ಇಮ್ರಾನ್ ವಿರುದ್ಧ ಬೇಹುಗಾರಿಕೆಗೆ ಪ್ರಯತ್ನಿಸಿದವ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ

Public TV
1 Min Read

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಬೇಹುಗಾರಿಕೆಗೆ ಪ್ರಯತ್ನಿಸಿದ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಮ್ರಾನ್ ಖಾನ್ ನಿವಾಸದಲ್ಲಿ ಉದ್ಯೋಗಿಯೊಬ್ಬ ಗೂಢಾಚಾರಿಕೆ ಸಾಧನವನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮಾಜಿ ಪ್ರಧಾನಿ ಮಲಗುವ ಕೋಣೆಯಲ್ಲಿ ಗೂಢಾಚಾರಿಕೆ ಸಾಧನವನ್ನು ಅಳವಡಿಸಲು ಉದ್ಯೋಗಿಯೊಬ್ಬರಿಗೆ ಹಣ ನೀಡಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ತಿಳಿದ ಇನ್ನೊಬ್ಬ ಉದ್ಯೋಗಿ ಗೂಢಾಚಾರಿಕೆ ಬಗ್ಗೆ ಭದ್ರತಾ ತಂಡಕ್ಕೆ ತಿಳಿಸಿದ್ದಾನೆ. ಈ ಮೂಲಕ ಬೇಹುಗಾರಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಪಕ್ಷಿ ಬಡಿದು ಎಮರ್ಜನ್ಸಿ ಲ್ಯಾಂಡಿಂಗ್

ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್(ಪಿಟಿಐ) ಅಧ್ಯಕ್ಷನನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ವದಂತಿಯ ಮಧ್ಯೆಯೇ ಈ ಘಟನೆ ನಡೆದಿದೆ. ಇದಕ್ಕೂ ಮೊದಲು ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ನಗರದ ಬನಿ ಗಲಾದ ಅಕ್ಕಪಕ್ಕದ ಪ್ರದೇಶಗಳಲ್ಲಿ ಭದ್ರತಾ ಪಡೆಗಳಿಗೆ ಹೈ ಅಲರ್ಟ್ ನೀಡಲಾಗಿತ್ತು. ಇದನ್ನೂ ಓದಿ: ದಯವಿಟ್ಟು ಸಹಾಯ ಮಾಡೋದನ್ನ ನಿಲ್ಲಿಸಬೇಡಿ- ಅಮೆರಿಕಾಗೆ ತಾಲಿಬಾನ್ ಬೇಡಿಕೆ

ಘಟನೆ ಬಗ್ಗೆ ಮಾಹಿತಿ ನೀಡಿದ ಪಿಟಿಐ ನಾಯಕ ಶೆಹಬಾಜ್ ಗಿಲ್, ಮಾಜಿ ಪ್ರಧಾನಿ ಕೊಠಡಿ ಸ್ವಚ್ಛಗೊಳಿಸುವ ಉದ್ಯೋಗಿಯೊಬ್ಬ ಗೂಢಾಚಾರಿಕೆ ಸಾಧನವನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದ. ಅವನಿಗೆ ಈ ಕೃತ್ಯ ನಡೆಸಲು ಹಣ ನೀಡಲಾಗಿದೆ. ಆರೋಪಿಯನ್ನು ಬನಿ ಗಾಲಾ ಭದ್ರತಾ ತಂಡ ಬಂಧಿಸಿದ್ದು, ಫೆಡರಲ್ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *