ನೂರನೇ ಟೆಸ್ಟ್ ಪಂದ್ಯದಲ್ಲಿ ನೂತನ ಮೈಲಿಗಲ್ಲು ಬರೆದ ವಿರಾಟ್ ಕೊಹ್ಲಿ

Public TV
1 Min Read

ಮೊಹಾಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 100ನೇ ಟೆಸ್ಟ್ ಪಂದ್ಯದಲ್ಲಿ ನೂತನ ಮೈಲಿಗಲ್ಲು ನೆಟ್ಟಿದ್ದಾರೆ.

ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ವಿರಾಟ್ ಕೊಹ್ಲಿಗೆ ನೂರನೇ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ 8 ಸಾವಿರ ರನ್‍ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ರಿಕಿ ಪಾಟಿಂಗ್ ನಂತರ 100 ಟೆಸ್ಟ್ ಪಂದ್ಯಗಳ ಬಳಿಕ 8 ಸಾವಿರ ರನ್ ಪೂರೈಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

ಕೊಹ್ಲಿ ಪ್ರಸ್ತುತ 169 ಇನ್ನಿಂಗ್ಸ್‌ಗಳನ್ನು ಆಡಿ 8 ಸಾವಿರ ರನ್ ಪೂರೈಸಿದ ಭಾರತ 4ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ 154 ಇನ್ನಿಂಗ್ಸ್, ರಾಹುಲ್ ದ್ರಾವಿಡ್ 157, ವಿರೇಂದ್ರ ಸೆಹ್ವಾಗ್ 160, ಸುನೀಲ್ ಗವಾಸ್ಕರ್ 166 ಮತ್ತು ಇದೀಗ ವಿರಾಟ್ ಕೊಹ್ಲಿ 169 ಇನ್ನಿಂಗ್ಸ್‌ಗಳಿಂದ 8,000 ರನ್ ಪೂರೈಸಿದ್ದಾರೆ. ಇದನ್ನೂ ಓದಿ: ಅಕ್ಷಯ್ ಹುಕ್ ಸ್ಟೆಪ್‌ಗೆ ಫೇಮಸ್ ಕ್ರಿಕೆಟಿಗರು ಫಿದಾ

ನೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಕೊಹ್ಲಿ 45 ರನ್ (76 ಎಸೆತ, 5 ಬೌಂಡರಿ) ಸಿಡಿಸಿ ಔಟ್ ಆದರು. ಬಳಿಕ ಬ್ಯಾಟಿಂಗ್ ಮುಂದುವರಿಸಿರುವ ಭಾರತ 80 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 330 ರನ್ ಕಲೆ ಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *