ನನಗೂ ನನ್ನ ಪತ್ನಿಗೂ ಏನಾದ್ರು ಆದ್ರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥನೇ ಕಾರಣ: ಇಮ್ರಾನ್‌ ಖಾನ್‌ ಹೇಳಿಕೆ

Public TV
2 Min Read

– ಜೈಲಲ್ಲಿ ಉಗ್ರರನ್ನೇ ಚೆನ್ನಾಗಿ ನಡೆಸಿಕೊಳ್ಳಲಾಗುತ್ತಿದೆ: ಮಾಜಿ ಪ್ರಧಾನಿ ಆರೋಪ

ಇಸ್ಲಾಮಾಬಾದ್: ನನಗೂ ನನ್ನ ಪತ್ನಿಗೂ ಏನಾದರು ಆದರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥ ಫೀಲ್ಡ್ ‌ಮಾರ್ಷಲ್‌ ಅಸಿಮ್‌ ಮುನೀರ್ (Asim Munir) ಕಾರಣ ಎಂದು‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ತಿಳಿಸಿದ್ದಾರೆ.

ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಜೈಲಿನಲ್ಲಿ ನಾನು ಎದುರಿಸುತ್ತಿರುವ ಕಠಿಣ ಪರಿಸ್ಥಿತಿ ತೀವ್ರಗೊಂಡಿದೆ. ನನ್ನ ಪತ್ನಿ ಬುಷ್ರಾ ಬೀಬಿ ಪರಿಸ್ಥಿತಿಯೂ ಇದೇ ಆಗಿದೆ. ಅವರ ಸೆಲ್‌ನಲ್ಲಿರುವ ದೂರದರ್ಶನವನ್ನು ಸಹ ಆಫ್ ಮಾಡಲಾಗಿದೆ. ಮಾನವ ಮತ್ತು ಕಾನೂನುಬದ್ಧವಾಗಿ ಕೈದಿಗಳಿಗೆ ನೀಡಲಾದ ಎಲ್ಲಾ ಮೂಲಭೂತ ಹಕ್ಕುಗಳನ್ನು ನಮ್ಮಿಬ್ಬರಿಂದ ಕಸಿದುಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 80,000 ನಗ್ನ ಫೋಟೋಸ್‌, ಸೆಕ್ಸ್‌ ಮಾಡಿ ಬೌದ್ಧ ಬಿಕ್ಕುಗಳ ಟ್ರ್ಯಾಪ್‌ – 100 ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅರೆಸ್ಟ್‌

ಅಸಿಮ್‌ ಮುನೀರ್‌ ಆದೇಶದ ಮೇರೆಗೆ ಕರ್ನಲ್‌ ಮತ್ತು ಜೈಲು ಸೂಪರಿಂಟೆಂಡೆಂಟ್‌ ಈ ಕ್ರಮ ಕೈಗೊಳ್ಳುತ್ತಿದ್ದಾರೆ. ಉಗ್ರರನ್ನೇ ಉತ್ತಮವಾಗಿ ನಡೆಸಿಕೊಳ್ಳಲಾಗುತ್ತಿದೆ. ನನಗೆ ಮತ್ತು ನನ್ನ ಪತ್ನಿಗೆ ಏನಾದರು ಸಂಭವಿಸಿದರೆ, ಅದಕ್ಕೆ ಸೇನಾ ಮುಖ್ಯಸ್ಥನೇ ಕಾರಣ ಎಂದು ಇಮ್ರಾನ್‌ ಖಾನ್‌ ತನ್ನ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ನಾನು ನನ್ನ ಪಕ್ಷಕ್ಕೆ ಸ್ಪಷ್ಟ ಸೂಚನೆಗಳನ್ನು ನೀಡುತ್ತೇನೆ. ಜೈಲಿನಲ್ಲಿ ನನಗೆ ಏನಾದರೂ ಆದರೆ, ಅಸಿಮ್ ಮುನೀರ್ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ನನ್ನ ಇಡೀ ಜೀವನವನ್ನು ಜೈಲಿನಲ್ಲಿ ಕಳೆಯಲು ನಾನು ಸಿದ್ಧನಿದ್ದೇನೆ. ಈ ದಬ್ಬಾಳಿಕೆ ಮುಂದೆ ತಲೆಬಾಗುವ ಪ್ರಶ್ನೆಯೇ ಇಲ್ಲ. ಪಾಕಿಸ್ತಾನದ ಜನರಿಗೆ ನನ್ನ ಸಂದೇಶ ಒಂದೇ. ಯಾವುದೇ ಸಂದರ್ಭದಲ್ಲೂ ದಬ್ಬಾಳಿಕೆಯ ವ್ಯವಸ್ಥೆಗೆ ಎಂದಿಗೂ ಒಳಗಾಗಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯ ಹೊಣೆ ಹೊತ್ತಿದ್ದ ಟಿಆರ್‌ಎಫ್‌ನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದ ಅಮೆರಿಕ

72 ವಯಸ್ಸಿನ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್‌ ಖಾನ್‌ ಅವರು ಪಾಕಿಸ್ತಾನದ ಅಡಿಯಾಲಾ ಜೈಲಿನಲ್ಲಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಖಾನ್ ಅವರ ಸಹೋದರಿ ಅಲೀಮಾ ಖಾನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.

Share This Article