ಮ್ಯಾಂಚೆಸ್ಟರ್: ಇಂಗ್ಲೆಂಡ್ (England) ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಡ್ರಾ ಮಾಡಲು ಮುಂದಾಗಿದ್ದರೂ ರವೀಂದ್ರ ಜಡೇಜಾ (Ravindra Jadeja) ಮತ್ತು ವಾಷಿಂಗ್ಟನ್ ಸುಂದರ್ (Washington Sundar) ಬ್ಯಾಟಿಂಗ್ ಮುಂದುವರಿಸಿದ ಪ್ರಸಂಗ ನಡೆಯಿತು.
ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 138 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 386 ರನ್ ಗಳಿಸಿತ್ತು. 5ನೇ ದಿನದ ಆಟ ಕೊನೆಯಾಗಲು ಇನ್ನೂ 15 ಓವರ್ ಬಾಕಿ ಇತ್ತು. ಇದನ್ನೂ ಓದಿ: ಒಂದೇ ಶತಕ, ಹಲವು ದಾಖಲೆ – ಡಾನ್ ಬ್ರಾಡ್ಮನ್, ಗವಾಸ್ಕರ್ ದಾಖಲೆ ಸರಿಗಟ್ಟಿದ ಗಿಲ್
ಈ ಸಂದರ್ಭದಲ್ಲಿ ಜಡೇಜಾ 89 ರನ್, ಸುಂದರ್ 80 ರನ್ ಗಳಿಸಿ ಆಟವಾಡುತ್ತಿದ್ದರು. ಇವರಿಬ್ಬರು ಆಡುತ್ತಿರುವ ಪರಿಯನ್ನು ನೋಡಿ ಬೆನ್‌ಸ್ಟೋಕ್ಸ್ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಆಫರ್ ನೀಡಿದರು. ಈ ಆಫರ್ ತಿರಸ್ಕರಿಸಿದ ಜಡೇಜಾ ಮತ್ತು ಸುಂದರ್ ಬ್ಯಾಟ್ ಮಾಡುವುದಾಗಿ ಹೇಳಿದರು. ಹೀಗಾಗಿ ಅನಿವಾರ್ಯವಾಗಿ ಇಂಗ್ಲೆಂಡ್ ಬೌಲರ್‌ಗಳು ಬೌಲಿಂಗ್ ಮಾಡಬೇಕಾಯಿತು.
ರವೀಂದ್ರ ಜಡೇಜಾ 107 ರನ್(185 ಎಸೆತ, 13 ಬೌಂಡರಿ, 1 ಸಿಕ್ಸ್) ವಾಷಿಂಗ್ಟನ್ ಸುಂದರ್ 101 ರನ್ 206 ಎಸೆತ, 9 ಬೌಂಡರಿ, 1 ಸಿಕ್ಸ್) ಹೊಡೆದರು. ಜಡೇಜಾ 5ನೇ ಟೆಸ್ಟ್ ಶತಕ ಹೊಡೆದರು. ಇವರಿಬ್ಬರು ಮುರಿಯದ 5ನೇ ವಿಕೆಟಿಗೆ 334 ಎಸೆತಗಳಲ್ಲಿ 203 ರನ್ ಹೊಡೆಯುವ ಮೂಲಕ ಪಂದ್ಯ ಕೈ ಜಾರದಂತೆ ನೋಡಿಕೊಂಡರು. ಇದನ್ನೂ ಓದಿ: ಜಡೇಜಾ, ಸುಂದರ್ ಅಜೇಯ ಶತಕ – ಡ್ರಾದಲ್ಲಿ ಟೆಸ್ಟ್ ಅಂತ್ಯ
ವಾಷಿಂಗ್ಟನ್ ಸುಂದರ್ ಮೊದಲ ಶತಕ ಹೊಡೆದ ಬೆನ್ನಲ್ಲೇ ಡ್ರಾ ಮಾಡಲು ಒಪ್ಪಿಗೆ ಸೂಚಿಸಿದರು. ಡ್ರಾಗೊಂಡಾಗ ಭಾರತ 143 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 425 ರನ್ ಹೊಡೆದಿತ್ತು. ಇಂದು ಒಟ್ಟು 82 ಓವರ್ ಎಸೆದರು ಇಂಗ್ಲೆಂಡ್ ಬೌಲರ್‌ಗಳು ಕೇವಲ 2 ವಿಕೆಟ್ ಪಡೆಯಲ ಮಾತ್ರ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 358/4
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 669
ಭಾರತ ಎರಡನೇ ಇನ್ನಿಂಗ್ಸ್ 425/4