ಮುರುಘಾ ಮಠದ ಪೂಜಾ ಕೈಂಕರ್ಯಕ್ಕೆ ಉಸ್ತುವಾರಿ ನೇಮಕ – ಭುಗಿಲೆದ್ದ ಭಿನ್ನಮತ

Public TV
2 Min Read

ಚಿತ್ರದುರ್ಗ: ಮುರುಘಾ ಶ್ರೀ (Murugha Shree) ವಿರುದ್ಧ ಮತ್ತೊಂದು ಕೇಸ್ ದಾಖಲಾದಾಗಿನಿಂದ ಪೀಠಾಧಿಪತಿ ಬದಲಾವಣೆ ಕೂಗು ತಾರಕಕ್ಕೇರಿದೆ. ಹೀಗಾಗಿ ಅದಕ್ಕೆ ಬ್ರೇಕ್ ಹಾಕಲು ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಮುರುಘಾ ಶ್ರೀ ಆಪ್ತ ಶಿಷ್ಯ ಬಸವಪ್ರಭು ಶ್ರೀಗಳನ್ನು (Basavaprabhu Shree) ನೇಮಿಸಲಾಗಿದೆ. ಆದರೆ ಇದರಿಂದಾಗಿ ಮುರುಘಾ ಮಠದಲ್ಲಿ (Murugha Mutt) ಮತ್ತಷ್ಟು ಅಸಮಾಧಾನ ಭುಗಿಲೆದ್ದಿದೆ.

ಕೋಟೆ ನಾಡು ಚಿತ್ರದುರ್ಗದ ಮುರುಘಾ ಮಠಕ್ಕೆ ತನ್ನದೇ ಆದ ಐತಿಹ್ಯವಿದೆ. ಶೂನ್ಯ ಪೀಠ ಪರಂಪರೆಯ ಮಠಕ್ಕೆ ಪೀಠಾಧಿಪತಿಯೇ ಸುಪ್ರಿಂ. ಆದರೆ ಪೋಕ್ಸೋ ಕೇಸ್‌ನಡಿ ಮುರುಘಾ ಶ್ರೀ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಮಠದ ಆಡಳಿತ ಹಾಗೂ ಪೂಜಾ ಕೈಂಕರ್ಯಕ್ಕೆ ಅಡ್ಡಿಯಾಗಬಾರದೆಂಬ ನಿಟ್ಟಿನಲ್ಲಿ ಯೋಚಿಸಿದ್ದ ಮುರುಘಾ ಶ್ರೀ, ಮಠದ ಧಾರ್ಮಿಕ ಆಚರಣೆ ಹಾಗೂ ಶರಣ ಸಂಸ್ಕ್ರತಿ ಉತ್ಸವದ ಪ್ರಭಾರ ಉಸ್ತುವಾರಿಯಾಗಿರುವಂತೆ ಹೆಬ್ಬಾಳದ ಮಹಾಂತ ರುದ್ರೇಶ್ವರ ಸ್ವಾಮೀಜಿ ಅವರನ್ನು ಮೌಖಿಕವಾಗಿಯಷ್ಟೇ ನೇಮಿಸಿದ್ದರು.

ಮುರುಘಾ ಶ್ರೀ ವಿರುದ್ಧ ಮತ್ತೊದು ಕೇಸ್ ದಾಖಲಾದ ಬಳಿಕ ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಹೆಚ್. ಏಕಾಂತಯ್ಯ ನೇತೃತ್ವದ ಲಿಂಗಾಯತ ಸಮುದಾಯದ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸರ್ಕಾರದ ಗಮನ ಸೆಳೆದಿದ್ದರು. ಇದನ್ನೂ ಓದಿ: ಭಾರತ್ ಜೋಡೋ ವೇಳೆ ಕಾಂಗ್ರೆಸ್ ಹಾಕಿದ್ದ ಕಸ ಗುಡಿಸಿ ಸ್ವಚ್ಛಗೊಳಿಸಿದ ಶ್ರೀರಾಮುಲು

ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚೆತ್ತ ಮುರುಘಾ ಶ್ರೀ ಹಾಗೂ ಮಠದ ಆಡಳಿತ ಸಮಿತಿಯು, ಹೈಕೋರ್ಟ್‌ನಿಂದ ಅನುಮತಿ ಪಡೆದು, ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿಯನ್ನು ಅಧಿಕೃತವಾಗಿ ನೇಮಿಸಿದ್ದಾರೆ.

