ನಾಳೆ ಯಶವಂತಪುರ ಹೈಟೆಕ್ ಆಸ್ಪತ್ರೆ ಉದ್ಘಾಟನೆ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಗುಡ್ ನ್ಯೂಸ್. ಸಚಿವ ಮುನಿರತ್ನ ಅವರು ಪ್ರತಿನಿಧಿಸುವ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಮತ್ತು ಜನಸಾಮಾನ್ಯರಿಗಾಗಿ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗಿದೆ.

ಮುನಿರತ್ನ ಅವರ ವಿಶೇಷ ಪ್ರಯತ್ನದಿಂದಾಗಿ ಯಶವಂತಪುರದ ಹಳೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. 300 ಆಕ್ಸಿಜನ್ ಹಾಸಿಗೆ, ಆಕ್ಸಿಜನ್ ಟ್ಯಾಂಕ್, 100 ಐಸಿಯು ಬೆಡ್, ಮಕ್ಕಳಿಗಾಗಿ 30 ವಿಶೇಷ ಬೆಡ್‍ಗಳನ್ನು ಒಳಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಾಳೆ ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.  ಇದನ್ನೂ ಓದಿ: ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಆಸ್ಪತ್ರೆ ನಿರ್ಮಾಣ: ಶಾಸಕ ಮುನಿರತ್ನ

ವಿಶೇಷ ಅಂದ್ರೆ ರೋಗಿಗಳ ಮೇಲೆ ರೋಬೋ ನಿಗಾ ಇರಲಿದೆ. ಎಲ್ಲಾ ಕೊಠಡಿಗಳಿಗೂ ವೈಫೈ ವ್ಯವಸ್ಥೆ, ಶೌಚಾಲಯದಲ್ಲಿಯೂ ಆಕ್ಸಿಜನ್ ಪಾಯಿಟ್ ಇದೆ. ರೋಗಿಗಳ ಬೇಸರ ಕಳೆಯಲು ರಿಕ್ರಿಯೇಷನ್ ಸೆಂಟರ್ ಕೂಡ ನಿರ್ಮಿಸಲಾಗಿದೆ. ಸಂಜೆ 4.30ರಿಂದಲೇ ಆರ್‍ಆರ್ ನಗರ ವ್ಯಾಪ್ತಿಯ ಮಲ್ಲತ್ತಹಳ್ಳಿ, ಲಗ್ಗೆರೆ, ಜಾಲಹಳ್ಳಿ, ಜೆಪಿ ಪಾರ್ಕ್ ಸೇರಿ ಹಲವೆಡೆ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *