ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ: ಸ್ಮೃತಿ ಇರಾನಿ

Public TV
1 Min Read

ನವದೆಹಲಿ: ದೇಶದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಮುಖ್ಯ ಆದ್ಯತೆಯಾಗಬೇಕು. ಆದರೆ ಎಲ್ಲಾ ಮದುವೆಯೂ ಹಿಂಸಾತ್ಮಕ, ಎಲ್ಲಾ ಪುರುಷರು ಅತ್ಯಾಚಾರಿಗಳು ಎನ್ನುವುದು ಸರಿಯಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ.

ಸಿಪಿಐ ನಾಯಕ ಬಿನೋಯ್‌ ವಿಶ್ವಂ ಅವರ ವೈವಾಹಿಕ ಅತ್ಯಾಚಾರ ಹೇಳಿಕೆಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಅವರು, ಎಲ್ಲಾ ಮದುವೆಯೂ ಹಿಂಸಾತ್ಮಕ, ಎಲ್ಲಾ ಪುರುಷರೂ ಅತ್ಯಾಚಾರಿಗಳು ಎಂದು ಖಂಡಿಸುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೇರಿದರೆ ನನ್ನನ್ನು ಹೇಮಾ ಮಾಲಿನಿಯಾಗಿ ಮಾಡುತ್ತಿದ್ದರು: ಜಯಂತ್ ಚೌಧರಿ

ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ದೇಶದಲ್ಲಿ ಮಹಿಳೆಯರನ್ನು ರಕ್ಷಿಸುವುದು ಸರ್ಕಾರದ ಪ್ರಯತ್ನವಾಗಿದೆ. ಪ್ರಸ್ತುತ ದೇಶಾದ್ಯಂತ 30 ಕ್ಕೂ ಹೆಚ್ಚು ಸಹಾಯವಾಣಿಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಈವರೆಗೆ 66 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯವಾಗಿದೆ. ಅಲ್ಲದೇ 703 ʼಒನ್‌ ಸ್ಟಾಪ್‌ ಕೇಂದ್ರʼಗಳು ಕಾರ್ಯನಿರ್ವಹಿಸುತ್ತಿದ್ದು, ಇದರಿಂದ 5 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ.

ಸಂಸತ್‌ನ ಪ್ರತಿ ಸದಸ್ಯರು ತಮ್ಮ ಜಿಲ್ಲೆಗಳಲ್ಲಿ ತಮ್ಮದೇ ನಾಯಕತ್ವದಲ್ಲಿ ದಿಶಾ ಸಭೆಯನ್ನು ಏರ್ಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ನಿಮ್ಮ ನಾಯಕತ್ವದಲ್ಲಿ ಮಹಿಳಾ ಹಕ್ಕುಗಳ ಹೋರಾಟದಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬಹುದು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಜಯಲಲಿಲಾ ಆಪ್ತೆ ಶಶಿಕಲಾಗೆ ಜೈಲಿನಲ್ಲಿ ರಾಜಾತಿಥ್ಯ – ಪೊಲೀಸರಿಗೆ ಸಂಕಷ್ಟ

ಮಹಿಳೆಯರ ವಿರುದ್ಧ ಹೆಚ್ಚು ಅಪರಾಧಗಳು ನಡೆಯುವ ಸ್ಥಳಗಳಲ್ಲಿ ನಾವು ರಾಜ್ಯ ಸರ್ಕಾರಗಳ ಜೊತೆಗೆ ಹೆಚ್ಚುವರಿ ಒನ್‌ ಸ್ಟಾಪ್‌ ಕೇಂದ್ರಗಳನ್ನು ಸ್ಥಾಪಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *