IND vs WI T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಹಾರ್ದಿಕ್‌ ಪಡೆ – ವಿಂಡೀಸ್‌ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?

Public TV
2 Min Read

ಟ್ರಿನಿಡಾಡ್‌: ವೆಸ್ಟ್‌ ಇಂಡೀಸ್‌ (West Indies) ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಭಾರತ (Team India) ವಿರೋಚಿತ ಸೋಲನುಭವಿಸಿದೆ. ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದ್ರೂ, ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 4 ರನ್‌ಗಳ ವಿರೋಚಿತ ಸೋಲನುಭವಿಸಿದೆ.

ಸುಲಭ ಗೆಲುವಿನ ಅತ್ಯುತ್ಸಾಹದಲ್ಲಿದ್ದ ಟೀಂ ಇಂಡಿಯಾಕ್ಕೆ (Team India) ವಿರೋಚಿತ ಸೋಲು ಭಾರೀ ನಿರಾಸೆ ಮೂಡಿಸಿದೆ. ಈ ನಡುವೆ ವಿಂಡೀಸ್‌ ತಂಡದ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ ಅಂತಾ ವೇಗಿ ಜೇಸನ್‌ ಹೋಲ್ಡರ್‌ ತಿಳಿಸಿದ್ದಾರೆ. ಇದನ್ನೂ ಓದಿ: IND vs WI: ಹ್ಯಾಟ್ರಿಕ್‌ ಅರ್ಧ ಶತಕ ಸಿಡಿಸಿ ಮಹಿ ದಾಖಲೆ ಸರಿಗಟ್ಟಿದ ಇಶಾನ್‌ ಕಿಶನ್‌

ಮೊದಲ 10 ಓವರ್‌ಗಳ ನಂತರ ಪಂದ್ಯ ರೋಚಕ ಹಂತಕ್ಕೆ ತಲುಪಿತ್ತು. ನಮ್ಮ ತಂಡ ಫೀಲ್ಡಿಂಗ್‌ ಬಿಗಿಗೊಳಿಸಿತ್ತು. ಆದ್ರೆ 16ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದಾಗ ಮೊದಲ ಎಸೆತದಲ್ಲೇ ಹಾರ್ದಿಕ್‌ ಪಾಂಡ್ಯ (Hardik Pandya) ಬೌಲ್ಡ್‌ ಆದರು. ಮರು ಎಸೆತದಲ್ಲಿ ಅಕ್ಷರ್‌ ಪಟೇಲ್‌ (Axar Patel) ಬೇಡದ ರನ್‌ ಕದಿಯಲು ಯತ್ನಿಸಿ ಸಂಜು ಸ್ಯಾಮ್ಸನ್‌ರನ್ನ (Sanju Samson) ರನೌಟ್‌ ಆಗುವಂತೆ ಮಾಡಿದ್ರು. ಇದು ಟೀಂ ಇಂಡಿಯಾ ಗೆಲುವಿನ ಮೇಲೆ ಪರಿಣಾಮ ಬೀರಿತ್ತು. ಆ ನಂತರದಲ್ಲಿ ಅಕ್ಷರ್‌ ಪಟೇಲ್‌ ಸಹ ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು. ಇದು ವಿಂಡೀಸ್‌ ರೋಚಕ ಗೆಲುವಿಗೆ ಕಾರಣವಾಯ್ತು ಅಂತಾ ಜೇಸನ್‌ ಹೋಲ್ಡರ್‌ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಹೇಳಿದ್ದಾರೆ.

ನಿವೃತ್ತಿ ಸುಳಿವು ನೀಡಿದ ಜೇಸನ್‌ ಹೋಲ್ಡರ್‌: ಮುಂದುವರಿದು ಮಾತನಾಡುತ್ತಾ, ಜೇಸನ್‌ ಹೋಲ್ಡರ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುವ ಸುಳಿವು ನೀಡಿದರು. ನಾನು ಸ್ವಲ್ಪ ವಿರಾಮ ಬಯಸುತ್ತಿದ್ದೇನೆ ಅಂತಾ ಹೇಳಿದ್ದಾರೆ.  ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 149 ರನ್‌ ಕಲೆಹಾಕಿತ್ತು. ಈ ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಲಷ್ಟೇ ಸಾಧ್ಯವಾಗಿ 4 ರನ್‌ಗಳ ವಿರೋಚಿತ ಸೋಲನುಭವಿಸಿತು. ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ಭಾರತ 2ನೇ ಟಿ20 ಪಂದ್ಯವನ್ನಾಡಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್