ಹೊಸ ಜವಾಬ್ದಾರಿ ವಹಿಸಿಕೊಂಡ ಬಸವಪ್ರಭು ಶ್ರೀ, ಮಠದಲ್ಲಿನ ಕರ್ತೃ ಗದ್ದುಗೆ ದರ್ಶನ ಪಡೆದು, ಮುರುಘಾ ಶ್ರೀ ಆಶೀರ್ವಾದದಿಂದ ಈ ಅವಕಾಶ ಸಿಕ್ಕಿದೆ. ಈ ಸೇವೆಯನ್ನು ನಿಷ್ಠೆಯಿಂದ, ಭಕ್ತಿಯಿಂದ ಸಲ್ಲಿಸುತ್ತೇನೆ. ಈ ಜವಬ್ದಾರಿಯನ್ನು ಮುರುಘೇಶ, ಗುರು ಬಸವೇಶನ ಸೇವೆ ಎಂದು ಭಾವಿಸುತ್ತೇನೆ. ಮುರುಘಾ ಶ್ರೀ ಮಾರ್ಗದರ್ಶನದಲ್ಲಿ ಮಠದ ಸೇವೆ ಸಲ್ಲಿಸುತ್ತೇನೆ. ಹೀಗಾಗಿ ಭಕ್ತರು ಎಂದಿನಂತೆ ನಮಗೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ 2 ಲಕ್ಷ ಜನರನ್ನು ಸೇರಿಸಲು ಬಿಜೆಪಿ ನಿರ್ಧಾರ

ಮುರುಘಾ ಮಠದ ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಬಸವಪ್ರಭು ಶ್ರೀಗಳನ್ನು ನೇಮಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮುರುಘಾ ಮಠದಲ್ಲಿ ಬಿನ್ನಮತ ಭುಗಿಲೆದ್ದಿದೆ. ಮುರುಘಾ ಶ್ರೀ ನ್ಯಾಯಾಂಗ ಬಂಧನಕ್ಕೊಳಗಾದಾಗಿನಿಂದ ಎಲ್ಲಾ ಪೂಜಾ ಕೈಂಕರ್ಯದ ಜವಾಬ್ದಾರಿ ಹೊತ್ತಿದ್ದ ಹೆಬ್ಬಾಳದ ಮಹಂತ ರುದ್ರೇಶ್ವರ ಶ್ರೀ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಲಿಖಿತವಾಗಿ ಬಸವಪ್ರಭು ಶ್ರೀ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವ ಹಿನ್ನೆಲೆ ಬೇಸರಗೊಂಡಿರುವ ರುದ್ರೇಶ್ವರ ಸ್ವಾಮೀಜಿ ಶನಿವಾರ ಸಂಜೆ ಮುರುಘಾ ಮಠದಿಂದ ಹೆಬ್ಬಾಳಕ್ಕೆ ತೆರಳಿದ್ದಾರೆ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.

ಮುರುಘಾ ಮಠದಲ್ಲಿ ಒಂದು ಸಮಸ್ಯೆ ಬಗೆಹರಿಯುತ್ತಿದ್ದಂತೆ ಮತ್ತೊಂದು ಸಮಸ್ಯೆ ತಲೆದೋರುತ್ತಿದೆ. ಪೀಠಾಧಿಪತಿ ಬದಲಾವಣೆ ಕೂಗಿಗೆ ಬ್ರೇಕ್ ಹಾಕಲು ಪೂಜಾ ಕೈಂಕರ್ಯದ ಉಸ್ತುವಾರಿಯನ್ನಾಗಿ ಬಸವಪ್ರಭು ಶ್ರೀಗಳನ್ನು ನೇಮಿಸಲಾಗಿದೆ. ಮುರುಘಾ ಶ್ರೀಗೆ ಬಸವಪ್ರಭು ಶ್ರೀಗಳು ಆಪ್ತ ಶಿಷ್ಯರೆಂಬ ಹಿನ್ನಲೆ ಈ ಉಸ್ತುವಾರಿ ಆಯ್ಕೆಗೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *