11 ದಿನದಲ್ಲಿ ಅಂಬಿ-ಸುಮಲತಾ 27ನೇ ಮದುವೆ ವಾರ್ಷಿಕೋತ್ಸವ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್‍ನ ಮಾದರಿ ಜೋಡಿ ಅನ್ನಿಸಿಕೊಂಡಿರುವ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರ ಮದುವೆ ವಾರ್ಷಿಕೋತ್ಸವಕ್ಕೆ ಕೇವಲ 11 ದಿನ ಬಾಕಿ ಇತ್ತು. ಈ ಮೊದಲೇ ಅಂಬರೀಶ್ ತಮ್ಮ ಕುಟುಂಬದವರನ್ನು ಅಗಲಿದ್ದಾರೆ.

ಇದೇ ಡಿಸೆಂಬರ್ 8ರಂದು ಅಂಬರೀಶ್ ಹಾಗೂ ಸುಮಲತಾ ಅವರ 27ನೇ ಮದುವೆ ವಾರ್ಷಿಕೋತ್ಸವವಿದೆ. 1991ರ ಡಿಸೆಂಬರ್ 8ರಂದು ಅಂಬಿ ಜೊತೆ ಸುಮಲತಾ ಸಪ್ತಪದಿ ತುಳಿದಿದ್ದರು. 25ನೇ ಮದುವೆ ವಾರ್ಷಿಕೋತ್ಸವವನ್ನು ಮಲೇಶಿಯಾದಲ್ಲಿ ಅದ್ಧೂರಿಯಾಗಿ ಅಂಬಿ ಸುಮಲತಾ ಆಚರಿಸಿಕೊಂಡಿದ್ದರು. ದರ್ಶನ್, ಪುನೀತ್ ಸೇರಿದಂತೆ ಸ್ಯಾಂಡಲ್‍ವುಡ್ ದಂಡೆ ಅಂದು ಪಾಲ್ಗೊಂಡಿತ್ತು. ಇದನ್ನೂ ಓದಿ: ಅಂಬಿ-ಸುಮಲತಾ ಕ್ಯೂಟ್ ಲವ್‍ಸ್ಟೋರಿ ಒಮ್ಮೆ ಓದಿ

ಈ ಮೊದಲು ಸುಮಲತಾ ಅವರು ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು. ನಾವು ಮೊದಲು 1984ನಲ್ಲಿ ಭೇಟಿಯಾಗಿದ್ದೇವು. ನಂತರ 1991ರಲ್ಲಿ ಮದುವೆಯಾಗಿದ್ದವು. ಆ ಮಧ್ಯೆ ಎರಡು ಮೂರು ವರ್ಷದಲ್ಲಿ ಯಾವುದೇ ಸಿನಿಮಾವನ್ನು ಮಾಡಿರಲಿಲ್ಲ. ನಾನು ಚೆನ್ನೈನಲ್ಲಿದ್ದರೆ, ಅವರು ಬೆಂಗಳೂರಿನಲ್ಲಿದ್ದರು. ಆ ಕಾಲದಲ್ಲಿ ಮೊಬೈಲ್ ಕೂಡ ಇರಲಿಲ್ಲ. ಯಾವಾಗ್ಲಾದ್ರೂ ಅವರು ಬೆಂಗಳೂರಿನಿಂದ ಚೆನ್ನೈಗೆ ಬಂದಾಗ ಫೋನ್ ಮಾಡಿ `ಹೌ ಆರ್ ಯೂ’ ಎಂದು ಕೇಳುತ್ತಿದ್ದರು. ನಾನು ಪಾರ್ಟಿ ಅಥವಾ ಪಕ್ಕದಲ್ಲಿ ಶೂಟಿಂಗ್ ಇದ್ದಾಗ ಹಲೋ ಎಂದು ಹೇಳುತ್ತಿದ್ದೆ.

ಮೊದಲು ನಾವು ಕ್ಲೋಸ್ ಆಗಿರಲಿಲ್ಲ. ನಿಧಾನಕ್ಕೆ ಕ್ಲೋಸ್ ಆಗುತ್ತಾ ಬಂದಿದ್ದೇವೆ. ಇವರು ಫ್ರೆಂಡ್ಲಿ ಹಾಗೂ ಓಪನ್ ಹಾರ್ಟೆಡ್ ಪರ್ಸನ್ ಎಂದು ನನಗೆ ಅರ್ಥವಾಯಿತು. ಇಂತಹ ವ್ಯಕ್ತಿತ್ವ ಇರುವ ವ್ಯಕ್ತಿಯನ್ನು ಚಿತ್ರರಂಗದಲ್ಲಿ ನೋಡುವುದು ಅಪರೂಪ ಎನ್ನಿಸಿತ್ತು. ಹಾಗಾಗಿ ನಾನು ಅವರನ್ನು ಇಷ್ಟಪಟ್ಟಿದ್ದೇನೆ. ನಮ್ಮ ಮದುವೆಯಾದಾಗ ಅವರಿಗೆ 39 ವರ್ಷವಾಗಿತ್ತು. ಒಮ್ಮೆ ಮದುವೆಯಾಗಲಿ. ಇವರು ಮದುವೆಯಾದರೆ ಸಾಕು ಎಂದು ಅವರ ತಾಯಿ ಹೇಳುತ್ತಿದ್ದರು. ನಮಗೆ ಗಂಡು ಮಗು ಆಗುತ್ತೆ ಎಂದು ಅವರ ತಾಯಿ ಹೇಳುತ್ತಿದ್ದರು. ಅಂಬರೀಶ್ ಮಗುವನ್ನು ನೋಡಿದ ಮೇಲೆ ನಾನು ನಿಧನರಾಗಬೇಕು ಎಂದು ಅವರ ತಾಯಿಯ ಆಸೆ ಆಗಿತ್ತು. ಕೊನೆಗೆ ಅದೇ ರೀತಿ ಆಯಿತು ಎಂದು ಸುಮಲತಾ ತಿಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *