ಫೈನಲ್‌ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಪ್ಯಾಲೆಸ್ತೀನ್‌ ಬೆಂಬಲಿಗ ಅರೆಸ್ಟ್‌

Public TV
1 Min Read

ಅಹಮದಾಬಾದ್‌: ಭಾರತ (Team India) ಮತ್ತು ಆಸ್ಟ್ರೇಲಿಯಾ (Australia) ಮಧ್ಯೆ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ (World Cup Cricket Final) ಪಂದ್ಯದಲ್ಲಿ ದೊಡ್ಡ ಭದ್ರತಾ ಲೋಪವಾಗಿದ್ದು ಪ್ಯಾಲೆಸ್ತೀನ್‌ ಬೆಂಬಲಿಗನೊಬ್ಬ (Palestine Supporters) ಕ್ರೀಡಾಂಗಣಕ್ಕೆ ನುಗ್ಗಿದ್ದಾನೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‌ ಮಾಡುತ್ತಿದ್ದಾಗ 14ನೇ ಓವರ್‌ನಲ್ಲಿ ಮೈದಾನದ ಒಳಗಡೆ ಪ್ಯಾಲೆಸ್ತೀನ್‌ ಬೆಂಬಲಿಗ ನುಗ್ಗಿದ್ದಾನೆ. ಒಳಗಡೆ ನುಗ್ಗಿದ ಆತ ನೇರವಾಗಿ ಕೊಹ್ಲಿ (Virat Kohli) ಬಳಿ ಹೋಗಿ ತಬ್ಬಿಕೊಳ್ಳಲು ಮುಂದಾಗಿದ್ದಾನೆ. ಇದನ್ನೂ ಓದಿ: ದಾಖಲೆಗಾಗಿ ಆಡದೇ ಇದ್ದರೂ ವಿಶ್ವದಾಖಲೆ ನಿರ್ಮಿಸಿದ ರೋಹಿತ್‌ ಶರ್ಮಾ

ಪ್ಯಾಲೆಸ್ತೀನ್‌ ಮಾಸ್ಕ್‌ ಧರಿಸಿದ್ದ ಆತನ ಟೀಶರ್ಟ್‌ನಲ್ಲಿ ʼStop Bombing Palestine’ ಎಂಬ ಬರಹ ಇತ್ತು. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಮೈದಾನದಿಂದ ಹೊರಗಡೆ ಕರೆದುಕೊಂಡು ಹೋಗಿದ್ದಾರೆ. ಒಳಗಡೆ ನುಗ್ಗಿದ ವ್ಯಕ್ತಿ ಹೆಸರು ಜಾನ್‌ ಆಗಿದ್ದ ಆಸ್ಟ್ರೇಲಿಯಾದಿಂದ ಬಂದಿದ್ದ. ಜಾನ್‌ ಪಿಚ್‌ ಪರೀಕ್ಷೆ ಮಾಡಲು ನಿಯೋಜನೆಗೊಂಡಿದ್ದ ವ್ಯಕ್ತಿ ಎಂದು ಈಗ ವರದಿಯಾಗಿದೆ. ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಈ ಹಿಂದೆ ಇಂಗ್ಲೆಂಡಿನ ಕ್ರಿಕೆಟ್‌ ಅಭಿಮಾನಿ ಜಾರ್ವೋ ಮೈದಾನಕ್ಕೆ ನುಗ್ಗಿದ್ದ. ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯ ನಂತರ ಐಸಿಸಿ ಉಳಿದ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಕ್ಕೆ ಜಾರ್ವೋಗೆ ನಿಷೇಧ ಹೇರಲಾಗಿತ್ತು. ಅಷ್ಟೇ ಅಲ್ಲದೇ ಇಂಗ್ಲೆಂಡಿಗೆ ಜಾರ್ವೋನನ್ನು ಗಡಿಪಾರು ಮಾಡಲಾಗಿತ್ತು. ಇದನ್ನೂ ಓದಿ: WC Final: ವರ್ಲ್ಡ್‌ ಕಪ್‌ ಇತಿಹಾಸದಲ್ಲಿ ಕಿಂಗ್‌ ಕೊಹ್ಲಿ ವಿಶ್ವದಾಖಲೆ

ಜಾರ್ವೋ ಘಟನೆಯ ಬಳಿಕ ವಿಐಪಿ ಪಾಸ್‌ಗಳು ಈತನಿಗೆ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿದ್ದವು.

Share This Article