ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಮೊದಲ ಬಾರಿಗೆ ನಮಾಜ್- ಇಸ್ಲಾಂ ಬಗ್ಗೆ ತಪ್ಪು ಕಲ್ಪನೆಗಳಿವೆ ಎಂದ ಮುಸ್ಲಿಮರು

Public TV
1 Min Read

ನ್ಯೂಯಾರ್ಕ್‌: ಪವಿತ್ರ ರಂಜಾನ್‌ ತಿಂಗಳ ಉಪವಾಸದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ನೂರಾರು ಮಂದಿ ಮುಸ್ಲಿಂ ಸಮುದಾಯದವರು ನ್ಯೂಯಾರ್ಕ್‌ ನಗರದ ಟೈಮ್ಸ್‌ ಸ್ಕ್ವೇರ್‌ನಲ್ಲಿ ವಿಶೇಷ ನಮಾಜ್‌ (ತರಾವೀಹ್‌) ಸಲ್ಲಿಸಿದರು.

ನಗರದ ಅತ್ಯಂತ ಜನನಿಬಿಡ ಪ್ರದೇಶ ಟೈಮ್ಸ್ ಸ್ಕ್ವೇರ್‌ನ ಪಾದಚಾರಿ ಮಾರ್ಗದಲ್ಲಿ ಮುಸ್ಲಿಮರಿಗೆ 1,500 ಊಟಗಳನ್ನು ಒದಗಿಸಲಾಯಿತು. ನಂತರ ನೂರಾರು ಮುಸ್ಲಿಮರು ತರಾವೀಹ್ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಇದನ್ನೂ ಓದಿ: ಶಬ್ದ ಮಾಲಿನ್ಯ ನಿಯಮ ಪಾಲಿಸದ ಮಂದಿರ, ಮಸೀದಿ, ಚರ್ಚ್‍ಗಳಿಗೆ ನೋಟಿಸ್

RAMZAN

ಟೈಮ್ಸ್ ಸ್ಕ್ವೇರ್ ನ್ಯೂಯಾರ್ಕ್ ನಗರದ ಮಿಡ್‌ಟೌನ್ ಮ್ಯಾನ್‌ಹ್ಯಾಟನ್‌ನಲ್ಲಿರುವ ಪ್ರಮುಖ ವಾಣಿಜ್ಯ ಪ್ರದೇಶ ಮತ್ತು ಪ್ರವಾಸಿ ತಾಣವಾಗಿದೆ. ವರ್ಷಕ್ಕೆ ಸುಮಾರು 5 ಕೋಟಿ ಪ್ರವಾಸಿಗರನ್ನು ಸೆಳೆಯುವ ಆಕರ್ಷಣೀಯ ಪ್ರವಾಸಿ ತಾಣವಾಗಿದೆ.

ಇಸ್ಲಾಂ ಎಂದರೆ ಏನು ಎಂದು ತಿಳಿಯದ ಎಲ್ಲರಿಗೂ ನಮ್ಮ ಧರ್ಮವನ್ನು ವಿವರಿಸಲು ನಾವು ಇಲ್ಲಿದ್ದೇವೆ. ಇಸ್ಲಾಂ ಶಾಂತಿಯ ಧರ್ಮ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ. ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬನವಾಸಿ ಮಧುಕೇಶ್ವರ ರಥೋತ್ಸವಕ್ಕೆ ಹಿಂದೂಯೇತರ ವ್ಯಾಪಾರಿಗಳಿಗೆ ನಿರ್ಬಂಧ

ತರಾವೀಹ್‌ನಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು, ಇಸ್ಲಾಂ ಧರ್ಮದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಎಲ್ಲಾ ಸಂಸ್ಕೃತಿ, ಧರ್ಮಗಳಲ್ಲಿ ಹುಚ್ಚು ಜನರಿದ್ದಾರೆ. ಆ ಸಣ್ಣ ಗುಂಪುಗಳು ಬಹುಮತವನ್ನು ಪ್ರತಿನಿಧಿಸುವುದಿಲ್ಲ. ನಾವು ಪ್ರಾರ್ಥನೆ, ಉಪವಾಸ, ಒಳ್ಳೆಯ ಕಾರ್ಯಗಳನ್ನು ಮಾಡಲು, ದಾನ ಮಾಡಲು ಪ್ರೋತ್ಸಾಹಿಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *