ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಆಯ್ಕೆ: ಎಂಎಸ್‌ಕೆ ಪ್ರಸಾದ್

Public TV
1 Min Read

ನವದೆಹಲಿ: ದಕ್ಷಿಣ ಆಫ್ರಿಕಾದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ವಿರಾಟ್‌ಕೊಹ್ಲಿ ನಾಯಕತ್ವದ ಭಾರತ ತಂಡ ಕಠೀಣ ಅಭ್ಯಾಸ ನಡೆಸುತ್ತಿದೆ. ಡಿಸೆಂಬರ್ 26 ರಿಂದ ಸೆಂಚೂರಿಯನ್‌ನಲ್ಲಿ ಆರಂಭವಾಗಲಿರುವ ಮೊದಲನೆ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಈಗಾಗಲೇ ಸಿದ್ಧತೆ ನಡೆಸುತ್ತಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿರುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಹಲವು ಮಾಜಿ ಕ್ರಿಕೆಟಿಗರು ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಬಗ್ಗೆ ತಮ್ಮದೇ ಆದ ಸಲಹೆಗಳನ್ನು ನೀಡಿದ್ದಾರೆ.

ಹರಿಣಗಳ ವಿರುದ್ಧ ಆಡಲಿರುವ ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಐವರು ಬೌಲರ್‌ಗಳೊಂದಿಗೆ ಕಣಕ್ಕೆ ಇಳಿಯಲಿದೆ, ಟೀಮ್ ಮ್ಯಾನೇಜ್‌ಮೆಂಟ್ 5ನೇ ಬೌಲಿಂಗ್ ಆಯ್ಕೆಗೆ ಆಲ್‌ರೌಂಡರ್ ಶಾರ್ದುಲ್ ಠಾಕೂರ್ ಅವರನ್ನು ಪರಿಗಣಿಸಿದರೆ ಒಳ್ಳೆಯದು. ಆ ಮೂಲಕ ಅವರನ್ನು ನೀವು 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿಸಬಹುದು ಎಂದು ಮಾಜಿ ಆಯ್ಕೆ ಸಮಿತಿ ಸದಸ್ಯ ಎಂಎಸ್‌ಕೆ ಪ್ರಸಾದ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ

ಇಂಗ್ಲೆAಡ್ ವಿರುದ್ಧದ ಕಳೆದ ಟೆಸ್ಟ್ ಸರಣಿಯಲ್ಲಿ ಶಾರ್ದುಲ್ ಠಾಕೂರ್ ಒಳ್ಳೆಯ ಪ್ರದರ್ಶನ ನೀಡಿದ್ದರು ಹಾಗೂ ದಿ ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ನಲ್ಲಿಅರ್ಧಶತಕ ಸಿಡಿಸಿದ್ದರು. ಇದರ ಜೊತೆಗೆ ಬೌಲಿಂಗ್‌ನಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿರುವ ಟೆಸ್ಟ್ ಪಂದ್ಯಕ್ಕೆ ಠಾಕೂರ್ ಅನ್ನು ಅಯ್ಕೆ ಮಾಡುವುದು ಉತ್ತಮ ಎಂದರು.

ಆರ್ ಅಶ್ವಿನ್ ಅವರೊಂದಿಗೆ ಶಾರ್ದುಲ್ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಬಹುದು. ಜಸ್‌ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಆರ್.ಆಶ್ವಿನ್ ಹಾಗೂ ಮೊಹಮ್ಮದ್ ಸಿರಾಜ್ ಸೇರಿ ನಾಲ್ವರು ಬೌಲರ್‌ಗಳು ಈಗಾಗಲೇ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ. ಇದನ್ನೂ ಓದಿ: ಮಿಸಸ್ ಇಂಡಿಯಾ ಅರ್ಥ್ ಗೆದ್ದ ಬೆಂಗಳೂರಿನ ವೈದ್ಯೆ

Share This Article
Leave a Comment

Leave a Reply

Your email address will not be published. Required fields are marked *