ವಕ್ಫ್ ವಿವಾದ; ಬಿಜೆಪಿ ರೆಬಲ್ಸ್ ಟೀಂನಿಂದ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ

Public TV
3 Min Read

ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿವಾದ ದೊಡ್ಡದಾಗುತ್ತಿರೋ ಬೆನ್ನಲ್ಲೇ ಬಿಜೆಪಿಯ (BJP) ರೆಬಲ್ಸ್ ಟೀಂ ವಕ್ಫ್ ವಿಚಾರವಾಗಿ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ಮಾಡೋದಾಗಿ ಘೋಷಣೆ ಮಾಡಿದೆ.

ಬಿಜೆಪಿಯ ರೆಬೆಲ್ಸ್ ನಾಯಕರುಗಳಾದ ಯತ್ನಾಳ್, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೋಳಿ (Ramesh Jarakiholi) ಇಂದು ಸುದ್ದಿಗೋಷ್ಠಿ ನಡೆಸಿ ವಕ್ಫ್ ವಿರುದ್ಧ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಪ್ರಾರಂಭ ಮಾಡೋದಾಗಿ ಘೋಷಣೆ ಮಾಡಿದ್ರು. ನ.25 ರಿಂದ ಡಿ.25ವರೆಗೆ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 50 ಸಾವಿರ ಲಂಚ ಸ್ವೀಕಾರ – ಭಟ್ಕಳ ಪುರಸಭಾ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ

ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ರಾಜ್ಯಾದ್ಯಂತ ಅಭಿಯಾನ ಶುರು ಮಾಡ್ತಿದ್ದೇವೆ. ಇದಕ್ಕಾಗಿ ಒಂದು ವಾರ್ ರೂಂ ಪ್ರಾರಂಭ ಮಾಡ್ತಿದ್ದು, ಯಾರಿಗೆ ಅನ್ಯಾಯ ಆಗಿದೆಯೋ ಅವರು ವಾರ್ ರೂಂಗೆ ದಾಖಲಾತಿ ನೀಡಬಹುದು. ನ.25 ರಿಂದ ಬಸನಗೌಡ ಯತ್ನಾಳ್ ನೇತೃತ್ವದಲ್ಲಿ ಅಭಿಯಾನ ಶುರುವಾಗಲಿದೆ. ಬೀದರ್‌ನಿಂದ (Bidar) ಅಭಿಯಾನ ಪ್ರಾರಂಭ ಆಗಲಿದ್ದು, ಬಳಿಕ ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ನಿತ್ಯವೂ ಅಭಿಯಾನ ಮಾಡೋದಾಗಿ ತಿಳಿಸಿದರು. ನಮ್ಮದು ಮೂರು ಬೇಡಿಕೆ ಇದೆ ಅವುಗಳೆಂದರೆ, 1954ರಿಂದ ಆಗಿರೋ ವಕ್ಫ್ನ ಎಲ್ಲಾ ಗೆಜೆಟ್‌ಗಳನ್ನ ರದ್ದು ಮಾಡಬೇಕು. ರೈತರು, ಮಠಗಳು, ಮಂದಿರ, ದಲಿತರು ಸೇರಿ ಜಾಗ ಅಂತ ವಕ್ಫ್ ಮಾಡ್ತಿದೆ ಅದನ್ನ ಕಾಯಂ ಆಗಿ ಜಮೀನು ವಾಪಸ್ ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Waqf Land Row | ವಿವಾದಿತ ಜಮೀನಿನಲ್ಲಿ ಉಳುಮೆ – ರೈತರ ಮೇಲೆ ಕೇಸ್ ದಾಖಲು, ಟ್ರ್ಯಾಕ್ಟರ್ ಜಪ್ತಿ

