ಆಫ್ರಿಕಾಗೆ 49 ರನ್‌ಗಳ ಭರ್ಜರಿ ಜಯ – ಸರಣಿ ಗೆದ್ದ ಟೀಂ ಇಂಡಿಯಾ

By
2 Min Read

ಇಂದೋರ್‌: ಬ್ಯಾಟಿಂಗ್‌, ಬೌಲಿಂಗ್‌ನಿಂದ ಅಬ್ಬರಿಸಿದ ದಕ್ಷಿಣ ಆಫ್ರಿಕಾ(South Africa) ಮೂರನೇ ಟಿ20(T20) ಪಂದ್ಯದಲ್ಲಿ ಭಾರತದ(India) ವಿರುದ್ಧ 49 ರನ್‌ಗಳಿಂದ ಭರ್ಜರಿ ಜಯಗಳಿಸಿದೆ. ಈ ಪಂದ್ಯವನ್ನು ಸೋತರೂ ಭಾರತ ಮಾಸ್ಟರ್‌ ಕಾರ್ಡ್‌ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಗೆಲ್ಲಲು 228 ರನ್‌ಗಳ ಕಠಿಣ ಗುರಿಯನ್ನು ಪಡೆದ ಭಾರತ 18.3 ಓವರ್‌ಗಳಲ್ಲಿ 178 ರನ್‌ ಗಳಿಗೆ ಆಲೌಟ್‌ ಆಗುವ ಮೂಲಕ ಸೋಲನ್ನು ಒಪ್ಪಿಕೊಂಡಿತು.

ಬ್ಯಾಟಿಂಗ್‌ ಆರಂಭಿಸಿದ ಭಾರತ ಆರಂಭದಲ್ಲೇ ಎರಡು ವಿಕೆಟ್‌ ಕಳೆದುಕೊಂಡಿತ್ತು. ರೋಹಿತ್‌ ಶರ್ಮಾ ಮೊದಲ ಓವರಿನ ಎರಡನೇ ಎಸೆತಕ್ಕೆ ಶೂನ್ಯಕ್ಕೆ ಔಟಾದರೆ ಎರಡನೇ ಓವರ್‌ನಲ್ಲಿ ಶ್ರೇಯಸ್‌ ಅಯ್ಯರ್‌ 1 ರನ್‌ ಗಳಿಸಿ ಔಟಾದರು.

ನಂತರ ರಿಷಭ್‌ ಪಂತ್‌, ದಿನೇಶ್‌ ಕಾರ್ತಿಕ್‌ ಸ್ವಲ್ಪ ಚೇತರಿಕೆ ನೀಡಿದರು. ರಿಷಭ್‌ ಪಂತ್‌ 27 ರನ್‌(14 ಎಸೆತ, 3 ಬೌಂಡರಿ, 2 ಸಿಕ್ಸ್‌) ದಿನೇಶ್‌ ಕಾರ್ತಿಕ್‌ 46 ರನ್‌(21 ಎಸೆತ, 4 ಬೌಂಡರಿ, 4 ಸಿಕ್ಸ್‌) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಕೊನೆಯಲ್ಲಿ ಹರ್ಷಲ್‌ ಪಟೇಲ್‌ 17 ರನ್‌, ದೀಪಕ್‌ ಚಹರ್‌ 31 ನ್(17‌ ಎಸೆತ, 2 ಬೌಂಡರಿ, 3 ಸಿಕ್ಸರ್‌), ಉಮೇಶ್‌ ಯಾದವ್‌ ಔಟಾಗದೇ 20 ರನ್‌ ಹೊಡೆದರು.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ, ನಾಯಕ ತೆಂಬಾ ಬವುಮಾ 3 ರನ್‌ ಗಳಿಸಿ ಔಟಾದರು. ಎರಡನೇ ವಿಕೆಟಿಗೆ ಜೊತೆಯಾದ ಕ್ವಿಂಟನ್‌ ಡಿಕಾಕ್‌ ಮತ್ತು ರಿಲಿ ರೊಸೊ 47 ಎಸೆತಗಳಲ್ಲಿ 89 ರನ್‌ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಡಿಕಾಕ್‌ 68 ರನ್‌(43 ಎಸೆತ, 6 ಬೌಂಡರಿ, 4 ಸಿಕ್ಸರ್‌) ಸಿಡಿಸಿ ರನೌಟ್‌ ಆದರು.

ಟ್ರಿಸ್ಟನ್ ಸ್ಟಬ್ಸ್ 23 ರನ್‌ ಹೊಡೆದು ಔಟಾದರು. ಆದರೆ ರೊಸೊ ಮತ್ತು ಸ್ಟಬ್ಸ್‌ 3ನೇ ವಿಕೆಟಿಗೆ 44 ಎಸೆತಗಳಿಗೆ 87 ರನ್‌ ಜೊತೆಯಾಟವಾಡಿದರು. ಸಿಕ್ಸರ್‌ ಬೌಂಡರಿಗಳ ಸುರಿಮಳೆ ಸುರಿಸಿದ ರಿಲಿ ರೊಸೊ ಮೊದಲ ಬಾರಿಗೆ ಶತಕ(100 ರನ್‌, 48 ಎಸೆತ, 7 ಬೌಂಡರಿ, 8 ಸಿಕ್ಸರ್‌) ಹೊಡೆದರು. ಕೊನೆಗೆ ಬಂದ ಡೇವಿಡ್‌ ಮಿಲ್ಲರ್‌ 4 ಎಸೆತದಲ್ಲಿ 3 ಸಿಕ್ಸರ್‌ ಸಿಡಿಸಿ 19 ರನ್‌ ಚಚ್ಚಿದರು.  ಅಂತಿಮವಾಗಿ ದಕ್ಷಿಣ ಆಫ್ರಿಕಾ ಮೂರು ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತು.

4 ಓವರ್‌ಗಳ ಕೋಟಾದಲ್ಲಿ ದೀಪಕ್‌ ಚಹರ್‌ 48 ರನ್‌, ಮೊಹಮ್ಮದ್‌ ಸಿರಾಜ್‌ 44 ರನ್‌, ಹರ್ಷಲ್‌ ಪಟೇಲ್‌ 49 ರನ್‌ ನೀಡಿದರು. ಉಮೇಶ್‌ ಯಾದವ್‌ 3 ಓವರ್‌ ಎಸೆದು 34 ರನ್‌ ಬಿಟ್ಟುಕೊಟ್ಟರು.

ದಕ್ಷಿಣ ಆಫ್ರಿಕಾ ರನ್‌ ಏರಿದ್ದು ಹೇಗೆ?
38 ಎಸೆತ 50 ರನ್‌
61 ಎಸೆತ 100 ರನ್‌
88 ಎಸೆತ 150 ರನ್‌
113 ಎಸೆತ 200 ರನ್‌
120 ಎಸೆತ 227 ರನ್‌

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *