ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

Public TV
1 Min Read

ಇಂದಿನ ಸ್ವಾತಂತ್ರ್ಯ ಶುಭದಿನವನ್ನು ಅನೇಕರು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಕೆಲವರು ಇಂದು ಭಾರತದ ತ್ರಿವರ್ಣ ಧ್ವಜ ಹಾರಿ ಸಂಭ್ರಮಿಸುತ್ತಾರೆ. ಇನ್ನು ಕೆಲವರು ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ ತನ್ನ ದೇಶದ ಬಗೆಗಿನ ರಾಷ್ಟ್ರಪ್ರೇಮವನ್ನು ತೋರಿಸುತ್ತಾರೆ. ಆದರೆ ಇಂದಿನ ದಿನವನ್ನು ಫ್ಯಾಷನ್ ಮೂಲಕವೂ ಸಂಭ್ರಮಿಸಬಹುದು.

ಇವತ್ತಿನ ದಿನ ರಿಬ್ಬನ್, ಹ್ಯಾಂಡ್‍ಬ್ಯಾಂಡ್, ತ್ರಿವರ್ಣ ಬಣ್ಣದ ಬಳೆಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇರುತ್ತದೆ. ಈ ಮೂಲಕ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪ್ರೇಮ ತೋರ್ಪಡಿಸಲಾಗುತ್ತದೆ. ಆದರೆ ಇತ್ತೀಚಿಗೆ ಸ್ವಲ್ಪ ಟ್ರೆಂಡ್ ಬದಲಾಗಿದೆ. ದೇಶದ ಮೇಲಿನ ಪ್ರೇಮವನ್ನು ವ್ಯಕ್ತಪಡಿಸಲು ಕಾಲೇಜು ವಿದ್ಯಾರ್ಥಿನಿಯರು ವಿಭಿನ್ನತೆಯನ್ನು ಹುಡುಕುತ್ತಿರುತ್ತಾರೆ. ಅಂತಹ ಯುವತಿಯರಿಗಾಗಿ ತ್ರಿವರ್ಣದ ಜುಮ್ಕಾ, ಸಿಲ್ಕ್ ಥ್ರೆಡ್ ಬ್ಯಾಂಗಲ್ಸ್ ಮತ್ತು ನೆಕ್ಲೆಸ್ ಆ್ಯಕ್ಸಸರೀಸ್‍ಗಳು ಮೂರು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸದ್ಯಕ್ಕೆ ಫ್ಯಾಷನ್ ಸ್ಟೇಟ್‍ಮೆಂಟ್‍ನಲ್ಲಿ ಮೊದಲ ಸ್ಥಾನದಲ್ಲಿರುವುದು ಸಿಲ್ಕ್ ಥ್ರೆಡ್ ಜ್ಯುವೆಲ್ಲರಿ. ಇದರಲ್ಲಿ ಬ್ಯಾಂಗಲ್ಸ್, ನೆಕ್ಲೆಸ್, ಹ್ಯಾಂಡ್‍ಬ್ಯಾಂಡ್ ಹೀಗೆ ಅನೇಕ ತರಹದ ಆ್ಯಕ್ಸಸರೀಸ್‍ಗಳನ್ನು ಕೇಸರಿ, ಬಿಳಿ, ಹಸಿರು ಬಣ್ಣದ ಸಿಲ್ಕ್ ಥ್ರೆಡ್‍ನ್ನು ಬಳಸಿಕೊಂಡು ರೆಡಿ ಮಾಡಿದ್ದಾರೆ. ಜುಮ್ಕಾ, ಚಾಂದಬಾಲಿ, ಸ್ಟಾರ್, ಸ್ಟಡ್ ಹೀಗೆ ನಾನಾ ರೀತಿಯಲ್ಲಿ ಕಿವಿಯೋಲೆಗಳು ಕೂಡ ಲಭ್ಯವಿದೆ. ಇವು ನೋಡಲು ಅಂದವಾಗಿರುತ್ತವೆ. ಧರಿಸಿದರೆ ಆಕರ್ಷಕವಾಗಿಯೂ ಕಾಣಿಸುತ್ತವೆ.

ಇದನ್ನು ಎಲ್ಲಾ ರೀತಿಯ ಡ್ರೆಸ್‍ಗಳ ಮೇಲೂ ಧರಿಸಬಹುದಾಗಿದ್ದು, ಅಲ್ಲದೇ ಎಲ್ಲಾ ರೀತಿಯ ಫಂಕ್ಷನ್‍ಗಳಲ್ಲೂ ಇದನ್ನು ಧರಿಸಬಹುದು. ಸಿಲ್ಕ್ ಥ್ರೆಡ್ ಅಲ್ಲದೇ ಪೇಪರ್ ಕ್ಯುಲ್ಲಿಂಗ್ ಜುವೆಲ್ಲರಿ ಮತ್ತು ಟೆರಾಕೋಟಾ ಜ್ಯುವೆಲ್ಲರಿಯಲ್ಲೂ ಸಹ ಆಭರಣ ಪ್ರಿಯರಿಗೆ ತುಂಬಾ ಆಯ್ಕೆಗಳಿವೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *