ಮಡಿಕೇರಿ: ಬಡಜನರು ಅರಣ್ಯದಂಚಿನ ಪ್ರದೇಶಗಳಲ್ಲಿ (Forest Area) ಸಣ್ಣ ಸೂರು ಕಟ್ಟಿದ್ರೂ ಅಧಿಕಾರಿಗಳು ನೆಲಸಮ ಮಾಡಿಬಿಡ್ತಾರೆ. ಆದ್ರೆ ಪ್ರಭಾವಿಗಳು ತಮ್ಮಿಷ್ಟದಂತೆ ಫಾರ್ಮ್‌ಹೌಸ್ ಕಟ್ಟಿದ್ದರೂ ಕಣ್ಣಿದ್ದೂ ಕುರುಡರಾಗ್ತಾರೆ. ವಸತಿ ಸಚಿವರ ವೈಯಕ್ತಿಕ ಕಾರ್ಯದರ್ಶಿ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿರೋದೇ ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಹೌದು. ವಸತಿ ಸಚಿವರ ಪಿಎಸ್ (ವೈಯಕ್ತಿಕ ಕಾರ್ಯದರ್ಶಿ) ಸರ್ಫರಾಜ್ ಖಾನ್ ಅವರು ನಿರ್ಮಿಸಿರುವ ಐಷಾರಾಮಿ ರೆಸಾರ್ಟ್‌ಗೆ ಯಾವುದೇ ಇಲಾಖೆಯ ಅನುಮತಿ ಪಡೆದಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಮಡಿಕೇರಿ (Madikeri) ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ವಣಚಲಿನಲ್ಲಿ ರೆಸಾರ್ಟ್ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವ್ರು ದೇವರಾಜ ಅರಸು ಆಗಲು ಸಾಧ್ಯವಿಲ್ಲ: ಪ್ರತಾಪ್ ಸಿಂಹ
ಅರಣ್ಯಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಮಾಡಬೇಕಿದ್ದರೆ, ಭೂಮಿಯನ್ನ ಮೊದಲು ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಬೇಕು. ಅದಕ್ಕೂ ಮುನ್ನ ಪಂಚಾಯ್ತಿ, ಪಂಚಾಯಿತಿ, ಅರಣ್ಯ, ಪರಿಸರ ಮಾಲಿನ್ಯ ಹಾಗೂ ಕಂದಾಯ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಆದರೆ ಇಲ್ಲಿ ಭೂ ಪರಿವರ್ತನೆಯೇ ಮಾಡದೇ, ಯಾವುದೇ ಇಲಾಖೆಗಳ ಅನುಮತಿಯನ್ನೂ ಪಡೆಯದೇ ರೆಸಾರ್ಟ್ ನಿರ್ಮಿಸಲಾಗುತ್ತಿದೆ. ಹೀಗಾಗಿ ಕೊಡಗಿನ ಜನರು ಸಚಿವರ ಪಿಎಸ್ ಸರ್ಫರಾಜ್ ಖಾನ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಆದಾಯ ತೆರಿಗೆ ಪಾವತಿ – ರಶ್ಮಿಕಾ ಮಂದಣ್ಣ ನಂಬರ್ 1
ಪುಷ್ಪಗಿರಿ ವನ್ಯಧಾಮ ಪರಿಸರ ಸೂಕ್ಷ್ಮ ವಲಯವಾಗಿದೆ. ನಿಯಮದ ಪ್ರಕಾರ ವನ್ಯಧಾಮದ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಬೃಹತ್ ಕಟ್ಟಡ ನಿರ್ಮಿಸುವಂತಿಲ್ಲ. ಅದಕ್ಕಿಂತ ಮುಖ್ಯವಾಗಿ ಈ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಮಾಡೋದಕ್ಕೇ ಅವಕಾಶ ಇಲ್ಲ. ಆದರೆ ಪರಿಸರ ಸೂಕ್ಷ್ಮ ವಲಯದಿಂದ 540 ಮೀಟರ್ ಅಂತರದಲ್ಲಿ ರೆಸಾರ್ಟ್ ನಿರ್ಮಾಣ ಮಾಡಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಆದಿಕಾರಿಗಳು ತನಿಖೆ ನಡೆಸಬೇಕು ಇಲ್ಲದೇ ಹೋದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಪರಿಸರ ಪ್ರೇಮಿಗಳು ಎಚ್ಚರಿಸಿದ್ದಾರೆ.
ತಹಶೀಲ್ದಾರ್ ಹೇಳಿದ್ದೇನು?
