-ಒಂದೇ ದಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖದೀಮರ ಕೈಚಳಕ
ಬೆಂಗಳೂರು: ನಗರದಲ್ಲಿ ಸರಗಳ್ಳರ ಅಟ್ಟಹಾಸ ಜೋರಾಗಿದೆ. ಕುತ್ತಿಗೆಗೆ ಲಾಂಗ್ ಇಟ್ಟು, ಬೆರಳು ಕತ್ತರಿಸಿ 55 ಗ್ರಾಂ ಮೌಲ್ಯದ ಚಿನ್ನ ಕಳ್ಳತನ ಮಾಡಿರುವ ಘಟನೆ ಗಿರಿನಗರ (Girinagar) ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಿ ನಗರದಲ್ಲಿ (Eshwari Nagar) ನಡೆದಿದೆ.
ಉಷಾ ಹಾಗೂ ವರಲಕ್ಷ್ಮಿ ಎಂಬುವವರ ಚಿನ್ನದ ಸರ ಕಳ್ಳತನವಾಗಿದೆ. ಘಟನೆ ನಡೆದ ದಿನ ಇಬ್ಬರು ಮಹಿಳೆಯರು ಗಣೇಶ ಹಬ್ಬದ ಆರ್ಕಿಸ್ಟ್ರಾ ನೋಡಿ ವಾಪಸ್ ಆಗುತ್ತಿದ್ದರು. ಈ ವೇಳೆ ಖದೀಮರು ಬೈಕ್‌ನಲ್ಲಿ ಹಿಂದಿನಿಂದ ಬಂದು ಕುತ್ತಿಗೆಗೆ ಲಾಂಗ್ ಬೀಸಿದ್ದಾರೆ. ಗಾಬರಿಗೊಂಡ ಓರ್ವ ಮಹಿಳೆ ಭಯದಲ್ಲಿ ಚಿನ್ನದ ಸರ ನೀಡಿದ್ದಾಳೆ. ಇನ್ನೋರ್ವ ಮಹಿಳೆ ಪ್ರತಿರೋಧ ಒಡ್ಡಿದಾಗ ಆಕೆಯ ಬೆರಳು ಕಟ್ ಆಗಿದ್ದು, ಆಕೆಯ ಚಿನ್ನವನ್ನು ಎಗರಿಸಿದ್ದಾರೆ.ಇದನ್ನೂ ಓದಿ: BMW ಡಿಕ್ಕಿ – ಭೀಕರ ಅಪಘಾತಕ್ಕೆ ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ಬಲಿ
ಉಷಾ ಅವರ 10 ಗ್ರಾಂ ಹಾಗೂ ವರಲಕ್ಷ್ಮಿ ಅವರ 45 ಗ್ರಾಂ ಕಳ್ಳತನವಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದಲ್ಲದೇ ಗಿರಿನಗರ, ಇಂದಿರಾ ನಗರ, ಕೊತ್ತನೂರು, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಆರೋಪಿಗಳು ಕೈಚಳಕ ತೋರಿಸಿ, ಮೊಬೈಲ್, ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.
ಸದ್ಯ ನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಿ, ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: UG ಆಯುಷ್: ಪ್ರವೇಶಕ್ಕೆ ಎರಡು ದಿನ ಅವಕಾಶ – ಕೆಇಎ