‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ತಂಡದಿಂದ ಮಹತ್ವದ ವಿಷಯ ಘೋಷಣೆ

Public TV
1 Min Read

ಳಪತಿ ವಿಜಯ್ ನಟನೆಯ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (The greatest of all time) ಸಿನಿಮಾ ಟೀಮ್ ನಿಂದ ಮಹತ್ವದ ವಿಷಯವೊಂದು ಆಚೆ ಬಂದಿದೆ. ಈ ಸಿನಿಮಾವನ್ನು ಸೆಪ್ಟೆಂಬರ್ 5ರಂದು ಬಿಡುಗಡೆ ಮಾಡುವುದಾಗಿ ತಿಳಿದು ಬಂದಿದೆ. ಎಲ್ಲ ಸಿನಿಮಾಗಳನ್ನು ಮುಗಿಸಿ, ತಮಿಳು ನಾಡು ಚುನಾವಣೆ ವಿಜಯ್ ಸಿದ್ಧರಾಗಬೇಕಾಗಿದ್ದರಿಂದ ಸಿನಿಮಾ ಸಂಬಂಧಿ ಬಹುತೇಕ ಕೆಲಸವನ್ನು ಮುಗಿಸುತ್ತಿದ್ದಾರಂತೆ ನಟ.

ಈ ಸಿನಿಮಾದ ಶೂಟಿಂಗ್ ಗಾಗಿ ಮೊನ್ನೆಯಷ್ಟೇ ವಿಜಯ್ ಕೇರಳಕ್ಕೆ ಬಂದಿದ್ದು, ತಮಿಳಿಗಿಂತಲೂ ಕೇರಳದಲ್ಲಿ ವಿಜಯ್ ಅವರಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ. ವಿಜಯ್ ಸಿನಿಮಾ ರಿಲೀಸ್ ಆದಾಗೆಲ್ಲ ಕೇರಳಾದ್ಯಂತ ವಿಜಯ್ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಆದರೂ, 14 ವರ್ಷಗಳ ಕಾಲ ಅವರು ಕೇರಳಕ್ಕೆ ಕಾಲಿಟ್ಟಿರಲಿಲ್ಲ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ಬಂದಿದ್ದರು.

ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್  ಚಿತ್ರಕ್ಕೆ ವೆಂಕಟ್ ಪ್ರಭು (Venkat Prabhu) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಸರಾ ಹಬ್ಬದ (ಅ.24) ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಚಿತ್ರದ ದೊಡ್ಡ ತಾರಾ ಬಳಗ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.

 

ದಳಪತಿ ವಿಜಯ್ ಜೊತೆ ಬಹುಭಾಷಾ ನಟ ಕನ್ನಡಿಗ ಪ್ರಭುದೇವ (Prabhudeva), ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು (Yogi Babu) ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿಯೂ ಅವರೆಲ್ಲ ಭಾಗಿಯಾಗಿದ್ದರು.

Share This Article