ಯುಪಿಯಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆ; ಅಖಿಲೇಶ್‌ ಯಾದವ್‌ ಜೊತೆ ರಾಹುಲ್‌ ಗಾಂಧಿ ಸೆಲ್ಫಿ

Public TV
1 Min Read

ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು (ಭಾನುವಾರ) ಆಗ್ರಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಪಾಲ್ಗೊಂಡಿದ್ದರು. ಇಬ್ಬರು ನಾಯಕರ ನಡುವಿನ ಆತ್ಮೀಯತೆಯನ್ನು ಎತ್ತಿ ತೋರಿಸುವ ಹಲವಾರು ಫೋಟೋಗಳು ವೈರಲ್‌ ಆಗಿವೆ.

ಯಾತ್ರೆ ವೇಳೆ ಅಖಿಲೇಶ್‌ ಯಾದವ್ (Akhilesh Yadav) ಜೊತೆ ರಾಹುಲ್ ಗಾಂಧಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರು ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಫೋಟೊಗಳು ಗಮನ ಸೆಳೆಯುತ್ತಿವೆ. ಇದನ್ನೂ ಓದಿ: ಹರಿಯಾಣದ ಮಾಜಿ ಶಾಸಕನಿಗೆ ಗುಂಡಿಕ್ಕಿ ಹತ್ಯೆ

ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಜೊತೆ ಅಖಿಲೇಶ್‌ ಯಾದವ್‌ ಪಾಲ್ಗೊಂಡಿದ್ದರು. ಇಬ್ಬರೂ ನಾಯಕರು ಕೆಂಪು ಜೀಪಿನ ಮೇಲೆ ಒಟ್ಟಿಗೆ ಪೋಸ್ ನೀಡುತ್ತಿರುವುದು ಫೋಟೊದಲ್ಲಿ ಇದೆ.

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಖಿಲೇಶ್‌ ಯಾದವ್ ಮತ್ತು ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಇಬ್ಬರು ನಾಯಕರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಯಾತ್ರೆಗೆ ನೆರೆದಿದ್ದ ಜನರತ್ತ ಕೈ ಬೀಸಿದ ಫೋಟೊಗಳು ಸಹ ವೈರಲ್‌ ಆಗಿವೆ. ಇದನ್ನೂ ಓದಿ: ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

Share This Article