ಗ್ರಾಮೀಣ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಿಸಿ: ಪ್ರಿಯಾಂಕ್ ಖರ್ಗೆ

Public TV
2 Min Read

ಬೆಂಗಳೂರು: ಗ್ರಾಮೀಣ ಜನರಲ್ಲಿ ಹಾಗೂ ವಿದ್ಯಾರ್ಥಿ ಸಮೂಹದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮೂಡಿಸಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೊಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಷಿಪ್ ಕಾರ್ಯಕ್ರಮದಡಿ ಆಯ್ಕೆಗೊಂಡು, ಕಲ್ಯಾಣ ಕರ್ನಾಟಕ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 44 ಮಂದಿ ಫೆಲೊಗಳೊಂದಿಗೆ ಏರ್ಪಡಿಸಲಾಗಿದ್ದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಸಚಿವರು ಜ.24ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಮಾತನಾಡಿದರು. ಇದನ್ನೂ ಓದಿ: ಗೋಹತ್ಯೆ ಮಾಡಿ ಹೊಟ್ಟೆಯಲ್ಲಿದ್ದ ಕರುವಿನ ಮಾಂಸ ಕೊಂಡೊಯ್ದಿದ್ದ ಪಾಪಿ ಅರೆಸ್ಟ್

ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ದೃಷ್ಟಿಯಿಂದ ಫೆಲೊಗಳು ಸೇತುವೆಗಳಂತೆ ಕಾರ್ಯನಿರ್ವಹಿಸಬೇಕು. ಈ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ರಚಿಸಿರುವ ಗೋವಿಂದರಾವ್ ಸಮಿತಿಗೆ ಪೂರಕ ಅಂಕಿ ಅಂಶಗಳ ದತ್ತಾಂಶಗಳನ್ನು ನೀಡುವ ದೃಷ್ಟಿಯಲ್ಲಿಯೂ ಫೆಲೊಗಳು ಕಾರ್ಯಪ್ರವೃತ್ತರಾಗಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಇದನ್ನೂ ಓದಿ: ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಭೂಕಬಳಿಕೆ ಆರೋಪ – ಗ್ರಾಮಸ್ಥರಿಂದ ದಾಖಲೆ ಬಿಡುಗಡೆ

ಗ್ರಾಮ ಪಂಚಾಯತಿಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಇರಿಸಿಕೊಂಡು ಗ್ರಾಮ ಪಂಚಾಯತಿಗಳಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಲು ವರದಿಯನ್ನು ಸಿದ್ಧಪಡಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಆ ಮೂಲಕ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಚಿವರು ಫೆಲೊಗಳಿಗೆ ಸೂಚಿಸಿದರು. ಇದನ್ನೂ ಓದಿ: ನಾಲ್ವರು ಇಸ್ರೇಲ್‌ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದ ಹಮಾಸ್‌ ಉಗ್ರರು

ರಾಜೀವ್ ಗಾಂಧಿ ಗ್ರಾಮೀಣಾಭಿವೃದ್ಧಿ ಫೆಲೊಷಿಪ್ ಕಾರ್ಯಕ್ರಮದಡಿ 2024ರ ಜೂನ್ ತಿಂಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 44 ಮಂದಿ ಫೆಲೊಗಳನ್ನು ಆಯ್ಕೆ ಮಾಡಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ತಾಲೂಕುಗಳಿಗೆ ನಿಯೋಜಿಸಲಾಗಿದೆ. ಸ್ಥಳೀಯ ಆಡಳಿತವನ್ನು ಬಲಪಡಿಸಲು ಫೆಲೊಗಳು ವಿವಿಧ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ಬಡ್ಡಿ ಹಣಕ್ಕೆ ಮನಬಂದಂತೆ ಹಲ್ಲೆ – ಬೆತ್ತಲೆಗೊಳಿಸಿ ಚಿತ್ರಹಿಂಸೆ

ಕಲ್ಯಾಣ ಕರ್ನಾಟಕ ಭಾಗದ ವಿವಿಧ ತಾಲೂಕುಗಳಿಗೆ ನಿಯೋಜನೆಗೊಂಡಿರುವ ಫೆಲೊಗಳು ಕಳೆದ ಐದು ತಿಂಗಳಲ್ಲಿ ಮಾಡಿರುವ ಕಾರ್ಯಚಟುವಟಿಕೆಗಳನ್ನು ಸಭೆಯಲ್ಲಿ ಸಚಿವರ ಗಮನಕ್ಕೆ ತರಲಾಯಿತು. 62 ಪುಸ್ತಕ ಗೂಡುಗಳ ಆರಂಭ, 39 ಅರಿವು ಕೇಂದ್ರಗಳ ಪುನರಾರಂಭ, ವೃತ್ತಪತ್ರಿಕೆಗಳೊಂದಿಗೆ 56 ಅರಿವು ಕೇಂದ್ರಗಳ ಆರಂಭ, 116 ಕೂಸಿನಮನೆ ಪುನರಾರಂಭ, 66 ಕೂಸಿನ ಮನೆಗಳ ಮೂಲಭೂತ ಸೌಲಭ್ಯ ಸುಧಾರಣೆ, 95 ಕೂಸಿನ ಮನೆಗಳ ನಿರ್ವಹಣೆಯಲ್ಲಿ ಸುಧಾರಣೆ, 86 ಕೂಸಿನಮನೆಗಳಲ್ಲಿ ಪೌಷ್ಠಿಕ ಆಹಾರ ವಿತರಣೆಗೆ ಚಾಲನೆ, 61 ಗ್ರಾಮ ಪಂಚಾಯತಿಗಳಲ್ಲಿ ತ್ಯಾಜ್ಯ ಸಂಗ್ರಹ, ವಿಂಗಡಣೆ ಹಾಗೂ ವಿಲೇವಾರಿಗೆ ಚಾಲನೆ, 197 ಗ್ರಾಮ ಪಂಚಾಯತಿಗಳ ಸರ್ವ ಸದಸ್ಯರ ಸಭೆ ಏರ್ಪಾಟು, 104 ಗ್ರಾಮ ಪಂಚಾಯತಿಗಳ ಸಭಾ ನಡಾವಳಿ ಪಿ2.0 ತಂತ್ರಾಂಶದಲ್ಲಿ ಅಳವಡಿಕೆ, 508 ಗ್ರಾಮ ಪಂಚಾಯತಿಗಳಲ್ಲಿ ಉಪ-ಸಮಿತಿಗಳ ರಚನೆ ಮುಂತಾದ ಸುಧಾರಣ ಕಾರ್ಯ ಫೆಲೊಗಳು ಸಾಧ್ಯ ಮಾಡಿರುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ಇದನ್ನೂ ಓದಿ: ಮೀಟರ್ ಬಡ್ಡಿ ದಂಧೆಕೋರರ ಟಾರ್ಚರ್ – ಯುವಕ ನೇಣಿಗೆ ಶರಣು

ಕಾರ್ಯಕ್ರಮದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹಾದೇವನ್ ಮತ್ತು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರಾದ ಡಾ.ಅರುಂಧತಿ ಚಂದ್ರಶೇಖರ್ ಉಪಸ್ಥಿತರಿದ್ದರು. ಇದನ್ನೂ ಓದಿ: ಅನ್ಯ ಭಾಷಿಕರಿಗೆ ಬಿಬಿಎಂಪಿ, ಕನ್ನಡ ಪ್ರಾಧಿಕಾರದಿಂದ ಕನ್ನಡ ಕಲಿಸಲು ನಿರ್ಧಾರ

Share This Article