ಕರ್ತವ್ಯ ಲೋಪ ಎಸಗಿದ್ರೆ ವರ್ಗಾವಣೆ ಇಲ್ಲ ನೇರವಾಗಿ ಸಸ್ಪೆಂಡ್- ಅಧಿಕಾರಿಗಳಿಗೆ ವಾರ್ನಿಂಗ್

By
1 Min Read

ರಾಮನಗರ: ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ (H.C Balakrishna) ಇಂದು (ಗುರುವಾರ) ಕೆಡಿಪಿ ಸಭೆ ನಡೆಸಿದ್ರು.

ಮೊದಲ ಕೆಡಿಪಿ ಸಭೆ (KDP Meeting) ಯಲ್ಲೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಶಾಸಕರು, ಜನಸ್ನೇಹಿ ಆಡಳಿತ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ರು. ಈ ಹಿಂದೆ ಹೇಗೆ ಕೆಲಸ ಮಾಡ್ತಿದ್ರೋ ಗೊತ್ತಿಲ್ಲ. ಮುಂದೆ ಸಾರ್ವಜನಿಕರ ಕೆಲಸ ಕಾರ್ಯ ಸರಾಗವಾಗಿ ಆಗಬೇಕು. ಪ್ರತೀ ಇಲಾಖೆಯಲ್ಲೂ ಮೂಮೆಂಟ್ ರಿಜಿಸ್ಟ್ರಾರ್ ಪಾಲನೆ ಕಡ್ಡಾಯ ಮಾಡಿ ಎಂದಿದ್ದಾರೆ.

ತಾಲೂಕುಮಟ್ಟದ ಅಧಿಕಾರಿಗಳು ಪ್ರತಿ ದಿನ ಫೀಲ್ಡ್ ವರ್ಕ್ ಮಾಡಿ ಜನರ ಸಮಸ್ಯೆ ಬಗೆಹರಿಸಿ. ಒಂದುವೇಳೆ ಕರ್ತವ್ಯ ಲೋಪ ಕಂಡು ಬಂದ್ರೆ ಕೇವಲ ವರ್ಗಾವಣೆ ಅಲ್ಲ ಸಸ್ಪೆಂಡ್‍ಗೆ ರೆಕ್ಮೆಂಡ್ ಮಾಡ್ತೇನೆ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ರು. ಇದನ್ನೂ ಓದಿ: ದೇಗುಲದ ಗರ್ಭಗುಡಿಯವರೆಗೂ ಹರಿದ ರಕ್ತ- ಕಿಡಿಗೇಡಿಗಳ ಕೃತ್ಯದಿಂದ ಗ್ರಾಮಸ್ಥರಲ್ಲಿ ಆತಂಕ

ಸಭೆಗೂ ಮುನ್ನ ಮಾಗಡಿಯಲ್ಲಿ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಪತ್ನಿ ಜೊತೆ ಶ್ರೀನಿವಾಸ ಕಲ್ಯಾಣ ಪೂಜೆ ನೆರವೇರಿಸಿ ಸಚಿವ ಸ್ಥಾನಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಶಾಸಕರಿಗೆ ಸಾಥ್ ನೀಡಿದ್ರು.

Share This Article