ನಾದಿನಿ ಜೊತೆ ಅಶ್ಲೀಲ ವರ್ತನೆ – ಪ್ರಶ್ನಿಸಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ

Public TV
2 Min Read

ಮೈಸೂರು: ನಾದಿನಿ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ ಅಂಬುಲೆನ್ಸ್‌ ಡ್ರೈವರ್‌ನನ್ನ (Ambulance Driver) ಪ್ರಶ್ನೆ ಮಾಡಿದ ಆಕೆಯ ಬಾವನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿರುವ ಘಟನೆ ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ (Mysuru Medical College Hospital) ಟ್ರಾಮಾ ಸೆಂಟರ್ ಬಳಿ ನಡೆದಿದೆ.

ಅಂಬುಲೆನ್ಸ್‌ ಡ್ರೈವರ್‌ ಸಂದೇಶ್‌ನಿಂದ ವಿಕೃತಿ ನಡೆದಿದ್ದು, ಅದೇ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಮಹೇಶ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಸದ್ಯ ಮಹೇಶ್ ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ (Devaraja Police Station) ದೂರು ದಾಖಲಾಗಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ನಡ್ವೆ ಇಂದಿನಿಂದ ಕದನ ವಿರಾಮ – 13 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಸಿದ್ಧತೆ

ಸಂದೇಶ್‌ ಈ ಹಿಂದೆ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಯುವತಿಯರು, ಆಸ್ಪತ್ರೆ ನರ್ಸ್‌ಗಳ ವೀಡಿಯೋ ಮಾಡಿ ಸಿಕ್ಕಿಬಿದ್ದಿದ್ದ. ಆಗ ಕೆ.ಆರ್‌ ಆಸ್ಪತ್ರೆಯಲ್ಲಿ (KR Hospital) ಕೆಲಸದಿಂದ ತೆಗೆಯಲಾಗಿತ್ತು. ನಂತರ ಟ್ರಾಮಾ ಕೇರ್‌ಸೆಂಟರ್‌ಗೆ ಕೆಲಸಕ್ಕೆ ಸೇರಿದ್ದ. ಅಲ್ಲಿಯೂ ಇದೇ ರೀತಿಯ ಆಟಟೋಪ ಮುಂದುವರಿಸಿದ್ದಾನೆ. ಇದನ್ನೂ ಓದಿ: ಬೀದಿ ನಾಯಿಗಳಿಗೆ ಊಟ ನೀಡುವ ಕಾಯಕ – BCCI ಅಧ್ಯಕ್ಷರ ಶ್ವಾನ ಪ್ರೀತಿಗೆ ಜನರ ಮೆಚ್ಚುಗೆ

ಸಂದೇಶ್‌ ಹಲ್ಲೆಗೊಳಗಾದ ಮಹೇಶ್ ನಾದಿನಿಯ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುದ್ದ ಎಂದು ಹೇಳಲಾಗಿದೆ. ಮಹೇಶ್‌ ಇದನ್ನ ಪ್ರಶ್ನೆ ಮಾಡಿದ್ದ, ಜೊತೆಗೆ ಆಸ್ಪತ್ರೆ ಅಧಿಕಾರಿಗಳಿಗೂ ಸಂದೇಶ್‌ ವಿರುದ್ಧ ದೂರು ನೀಡಿದ್ದ. ಇದರಿಂದ ಕೋಪಗೊಂಡಿದ್ದ ಸಂದೇಶ್‌ ಇದೇ ಸೋಮವಾರ ಆಸ್ಪತ್ರೆ ಕೆಲಸಕ್ಕೆ ಬರುತ್ತಿದ್ದ ಮಹೇಶ್ ನನ್ನ ಮೈಸೂರಿನ ಹೊರವಲಯದ ಬಂಡೀಪಾಳ್ಯದ ಬಳಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಸ್ನೇಹಿತರ ಜೊತೆಗೂಡಿ ಮಹೇಶ್ ತಲೆಯ ಭಾಗಕ್ಕೆ ಹೊಡೆದು ಹಾಗೂ ಕೈ ಮುರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಅಷ್ಟೇ ಅಲ್ಲದೇ ಮಹೇಶ್ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ‌ ಮೆರೆದಿದ್ದಾರೆ. ಬಳಿಕ ಮಹೇಶ್‌ ಅಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಸದ್ಯ ಹಲ್ಲೆಗೊಳಗಾದ ಮಹೇಶ್‌ ನನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ನೌಕಾಪಡೆ 8 ಮಾಜಿ ಸಿಬ್ಬಂದಿಯ ಮರಣದಂಡನೆಗೆ ವಿರೋಧ – ಭಾರತದ ಮನವಿ ಸ್ವೀಕರಿಸಿದ ಕತಾರ್

Share This Article