ಬಸನಗೌಡ ಯತ್ನಾಳ್ ಮಾತನಾಡಿ, ವಕ್ಫ್ ಬೋರ್ಡ್ನಿಂದ ದೊಡ್ಡ ಅನ್ಯಾಯ ಆಗಿದೆ. ರೈತರು, ಮಠಗಳು ಸೇರಿ ಎಲ್ಲರಿಗೂ ಇದರಿಂದ ಸಮಸ್ಯೆ ಆಗಿದೆ. ವಕ್ಫ್ ನ್ಯಾಯಮಂಡಳಿ ರದ್ದಾಗಬೇಕು. ವಕ್ಫ್ ನ್ಯಾಯಮಂಡಳಿ ಒಂದು ಶಾಪ ಆಗಿದೆ. ಹೀಗಾಗಿ ನ್ಯಾಯಾಲಯದ ಮೂಲಕವೇ ಎಲ್ಲವೂ ಇತ್ಯರ್ಥ ಆಗಬೇಕು ಎಂದು ಹೇಳಿದರು. ಇದನ್ನೂ ಓದಿ: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್: ರೇಣುಕಾಚಾರ್ಯ ವಾಗ್ದಾಳಿ

ಈಗ 2700 ಎಕರೆ ಜಾಗ ಖಬರ್‌ಸ್ತಾನಗೆ ಕೊಡೋಕೆ ಸರ್ಕಾರ, ಕಂದಾಯ ಇಲಾಖೆ ನಿರ್ಣಯ ಮಾಡಿದೆ. ವಕ್ಫ್ಗೆ ಎಷ್ಟು ಜಾಗ ತಗೋಬೋದು ಎಂದು ಅವರು ಪಟ್ಟಿ ಮಾಡಿದ್ದಾರೆ. ಅವರು ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿ ಮಾಡಲು ಮುಂದಾಗಿದ್ದಾರೆ. ನಾವು ಅಭಿಯಾನ ಮಾಡಿ ಮಾಹಿತಿ ಪಡೆದು ಜೆಪಿಸಿಗೆ ನಾವು ವರದಿ ಕೊಡ್ತೀವಿ. ಜನಜಾಗೃತಿಗಾಗಿ ಈ ಅಭಿಯಾನ ಮಾಡ್ತಿದ್ದೇವೆ. ರಾಜ್ಯ, ಕೇಂದ್ರ ಸರ್ಕಾರ ಎರಡಕ್ಕೂ ನಾವು ಈ ಒತ್ತಾಯ ಮಾಡ್ತಿದ್ದೇವೆ ಎಂದರು. ಇದನ್ನೂ ಓದಿ: ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

ಇದು ಬಿಜೆಪಿ ಪಕ್ಷದಿಂದಲೇ ನಡೆಯುವ ಹೋರಾಟ. ನಮ್ಮ ಅಭಿಯಾನಕ್ಕೆ ವರಿಷ್ಠರ ಅನುಮತಿ ಪ್ರಶ್ನೆ ಬರೋದಿಲ್ಲ. ನಮ್ಮ ಗೃಹ ಸಚಿವರು, ಜೆಪಿಸಿ ಸಮಿತಿ ನಮ್ಮ ಹೋರಾಟಕ್ಕೆ ಕೈಜೋಡಿಸಿದೆ. ಹೀಗಾಗಿ ನಮ್ಮ ಅಭಿಯಾನಕ್ಕೆ ಅವರ ಬೆಂಬಲವೂ ಇದೆ ಅಂತ ಅರ್ಥ. ಯಾರಿಗೆ ರೈತರು, ಮಠ ಮಾನ್ಯಗಳು ಪರ ಕಳಕಳಿ ಇದೆಯೋ ಪಕ್ಷಾತೀತವಾಗಿ ನಮ್ಮ ಜೊತೆ ಬಂದು ಸೇರಬಹುದು. ಪಕ್ಷ ಅಂತ ಏನಿಲ್ಲ. ಯಾರು ಬೇಕಾದ್ರು ಬರಬಹುದು. ರಾಜ್ಯಾಧ್ಯಕ್ಷ ಆಗಲಿ ಯಾರೇ ಆಗಲಿ ಬರಬಹುದು. ಯಾರೋ ಒಬ್ಬ ವ್ಯಕ್ತಿ ಅಂತ ಇಲ್ಲ ಎಂದು ವಿಜಯೇಂದ್ರಗೂ ಪರೋಕ್ಷವಾಗಿ ತಿರುಗೇಟು ಕೊಟ್ಟರು. ಇದನ್ನೂ ಓದಿ: ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾಗೆ 7,100 ಕೋಟಿ ದಂಡ ವಿಧಿಸಿದ ಯುರೋಪ್‌

Share This Article