ಸುಧಾರಣೆ, ಸಾಧನೆ ಮತ್ತು ರೂಪಾಂತರ ಮಂತ್ರದ ಮೇಲೆ ಭಾರತ ಪ್ರಗತಿ ಸಾಧಿಸಿದೆ: ಮೋದಿ

Public TV
1 Min Read

ಲಕ್ನೋ: ನೀತಿ ಮತ್ತು ಸ್ಥಿರತೆ, ಸಮನ್ವಯ ಮತ್ತು ವ್ಯವಹಾರಗಳನ್ನು ಸುಲಭಗೊಳಿಸುವುದರ ಮೇಲೆ ನಮ್ಮ ಸರ್ಕಾರ ಕೇಂದ್ರಿಕರಿಸುತ್ತಿದ್ದು, ಸುಧಾರಣೆ, ಸಾಧನೆ ಮತ್ತು ರೂಪಾಂತರ ಮಂತ್ರದ ಮೇಲೆ ಭಾರತ ಪ್ರಗತಿ ಸಾಧಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ಲಕ್ನೋದಲ್ಲಿ ಹೂಡಿಕೆದಾರರ ಶೃಂಗಸಭೆ 3.0 ಉದ್ಘಾಟಿಸಿ ಮಾತನಾಡಿದ ಅವರು, ನಾವು ಎಂಟು ವರ್ಷಗಳ ಆಡಳಿತ ಪೂರ್ಣಗೊಳಿಸಿದ್ದೇವೆ, ಸುಧಾರಣೆ, ಕಾರ್ಯಕ್ಷಮತೆ, ರೂಪಾಂತರ ಮಂತ್ರದ ಮೇಲೆ ಪ್ರಗತಿ ಸಾಧಿಸಿದ್ದೇವೆ. ಇಂದಿನ ಕಾರ್ಯಕ್ರಮದಲ್ಲಿ 80,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ದಾಖಲೆಯ ಹೂಡಿಕೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ. ಉತ್ತರ ಪ್ರದೇಶ ಜನರು ಇದರ ನೇರ ಲಾಭ ಪಡೆಯಲಿದ್ದಾರೆ ಹೀಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು. ಇದನ್ನೂ ಓದಿ: ಹೊಸ ನೇಮಕಾತಿಗೆ ವಿರಾಮ – 10% ಉದ್ಯೋಗಿಗಳನ್ನು ತೆಗೆದುಹಾಕಬೇಕು ಎಂದ ಟೆಸ್ಲಾ ಸಿಇಒ

ಭಾರತದ ಬೆಳವಣಿಗೆ ಕಥೆಯ ಬಗ್ಗೆ ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡೆಬೇಕು, G20 ರಾಷ್ಟ್ರಗಳಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಿದೆ. ಇಂಟರ್‌ನೆಟ್‌ ಬಳಕೆಯಲ್ಲಿ ಭಾರತ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಜಾಗತಿಕ ಚಿಲ್ಲರೇ ಸೂಚ್ಯಂಕದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇದನ್ನೂ ಓದಿ: ವಿಶ್ವದ ಎರಡನೇ ದುಬಾರಿ ಲೀಗ್‌ – ಐಪಿಎಲ್‌ನ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ?

ಭಾರತ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ದೇಶವಾಗಿದೆ. ವಿದೇಶಿ ನೇರ ಹೂಡಿಕೆ ನೊಂದಾಯಿತ ದಾಖಲೆ ಹೊಂದಿದೆ. ಒನ್ ನೇಷನ್ ಒನ್ ಟ್ಯಾಕ್ಸ್, ಒನ್ ನೇಷನ್ ಒನ್ ಗ್ರೀಡ್, ಒನ್ ನೇಷನ್ ಒನ್ ಮೊಬಿಲಿಟಿ ಕಾರ್ಡ್, ಒನ್ ನೇಷನ್ ಒನ್ ರೇಷನ್ ಕಾರ್ಡ್ ಮೂಲಕ ವ್ಯವಸ್ಥೆಯನ್ನು ಸುಲಭಗೊಳಿಸಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *