ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿರುವ ಬೈರತಿ ಸುರೇಶ್‌ರನ್ನು ಕೂಡಲೇ ಬಂಧಿಸಿ – ಶೋಭಾ ಕರಂದ್ಲಾಜೆ

Public TV
1 Min Read

ಬೆಂಗಳೂರು: ಬೈರತಿ ಸುರೇಶ್ (Byrathi Suresh) ಮುಡಾ (MUDA) ಫೈಲ್‌ಗಳನ್ನು ಸುಟ್ಟು ಹಾಕಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ತನಿಖಾ ಸಂಸ್ಥೆಗಳು ಬಂಧನ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಆಗ್ರಹಿಸಿದ್ದಾರೆ.ಇದನ್ನೂ ಓದಿ: ಟರ್ಫ್‌ ಕ್ಲಬ್‌ ಮೆಂಬರ್‌ಶಿಪ್‌ ಕೊಡಿಸಲು ಸಿದ್ದರಾಮಯ್ಯ 1.30 ಕೋಟಿ ಲಂಚ ತಗೊಂಡಿದ್ದಾರೆ: ಶೋಭಾ ಕರಂದ್ಲಾಜೆ ಆರೋಪ

ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯರನ್ನು (CM Siddaramaiah) ರಕ್ಷಿಸಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರಯತ್ನ ಮಾಡುತ್ತಿದ್ದಾರೆ. ಮುಡಾದ ಎಲ್ಲಾ ಫೈಲ್‌ಗಳನ್ನು ತಂದು ಸುರೇಶ್ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಡಾದ ಫೈಲ್‌ಗಳನ್ನು ಸುರೇಶ್ ತಂದಿರುವುದು ಸತ್ಯ. ಫೈಲ್‌ಗಳನ್ನು ಸುಟ್ಟಿರುವುದು ಸತ್ಯ. ಮುಡಾ ಫೈಲ್‌ಗಳನ್ನು ಗಾಯಬ್ ಮಾಡಿದ್ದಾರೆ ಎಂದು ನಮಗೆ ಮಾಹಿತಿ ಲಭಿಸಿದೆ. ಹೀಗಾಗಿ ಕೂಡಲೇ ಬೈರತಿ ಸುರೇಶ್‌ನ್ನು ಬಂಧನ ಮಾಡಿದರೆ ಎಲ್ಲಾ ಮಾಹಿತಿ ಹೊರಗೆ ಬರುತ್ತದೆ. ಫೈಲ್ ಎಲ್ಲಿ ಹೋಯಿತು? ಎಲ್ಲಿ ಸುಟ್ಟು ಹಾಕಿದರು? ಎನ್ನುವ ಎಲ್ಲಾ ಸತ್ಯ ಹೊರಗೆ ಬರುತ್ತದೆ. ಹೀಗಾಗಿ ಕೂಡಲೇ ಬೈರತಿ ಸುರೇಶ್ ಬಂಧನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ನಾಗಸಂಧ್ರ to ಮಾದಾವರ ಮೆಟ್ರೋ ಉದ್ಘಾಟನೆ ಸಿದ್ಧತೆಗೆ ಬಿಬಿಎಂಪಿಗೆ ಪತ್ರ

Share This Article