ಮುಂದಿನ ಎರಡ್ಮೂರು ದಿನಗಳಲ್ಲಿ ಕರಾವಳಿ, ಮಲೆನಾಡಿನಲ್ಲಿ ಮತ್ತೆ ಮಳೆ ಚುರುಕು

By
1 Min Read

ಬೆಂಗಳೂರು: ಕಳೆದ 60 ಗಂಟೆಗಳಿಂದ ಕರಾವಳಿ, ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಮುಂದಿನ ಎರಡ್ಮೂರು ದಿನಗಳಲ್ಲಿ ಮಳೆ ಮತ್ತೆ ಚುರುಕು ಪಡೆಯುವ ನಿರೀಕ್ಷೆ ಇದೆ.

ಉತ್ತರ ಒಳನಾಡಿನ ಕೆಲ ಭಾಗಗಳನ್ನು ಹೊರತುಪಡಿಸಿದ್ರೆ, ಉಳಿದಂತೆ ಜುಲೈ 19ರವರೆಗೂ ರಾಜ್ಯದಲ್ಲಿ ಉತ್ತಮ ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ (Rain) ಇಳಿಮುಖವಾದ ಕಾರಣ ಕೆಆರ್‍ಎಸ್, ಕಬಿನಿ, ಹಾರಂಗಿ ಜಲಾಶಯಗಳಿಗೆ ಒಳಹರಿವು ಸಹ ಕಡಿಮೆ ಆಗಿದೆ.

ಕೆಆರ್‍ಎಸ್ ಒಳಹರಿವು 7624 ಕ್ಯೂಸೆಕ್‍ಗೆ ಮತ್ತು ಕಬಿನಿಯ ಒಳಹರಿವು 4485 ಕ್ಯೂಸೆಕ್‍ಗೆ ಕುಸಿದಿದೆ. ಜುಲೈ 1ರಿಂದ ಈವರೆಗೂ ಕಬಿನಿ ಡ್ಯಾಂಗೆ 6.4 ಟಿಎಂಸಿ ನೀರು, ಕೆಆರ್‍ಎಸ್‍ಗೆ 4 ಟಿಎಂಸಿ ನೀರು ಬಂದು ಸೇರಿದೆ. ಮಲೆನಾಡಿನಲ್ಲಿ ಮಳೆ ಪರಿಣಾಮ ತುಂಗಭದ್ರಾ ಡ್ಯಾಂಗೆ ದಿನಕ್ಕೊಂದು ಟಿಎಂಸಿ ನೀರು ಸೇರುತ್ತಿದೆ. ಇತ್ತ ಬೆಂಗಳೂರಿನಲ್ಲಿ ಮಳೆ ಮತ್ತು ಮೋಡಗಳ ಕಣ್ಣಾಮುಚ್ಚಾಲೆ ಇವತ್ತು ಕೂಡ ಮುಂದುವರಿದಿತ್ತು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್