ಇಬ್ಬರು ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಿ, ಖಾಸಗಿ ಭಾಗಕ್ಕೆ ಮೆಣಸಿನಕಾಯಿ ಉಜ್ಜಿ ದೌರ್ಜನ್ಯ

Public TV
2 Min Read

– ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಕೃತ್ಯ; ವೀಡಿಯೋ ವೈರಲ್‌

ಲಕ್ನೋ: ಇಬ್ಬರು ಅಪ್ರಾಪ್ತ ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಿ (Urine Case), ಅವರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕಳ್ಳತನದ ಶಂಕೆಯ ಮೇಲೆ 10 ಮತ್ತು 15 ವರ್ಷದ ಬಾಲಕರ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಭಯಾನಕ ದೃಶ್ಯದ ವೀಡಿಯೋಗಳು ವೈರಲ್‌ ಆಗಿದೆ. ಹಣ ದೋಚಿದ್ದಾರೆ ಎಂದು ಆರೋಪಿಸಿ ಗೂಂಡಾಗಳು ಹುಡುಗರನ್ನು ಹಿಡಿದು ಕಟ್ಟಿ ಹಾಕಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಕಂಠಪೂರ್ತಿ ಕುಡಿದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ವೀಡಿಯೋದಲ್ಲಿ ಹುಡುಗರಿಗೆ ಹಸಿರು ಮೆಣಸಿನಕಾಯಿ ತಿನ್ನಿಸುತ್ತಿರುವ, ಬಾಟಲಿಯಲ್ಲಿ ತುಂಬಿದ ಮೂತ್ರದೊಂದಿಗೆ ಅದನ್ನು ಸೇವಿಸಲು ಬಲವಂತಪಡಿಸುತ್ತಿರುವ ದೃಶ್ಯ ಇದೆ. ಪುಂಡರ ಗುಂಪು ಬಾಲಕರನ್ನು ನಿಂದಿಸುವುದರ ಜೊತೆಗೆ ಮೂತ್ರವನ್ನು ಕುಡಿಯದಿದ್ದರೆ ಥಳಿಸುವುದಾಗಿ ಬೆದರಿಕೆ ಹಾಕುತ್ತಿರುವ ದೃಶ್ಯ ಸೆರೆಯಾಗಿದೆ.

ಮತ್ತೊಂದು ವೀಡಿಯೋದಲ್ಲಿ, ಹುಡುಗರು ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡು, ಪ್ಯಾಂಟನ್ನು ಕೆಳಕ್ಕೆ ಎಳೆದುಕೊಂಡು ನೆಲದ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ. ಒಬ್ಬ ವ್ಯಕ್ತಿ ಅವರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿದ್ದಾನೆ. ನೋವಿನಿಂದ ಬಾಲಕರು ಚೀರಾಡುತ್ತಿರುವ ದೃಶ್ಯವಿದೆ. ಇದನ್ನೂ ಓದಿ: ಮಣಿಪುರದಲ್ಲಿ ನಿಲ್ಲದ ಸಂಘರ್ಷ – ಕಳೆದ 24 ಗಂಟೆಗಳಲ್ಲಿ ಆರು ಮಂದಿ ಸಾವು

ಆಗಸ್ಟ್ 4 ರಂದು ಈ ವೀಡಿಯೋಗಳನ್ನು ಚಿತ್ರೀಕರಿಸಲಾಗಿದೆ. ಜಿಲ್ಲೆಯ ಪತ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಕಟಿ ಚೌರಾಹಾ ಬಳಿಯ ಅರ್ಶನ್ ಚಿಕನ್ ಶಾಪ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಬ್ಬರು ಮಕ್ಕಳ ಕುರಿತಾದ ಆಕ್ಷೇಪಾರ್ಹ ಕೃತ್ಯದ ವೀಡಿಯೋಗಳನ್ನು ಗಮನಿಸಿದ್ದೇವೆ. ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಹಲ್ಲೆ ನಡೆಸಿದವರನ್ನು ಗುರುತಿಸಿ, ಈಗಾಗಲೇ 6 ಮಂದಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್