ರೆಸಾರ್ಟ್ ಅಕ್ರಮ ನಿರ್ಮಾಣದ ಬಗ್ಗೆ ಮಡಿಕೇರಿ ತಹಶಿಲ್ದಾರ್ ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿದ್ದು, ಸರ್ಫರಾಜ್ ಖಾನ್ ಅವರು ಫಾರ್ಮ್ ಹೌಸ್‌ಗೆಂದು ಅನುಮತಿ ಪಡೆದಿದ್ದಾರೆ. 2023ರ ಡಿಸೆಂಬರ್ 12 ರಂದು ಅನುಮತಿ ನೀಡಿದೇವೆ ಎಂದಿದ್ದಾರೆ. ಇದನ್ನೂ ಓದಿ: ರೀಲ್ಸ್ ಮಾಡಿ ಕೋಟಿ ರೂಪಾಯಿ ಬಹುಮಾನ ಗೆಲ್ಲಿ – ‘ಕೊರಗಜ್ಜ’ ಚಿತ್ರತಂಡದ ಆಫರ್‌ಗೆ ದೈವ ನರ್ತಕರ ಆಕ್ರೋಶ
ಫಾರ್ಮ್‌ಹೌಸ್ ನಿರ್ಮಿಸಬೇಕಾದರೂ ಕೆಲವು ನಿಯಮಗಳಿವೆ. ತಮ್ಮ ಹೆಸರಿನಲ್ಲಿರುವ ಒಟ್ಟು ಭೂಮಿಯಲ್ಲಿ 10% ಮಾತ್ರವೇ ಫಾರ್ಮ್ ಹೌಸ್ ನಿರ್ಮಿಸಲು ಬಳಸಬಹುದು. ಆದರೆ ಇವರು ಆ ವಿಸ್ತೀರ್ಣಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣ ಜೊತೆಗೆ ಅದರ ಮುಂಭಾಗದಲ್ಲಿಯೇ ಬೃಹತ್ ಪ್ರಮಾಣದ ಈಜುಕೊಳ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧಿಸೂಚನೆಯಲ್ಲಿ ಇರುವಂತೆ ಇದು ಪರಿಸರ ಸೂಕ್ಷ್ಮ ವಲಯ ಪುಷ್ಪಗಿರಿ ವನ್ಯಧಾಮ ಪರಿಸರ ಸೂಕ್ಷ್ಮ ವಲಯವಾಗಿದೆ. ಇದು ಗೊತ್ತಾದ ಬಳಿಕ 2025 ರ ಮೇ 8 ರಂದು ಮೊದಲು ಗ್ರಾಮ ಆಡಳಿತಾಧಿಕಾರಿಯಿಂದ ಸ್ಥಳ ಪರಿಶೀಲನೆ ಮಾಡಿಸಿದೇವೆ. ಸ್ಥಳ ಪರಿಶೀಲಿಸಿ ತಹಶೀಲ್ದಾರರಿಗೆ ವರದಿ ಸಲ್ಲಿಸಿದ್ರು ಎಂದು ಮಾಹಿತಿ ನೀಡಿದ್ದಾರೆ.
ಈ ವರದಿ ಆಧಾರದಲ್ಲಿ 2025 ರ ನವೆಂಬರ್ 26 ರಂದು ಸರ್ಫರಾಜ್ ಖಾನ್ ಅವರಿಗೆ ನೋಟಿಸ್ ನೀಡಲು ಮುಂದಾಗಿದೇವು. ಆದರೆ ಸ್ಥಳದಲ್ಲಿ ಸರ್ಫರಾಜ್ ಇಲ್ಲದ ಹಿನ್ನಲೆ ನೊಟೀಸ್ ಚುಟುಕಾಸಿ ಬರಲಾಗಿತ್ತು. ಹೀಗೆ ಚುಟುಕಾಸಿದ ನಂತರ 10 ದಿನಗಳಲ್ಲಿ ಸರ್ಫರಾಜ್ ಖಾನ್ ಅವರು ಉತ್ತರಿಸಬೇಕಾಗಿತ್ತು ಚುಟುಕಾಸಿ ಒಂದು ತಿಂಗಳ ಮೇಲೆ 12 ದಿನಗಳಾಗಿದ್ದರೂ ಇಂದಿಗೂ ಉತ್ತರಿಸಿಲ್ಲ. ಹೀಗಾಗಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಮತ್ತೊಂದು ನೋಟಿಸ್ ನೀಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ರು.




