್ಯಾ ಆಕ್ರಮಣ ಖಂಡಿಸುವ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿವೆ.

ಉಕ್ರೇನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತವು ವಿಚಲಿತವಾಗಿದೆ. ಹಿಂಸಾಚಾರ ಮತ್ತು ಹಗೆತನವನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ. ಕೇವಲ ಪರಿಹಾರಗಳಿಂದಾಗಿ ನಾವು ಮನುಷ್ಯ ಜೀವಗಳಿಗೆ ಬೆಲೆ ಕೊಡಲು ಸಾಧ್ಯವಿಲ್ಲ ಎಂದು UN ರಾಯಭಾರದ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವವೇ ನಮ್ಮೊಂದಿಗಿದೆ, ಜಯ ನಮ್ಮದೆ: ಉಕ್ರೇನ್ ಅಧ್ಯಕ್ಷ

ರಾಜತಾಂತ್ರಿಕತೆಯ ಹಾದಿ ಕೈಬಿಟ್ಟಿರುವುದು ವಿಷಾದದ ಸಂಗತಿ. ನಾವು ಮತ್ತೆ ಅದಕ್ಕೆ ಹಿಂತಿರುಗಬೇಕು. ಈ ಎಲ್ಲಾ ಕಾರಣಗಳಿಗಾಗಿ, ಭಾರತವು ಈ ನಿರ್ಣಯದಿಂದ ದೂರವಿರಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತವು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಅಂತರರಾಷ್ಟ್ರೀಯ ಕಾನೂನು ಮತ್ತು ಯುಎನ್‌ ಚಾರ್ಟರ್‌ನ ತತ್ವಗಳನ್ನು ಗೌರವಿಸಲು ಕರೆ ನೀಡಿದೆ. ಭಾರತೀಯ ಸಮುದಾಯದ ಭದ್ರತೆ, ಉಕ್ರೇನ್‌ನಲ್ಲಿ ಸಿಕ್ಕಿರುವ ವಿದ್ಯಾರ್ಥಿಗಳನ್ನು ಅಲ್ಲಿಂದ ಸ್ಥಳಾಂತರಿಸುವುದು ತಕ್ಷಣದ ಆದ್ಯತೆಯಾಗಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ ಭೀಕರತೆ ನಡುವೆಯೂ ಹಸೆಮಣೆ ಏರಿ ಜೋಡಿ ಸಂಭ್ರಮ

ಭಾರತಕ್ಕೆ ರಷ್ಯಾ ಧನ್ಯವಾದ
ಯುಎನ್‌ಎಸ್‌ಸಿ ನಿರ್ಣಯದಿಂದ ದೂರ ಉಳಿದ ಭಾರತ ಸೇರಿ ಮೂರು ರಾಷ್ಟ್ರಗಳಿಗೆ ರಷ್ಯಾ ಧನ್ಯವಾದ ತಿಳಿಸಿದೆ. ರಷ್ಯಾ ವಿರುದ್ಧದ ಮತದಾನದಿಂದ ಭಾರತ, ಚೀನಾ, ಯುಎಇ ದೂರ ಉಳಿದಿದ್ದು, ತಟಸ್ಥವಾಗಿವೆ. ಹೀಗಾಗಿ ರಷ್ಯಾ ಕೃತಜ್ಞತೆ ಸಲ್ಲಿಸಿದೆ.

Share This Article
Leave a Comment

Leave a Reply

Your email address will not be published. Required fields are marked *