– ಗಂಡನ ಬಿಟ್ಟು ಲಿವ್ ಇನ್‌ನಲ್ಲಿದ್ದ ಎರಡು ಮಕ್ಕಳ ತಾಯಿ
ಬೆಂಗಳೂರು: ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಪ್ರಿಯಕರ 9 ಬಾರಿ ಚಾಕು ಇರಿದು ಲಿವ್ ಇನ್ ಗೆಳತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಸುಂಕದ ಕಟ್ಟೆಯಲ್ಲಿ (Sunkadakatte) ನಡೆದಿದೆ.
ಆರೋಪಿ ಲೋಕೇಶ್ ತುಮಕೂರು ಜಿಲ್ಲೆಯ ಶಿರಾ ಮೂಲದ ರೇಖಾ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆ ಗಂಡನನ್ನು ಬಿಟ್ಟು ಎರಡು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.ಇದನ್ನೂ ಓದಿ: 4 ಸಲ ಸತ್ತೇ ಹೋಗ್ತಿದ್ದೆ, ದೈವ ನನ್ನನ್ನ ಬದುಕಿಸಿದೆ – ರಿಷಬ್ ಶೆಟ್ಟಿ ಭಾವುಕ
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಮೃತ ರೇಖಾಗೆ ಆರೋಪಿ ಲೋಕೇಶ್ ಪರಿಚಯವಾಗಿತ್ತು. ಸಲುಗೆ ಬೆಳೆದು ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಬಳಿಕ ರೇಖಾ ತಮ್ಮ ಕಂಪನಿಯಲ್ಲಿಯೇ ಲೋಕೇಶ್‌ಗೆ ಡ್ರೈವರ್ ಆಗಿ ಕೆಲಸ ಕೊಡಿಸಿದ್ದರು. ಅದಾದ ಬಳಿಕ ನಾಲ್ಕು ತಿಂಗಳ ಕಾಲ ಇಬ್ಬರು ಲಿವಿಂಗ್ ಟುಗೇದರ್‌ನಲ್ಲಿದ್ದರು. ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಸ್ವಲ್ಪ ದಿನಗಳ ಬಳಿಕ ಲೋಕೇಶ್‌ಗೆ ರೇಖಾ ಮೇಲೆ ಅನುಮಾನ ಶುರುವಾಗಿತ್ತು. ಅನೈತಿಕ ಸಂಬಂಧವಿದೆ ಎಂದು ಶಂಕಿಸಿ, ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಇಬ್ಬರು ಬೇರೆಯಾಗಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಲೋಕೇಶ್ ರೇಖಾಳನ್ನು ಭೇಟಿಯಾಗಿ ಪ್ರಯತ್ನ ಪಟ್ಟಿದ್ದ. ಆದರೆ ಸೋಮವಾರ (ಸೆ.22) ಮಾಗಡಿ ರಸ್ತೆಯ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ಲೋಕೇಶ್ ರೇಖಾಗಾಗಿ ಕಾಯುತ್ತಿದ್ದ. ಆಕೆ ತನ್ನ ಮಗಳ ಜೊತೆಗೆ ಬರುತ್ತಿದ್ದಂತೆ ಸಾರ್ವಜನಿಕರ ಮಧ್ಯದಲ್ಲಿಯೇ 9 ಬಾರಿ ಚಾಕು ಇರಿದು ಪರಾರಿಯಾಗಿದ್ದಾನೆ.
ಕೂಡಲೇ ಸ್ಥಳೀಯರು ರೇಖಾಳನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾದೇ ಸಾವನ್ನಪ್ಪಿದ್ದಾಳೆ.ಇದನ್ನೂ ಓದಿ: ಪಂಡಿತ್ ವೆಂಕಟೇಶ್ ಕುಮಾರ್‌ಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